ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chaithra Kundapura Marriage: ಚೈತ್ರಾ ಕುಂದಾಪುರ ಮದುವೆಗೆ ಉಗ್ರಂ ಮಂಜು ಕೊಟ್ಟ ಗಿಫ್ಟ್ ಏನು ಗೊತ್ತಾ?

ಚೈತ್ರಾ ಕುಂದಾಪುರ ಜೊತೆಯಲ್ಲೇ ಬಿಗ್ ಬಾಸ್ ಮನೆಯಲ್ಲಿದ್ದ ಉಗ್ರಂ ಮಂಜು ಸಹ ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು. ಕೆಲಸದ ಪ್ರಯುಕ್ತ ಮದುವೆ ದಿನ ಮಂಜು ಅವರಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮದುವೆಯ ಮರುದಿನ ಚೈತ್ರಾ ಕುಂದಾಪುರ ಅವರ ಮನೆಗೇ ಉಗ್ರಂ ಮಂಜು ಅವರು ಭೇಟಿ ಕೊಟ್ಟಿದ್ದಾರೆ.

ಚೈತ್ರಾ ಮದುವೆಗೆ ಉಗ್ರಂ ಮಂಜು ಕೊಟ್ಟ ಗಿಫ್ಟ್ ಏನು ಗೊತ್ತಾ?

Chaithra kundapura Marriage Ugramm Manju

Profile Vinay Bhat May 12, 2025 7:27 AM

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ, ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaithra Kundapura) ಅವರ ಮದುವೆ ಮೇ 9 ರಂದು ಶ್ರೀಕಾಂತ್‌ ಕಶ್ಯಪ್‌ ಅವರ ಜೊತೆ ಕುಂದಾಪುರದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ನಡೆದಿದೆ. ಚೈತ್ರಾ ಅವರದ್ದು ಲವ್‌ ಕಮ್ ಅರೇಂಜ್ಡ್‌ ಮ್ಯಾರೇಜ್. ಕಾಲೇಜಿನಲ್ಲಿ ಲವ್‌ ಶುರುವಾಗಿದ್ದು ಎಂಬ ವಿಚಾರವನ್ನು ಚೈತ್ರಾ ಹೇಳಿದ್ದಾರೆ. ಮದುವೆಗೆ ಧನರಾಜ್ ಆಚಾರ್, ಗೋಲ್ಡ್ ಸುರೇಶ್, ರಜತ್ ಕಿಶನ್ ಹಾಗೂ ಅವರ ಪತ್ನಿ ಹಾಜರಿದ್ದರು. ರಜತ್ ಅವರು ಅಣ್ಣನ ಸ್ಥಾನದಲ್ಲಿ ನಿಂತು ಶಾಸ್ತ್ರವನ್ನು ಮಾಡಿದರು.

ಚೈತ್ರಾ ಕುಂದಾಪುರ ಜೊತೆಯಲ್ಲೇ ಬಿಗ್ ಬಾಸ್ ಮನೆಯಲ್ಲಿದ್ದ ಉಗ್ರಂ ಮಂಜು ಸಹ ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು. ಕೆಲಸದ ಪ್ರಯುಕ್ತ ಮದುವೆ ದಿನ ಮಂಜು ಅವರಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮದುವೆಯ ಮರುದಿನ ಚೈತ್ರಾ ಕುಂದಾಪುರ ಅವರ ಮನೆಗೇ ಉಗ್ರಂ ಮಂಜು ಅವರು ಭೇಟಿ ಕೊಟ್ಟಿದ್ದಾರೆ. ಇದಾದ ಬಳಿಕ ನವಜೋಡಿಗೆ ಶುಭ ಹಾರೈಸಿ ವಿಶೇಷವಾದ ಗೋವಿನ ಮೂರ್ತಿಯನ್ನು ಉಡುಗೊರೆ ಕೊಟ್ಟಿದ್ದಾರೆ.

ಬಿಗ್ ​ಬಾಸ್​ ಮನೆಯಲ್ಲಿದ್ದಾಗ ಹೆಚ್ಚಾಗಿ ಹಸು, ಕರು ಅಂತ ಚೈತ್ರಾ ಜಪಿಸುತ್ತಿದ್ದರು. ಅವರಿಗೆ ದನ ಎಂದರೆ ಪಂಚಪ್ರಾಣ. ಹೀಗಾಗಿ ಇದನ್ನೇ ಗಿಫ್ಟ್​ ಆಗಿ ನೀಡಿದ್ದೇನೆ ಅಂತ ಉಗ್ರಂ ಮಂಜು ಹೇಳಿದ್ದಾಳೆ. ಉಗ್ರಂ ಮಂಜು ಕೊಟ್ಟ ಗಿಫ್ಟ್​ ಅನ್ನು ಓಪನ್​ ಮಾಡುತ್ತಿದ್ದಂತೆ ಚೈತ್ರಾ ಕುಂದಾಪುರ ಖುಷಿ​ ಆಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚೈತ್ರಾ ಅವರು ಅವರು ಸಿಂಪಲ್ ಆಗಿ, ಹೆಚ್ಚೆನು ಸುದ್ದಿಯಿಲ್ಲದೆ ಮದುವೆ ಆದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೈತ್ರಾ, ‘‘ನಾವು ಮದುವೆ ಆಗುತ್ತಿರುವ ವಿಚಾರವನ್ನು ಹೆಚ್ಚಿನ ಜನರಿಗೆ ಹೇಳಿರಲಿಲ್ಲ. ತುಂಬಾ ಸೀಕ್ರೆಟ್‌ ಆಗಿ ಇಟ್ಟಿದ್ದೆವು. ಆದರೂ ಅಭಿಮಾನಿಗಳು ತುಂಬಾ ದೂರದ ಊರಿನಿಂದ ಬಂದಿದ್ದೀರಿ. ಶಾಸ್ತ್ರ, ಸಂಪ್ರದಾಯಗಳ ಜೊತೆಗೆ ನಮಗೆ ಸರಳ ವಿವಾಹ ಆಗಬೇಕು ಅನ್ನೋ ಆಸೆ ಇತ್ತು. ಆದರೆ ನಮ್ಮ ಮದುವೆಯ ವಿಚಾರ ಗೊತ್ತಾಗಿ ಸೋಶಿಯಲ್‌ ಮೀಡಿಯಾದಿಂದ ನೋಡಿ ತುಂಬಾ ದೂರದ ಊರಿನಿಂದೆಲ್ಲಾ ಅಭಿಮಾನಿಗಳು ಬಂದಿದ್ದೀರಾ. ಯಾರೆಲ್ಲಾ ದೂರದ ಊರಿನಿಂದ ಬಂದಿದ್ದೀರಿ ಅವರಿಗೆಲ್ಲಾ ತುಂಬಾ ಧನ್ಯವಾದಗಳು. ನಮ್ಮ ಮದುವೆಯನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿದ್ದೀರಿ. ಖಂಡಿತವಾಗಿಯೂ ಈ ಪ್ರೀತಿಗೆ ನಾವು ಚಿರಋಣಿ’’ ಎಂದು ಹೇಳಿದ್ದಾರೆ.

Ranjith Marriage: ಚೈತ್ರಾ ಬಳಿಕ ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿಯ ಮದುವೆ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಂಜಿತ್ ಕುಮಾರ್