BBK 12: ಈ ವಾರಾಂತ್ಯದಲ್ಲಿ ಅರ್ಧಕ್ಕರ್ಧ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಖಾಲಿ
ಈ ವೀಕೆಂಡ್ನಲ್ಲಿ ಬಿಗ್ ಬಾಸ್ ಕನ್ನಡ 12ರ ಮೊದಲ ಫಿನಾಲೆ ನಡೆಯಲಿದೆ. ಈ ಫಿನಾಲೆಯಲ್ಲಿ ಗೆದ್ದವರಿಗೆ ಏನು ಸಿಗುತ್ತದೆ? ಹಾಗೂ ಸೋತವರ ಗತಿ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ, ಕಿಚ್ಚ ಸುದೀಪ್ ಮಾತ್ರ ಮೂರನೇ ವಾರದ ಅಂತ್ಯದಲ್ಲಿ ಯಾರೂ ಊಹಿಸಿರದ ಟ್ವಿಸ್ಟ್ ಇರಲಿದೆ ಎಂದು ಪದೇ ಪದೇ ಹೇಳುತ್ತಿದ್ದಾರೆ.

Bigg Boss -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಎರಡು ವಾರ ಕಳೆದಿದೆ. ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿರುವ ಶೋನಲ್ಲಿ ಮೊದಲ ಫಿನಾಲೆ ನಡೆಯಲಿದೆ. ಸದ್ಯ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ-ಮಾಳು ಫಿನಾಲೆ ಕಂಟೆಂಡರ್ ಆಗಿದ್ದಾರೆ. ಈ ವಾರದಲ್ಲಿ ಮತ್ತೋರ್ವ ಸ್ಪರ್ಧಿ ಫಿನಾಲೆಗೆ ಕಾಲಿಡಲಿದ್ದಾರೆ. ಬಳಿಕ ವೀಕೆಂಡ್ನಲ್ಲಿ ಮೊದಲ ಫಿನಾಲೆ ನಡೆಯಲಿದೆ. ಈ ಫಿನಾಲೆಯಲ್ಲಿ ಗೆದ್ದವರಿಗೆ ಏನು ಸಿಗುತ್ತದೆ? ಹಾಗೂ ಸೋತವರ ಗತಿ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ, ಕಿಚ್ಚ ಸುದೀಪ್ ಮಾತ್ರ ಮೂರನೇ ವಾರದ ಅಂತ್ಯದಲ್ಲಿ ಯಾರೂ ಊಹಿಸಿರದ ಟ್ವಿಸ್ಟ್ ಇರಲಿದೆ ಎಂದು ಪದೇ ಪದೇ ಹೇಳುತ್ತಿದ್ದಾರೆ.
ಈಗ ಇರುವ 17 ಸ್ಪರ್ಧಿಗಳ ಪೈಕಿ ಅರ್ಧದಷ್ಟು ಮಂದಿ ಔಟ್ ಆಗುವ ಸೂಚನೆಯನ್ನು ಸುದೀಪ್ ಮತ್ತೆ ನೀಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ನಿತ್ಯ ಜಗಳದಲ್ಲೇ ಸಮಯ ಕಳೆಯುತ್ತಿದ್ದಾರೆ. ತಾನೂ ಜಗಳ ಆಡಿದರೆಯೇ ಕ್ಯಾಮೆರಾದಲ್ಲಿ ಕಾಣಿಸುವುದು ಹಾಗೂ ಉಳಿದುಕೊಳ್ಳುವುದು ಎಂಬ ಭ್ರಮೆಯಲ್ಲಿ ಇನ್ನೂ ಸ್ಪರ್ಧಿಗಳಿದ್ದಾರೆ. ಯಾರೊಬ್ಬರೂ ಆಟವನ್ನು ಸರಿಯಾಗಿ ಆರಂಭಿಸಿಲ್ಲ ಎಂಬುದು ಸುದೀಪ್ ಅಭಿಪ್ರಾಯ.
