ʻಬಿಗ್ ಬಾಸ್ʼ ಮನೆಯಲ್ಲಿ 2ನೇ ಬಾರಿಗೆ ಭಾವುಕರಾಗಿ ಕಣ್ಣೀರಿಟ್ಟ ರಘು; ರಕ್ಷಿತಾ ಶೆಟ್ಟಿ ಪ್ರಬುದ್ಧತೆಗೆ ಕಿಚ್ಚ ಸುದೀಪ್ ಬಹುಪರಾಕ್!
Bigg Boss Kannada Season 12: ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ ಮನೆಯಲ್ಲಿ ಭಾವನಾತ್ಮಕ ಕ್ಷಣಗಳು ಎದುರಾಗಿವೆ. 'ಸೂಪರ್ ಸಂಡೇ' ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ ತಮ್ಮ 'ಉತ್ತಮ' ಮೆಡಲ್ ಅನ್ನು ರಘುಗೆ ನೀಡುವ ಮೂಲಕ ಎಲ್ಲರ ಮನಗೆದ್ದರು. ಇದನ್ನು ಕಂಡು ರಘು ಭಾವುಕರಾದರು.
-
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಮನೆ ಈಗ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಹೌದು, ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಸಂಚಿಕೆಯಲ್ಲಿ ಅಂತಹದ್ದೊಂದು ವಾತಾವರಣ ಕ್ರಿಯೆಟ್ ಆಗಿತ್ತು. ಸುದೀಪ್ ಅವರು ಸ್ಪರ್ಧಿಗಳು ಉಡುಗೊರೆಗಳ ವಿನಿಮಯ ಮಾಡಿಕೊಳ್ಳುವಂತೆ ಹೇಳಿದರು. ಆಗ ಒಬ್ಬೊಬ್ಬರು ತಮಗೆ ಇಷ್ಟವಾದವರಿಗೆ ಒಂದೊಂದು ಗಿಫ್ಟ್ ನೀಡಿದರು. ಈ ವೇಳೆ ರಕ್ಷಿತಾ ಶೆಟ್ಟಿ ನಡೆ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತು.
ರಘುಗೆ ಉತ್ತಮ ಪಟ್ಟ
ರಘು ಅವರಿಗೆ ರಕ್ಷಿತಾ ನೀಡಿದ ಉಡುಗೊರೆ ಎಲ್ಲರಿಗೂ ಶಾಕ್ ನೀಡಿತು. ಯಾಕೆಂದರೆ, ರಕ್ಷಿತಾ ತಮ್ಮಲ್ಲಿದ್ದ ಉತ್ತಮ ಮೆಡಲ್ ಅನ್ನು ರಘುಗೆ ನೀಡಿದರು. ಕಳೆದ ವಾರ ಅಶ್ವಿನಿಗೆ ಉತ್ತಮ ಸಿಕ್ಕಿತ್ತು. ಆಗ ರಘು, "ನನಗೆ ಒಂದು ವಾರ ಕೂಡ ಉತ್ತಮ ಬಂದಿಲ್ಲ. ನನಗೆ ಉತ್ತಮ ಕೊಟ್ಟಿಲ್ಲ. ನಾನು ದಿವಸ ಅಡುಗೆ ಮಾಡ್ತಿದ್ದೆ. ಟಾಸ್ಕ್ ಚೆನ್ನಾಗಿ ಆಡುತ್ತಿದ್ದೆ. ಆದರೆ ಯಾರೂ ಹೇಳಲ್ಲ. ಅದೇ ಮಧ್ಯೆದಲ್ಲಿ ತಪ್ಪು ಮಾಡಿದ್ರೆ ಹಿಡಿತಾರೆ" ಎಂದು ಬೇಸರ ಮಾಡಿಕೊಂಡಿದ್ದರು. ಆ ಮಾತು ಹೇಳುವಾಗ ಅಲ್ಲಿ, ರಕ್ಷಿತಾ ಕೂಡ ಇದ್ದರು. ಇದೀಗ ರಘುಗೆ ತಮ್ಮಲ್ಲಿದ್ದ ಉತ್ತಮ ಮೆಡಲ್ ಅನ್ನು ನೀಡಿದ್ದಾರೆ.