‘ಬಿಗ್ ಬಾಸ್ ಫಿನಾಲೆ ನಡೆಯೋಕೆ ಒಂದೇ ವಾರ ಇದೆ. ಈ ಫಿನಾಲೆಯಲ್ಲಿ ಅರ್ಧದಷ್ಟು ಮಂದಿ ಔಟ್ ಆಗಬುದು’ ಎಂದು ಸುದೀಪ್ ಮತ್ತೆ ವೀಕೆಂಡ್ನಲ್ಲಿ ಎಚ್ಚರಿಸಿದ್ದಾರೆ. ‘‘ಮುಂದಿನ ವಾರ (ಅಂದರೆ ಈ ವಾರ) ಮೊದಲ ಫಿನಾಲೆ ವೀಕ್. ಮಾಸ್ ಎವಿಕ್ಷನ್ ಆಗುತ್ತೆ ಕೇರ್‌ಫುಲ್ ಆಗಿರಿ. ನೀವೆಲ್ಲರೂ ಪ್ರಿಪೇರ್ ಆಗಿರಿ, ಬೆಸ್ಟ್ ಎಫರ್ಟ್ ಹಾಕಿ. ಫೈನಲಿಸ್ಟ್ ಆದ ಎರಡು ಒಂಟಿ - ಕಾಕ್ರೋಚ್ ಸುಧಿ, ಅಶ್ವಿನಿ ಗೌಡ. ಜಂಟಿ - ಮಾಳು ನಿಪನಾಳ-ಸ್ಪಂದನಾ ಸೋಮಣ್ಣ, ನಿಮಗೆ ಇಮ್ಯೂನಿಟಿ ಇದೆ. ಇನ್ಯಾರೂ ಸೇಫ್ ಇಲ್ಲ’’ ಎಂದು ಹೇಳಿದ್ದಾರೆ ಸುದೀಪ್.
ಈ ಮೊದಲು ಕೂಡ ಸುದೀಪ್ ಈ ಬಗ್ಗೆ ಪರೋಕ್ಷವಾಗಿ ಹೇಳಿದ್ದರು. ಔಟ್ ಆದವರ ಜಾಗಕ್ಕೆ ಬರೋಕೆ ಮತ್ತೊಂದು ಬ್ಯಾಚ್ ರೆಡಿ ಇದೆ ಎಂದು ಹೇಳಿದ್ದರು. ಇದನ್ನೆಲ್ಲ ಗಮನಿಸಿದರೆ ಫಿನಾಲೆಯಲ್ಲಿ ಒಂದಷ್ಟು ಮಂದಿ ಔಟ್ ಆಗೋದು ಪಕ್ಕಾ ಎನ್ನಲಾಗುತ್ತಿದೆ.
BBK 12: ಬಿಗ್ ಬಾಸ್ ಮನೆಯಲ್ಲಿ ಮುಂದುವರೆದ ಜಗಳ: ಧ್ರುವ್-ಸ್ಪಂದನಾ ನಡುವೆ ಫೈಟ್
ಈ ವಾರಾಂತ್ಯದಲ್ಲಿ ಬಿಗ್ ಬಾಸ್ನಲ್ಲಿ ಮಾಸ್ ಎಲಿಮಿನೇಷನ್ ನಡೆಯುವುದು ಬಹುತೇಕ ಖಚಿತ. ಮನೆ ಅರ್ಧಕರ್ಧ ಖಾಲಿ ಆಗಲಿದೆ. ಎಷ್ಟು ಮಂದಿ ಸ್ಪರ್ಧಿಗಳು ಹೊರಹೋಗುತ್ತಾರೋ ಅಷ್ಟೇ ಮಂದಿ ಸ್ಪರ್ಧಿಗಳು ಪುನಃ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಡಬಹುದು.
ಈಗ ಇರುವ ಸ್ಪರ್ಧಿಗಳಲ್ಲಿ ಯಾವಾಗ ಬೇಕಾದರೂ, ಯಾರು ಬೇಕಾದರೂ ಎಲಿಮಿನೇಟ್ ಆಗಬಹುದಾಗಿದೆ. ಸ್ಪರ್ಧಿಗಳು ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಬೋದು ಅಥವಾ ಗುಂಪು ಗುಂಪಾಗಿ ಎಲಿಮಿನೇಟ್ ಆಗಬಹುದು ಎಂಬ ಭಯವನ್ನು ಕೂಡ ನೀಡಿದ್ದಾರೆ ಬಿಗ್ ಬಾಸ್.