Bigg Boss Kannada 12: ಧ್ರುವಂತ್ ತುಂಬಾ ಪಾಪ, ಕೆಟ್ಟ ಮನುಷ್ಯ ಅಲ್ಲ; ರಕ್ಷಿತಾ ಶೆಟ್ಟಿಗೆ ಮೂಡಿದೆ ಅನುಕಂಪ
ಭಾವುಕರಾದ ರಘು
ರಘು ಅವರು ನನಗೆ ಅಣ್ಣ ಇದ್ದಂತೆ, ನಾನು ಇಲ್ಲಿಂದ ಹೊರಗೆ ಹೋದಮೇಲೂ ಅವರು ನನ್ನೊಂದಿಗೆ ಬೆಂಬಲವಾಗಿ ಇರುತ್ತಾರೆ ಎಂಬ ರಕ್ಷಿತಾ ಮಾತುಗಳನ್ನು ಕೇಳಿದ ಮೇಲೆ ರಘು ಭಾವುಕರಾದರು. "ನನಗೆ ಒಬ್ಬರು ಸಹೋದರಿ ಇದ್ದಾರೆ. ಆದರೆ ನನಗೆ ಅವರೊಂದಿಗೆ ಅಷ್ಟೊಂದು ಕನೆಕ್ಷನ್ ಇಲ್ಲ" ಎಂದು ಹೇಳುತ್ತಲೇ ರಘು ಕಣ್ಣೀರಿಟ್ಟರು. ಆ ಕ್ಷಣ ಮನೆಯ ವಾತಾವರಣವನ್ನು ಎಮೋಷನಲ್ ಮಾಡಿತ್ತು.
ರಕ್ಷಿತಾಗೆ ಸುದೀಪ್ ಮೆಚ್ಚುಗೆ
ತಮ್ಮ ಪ್ರಬುದ್ಧ ನಡೆಯಿಂದ ಗಮನಸೆಳೆದ ರಕ್ಷಿತಾಗೆ ಕಿಚ್ಚ ಸುದೀಪ್ ಅವರು ಕೂಡ ಮೆಚ್ಚುಗೆ ಸೂಚಿಸಿದ್ದರು. "ನೈಸ್.. ಸೋ ಸ್ವೀಟ್ ಸೋ ಸ್ವೀಟ್" ಎಂದು ಹೊಗಳಿದರು. ಅಂದಹಾಗೆ, ರಘುಗೆ ಮೆಡಲ್ ಕೊಟ್ಟು ಗಮನಸೆಳೆದ ರಕ್ಷಿತಾ, ನಂತರ ಮತ್ತೊಬ್ಬರಿಗೆ ಗಿಫ್ಟ್ ನೀಡಿ, ಅಚ್ಚರಿ ಮೂಡಿಸಿದರು. ಹೌದು, ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಮತ್ತು ರಾಶಿಕಾ ನಡುವೆ ಅಷ್ಟೇನೂ ಉತ್ತಮ ಬಾಂಡಿಂಗ್ ಇಲ್ಲ. ಆದರೂ, ರಾಶಿಕಾಗೆ ರಕ್ಷಿತಾ ಗಿಫ್ಟ್ ನೀಡಿ, ಅಚ್ಚರಿ ಮೂಡಿಸಿದರು. "ರಾಶಿಕಾರನ್ನು ನೋಡಿದಾಗ ನನಗೆ ನನ್ನ ತಂಗಿಯನ್ನು ನೋಡಿದಂತೆ ಆಗುತ್ತದೆ. ಅವಳು ಕೂಡ ನನಗೆ ಹೀಗೆ ಇರಿಟೇಟ್ ಮಾಡುತ್ತಾಳೆ" ಎಂದು ಹೇಳುತ್ತಾ ಗಿಫ್ಟ್ ನೀಡಿದರು.