ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vaishnavi Gowda: ಸೀತಾ ರಾಮ ಮುಗಿದ ಬೆನ್ನಲ್ಲೇ ಮದುವೆಗೆ ರೆಡಿಯಾದ ವೈಷ್ಣವಿ ಗೌಡ

ಕಳೆದ ತಿಂಗಳು ಏಪ್ರಿಲ್ 14ರಂದು ವೈಷ್ಣವಿ ಗೌಡ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅನುಕೂಲ್ ಮಿಶ್ರಾ ಜೊತೆಗೆ ಹಿರಿಯರ ಸಮ್ಮುಖದಲ್ಲಿ ಒಬ್ಬರೊಬ್ಬರು ಉಂಗುರ ಬದಲಾಯಿಸಿಕೊಂಡಿದ್ದರು. ಸದ್ಯದಲ್ಲೇ ಅದ್ಧೂರಿಯಾಗಿ ಇವರು ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ.

ಸೀತಾ ರಾಮ ಮುಗಿದ ಬೆನ್ನಲ್ಲೇ ಮದುವೆಗೆ ರೆಡಿಯಾದ ವೈಷ್ಣವಿ

Vaishnavi Gowda -

Profile
Vinay Bhat Jun 3, 2025 7:46 AM

ಝೀ ಕನ್ನಡದಲ್ಲಿ 2023ರ ಜುಲೈ 17ರಂದು ದೊಡ್ಡ ಹೈಪ್​ನೊಂದಿಗೆ ಪ್ರಾರಂಭವಾದ ಸೀತಾ ರಾಮ (Seetha Rama) ಧಾರಾವಾಹಿ ಈಗ ಮುಕ್ತಾಯಗೊಂಡಿದೆ. ಸುಮಾರು ಎರಡು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿಯಲ್ಲಿ ಸೀತೆಯಾಗಿ ವೈಷ್ಣವಿ ಗೌಡ ಮಿಂಚಿದರು. ಇದೀಗ ಧಾರಾವಾಹಿ ಕೊನೆಗೊಂಡಿದ್ದು, ವೈಷ್ಣವಿ ಗೌಡ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದರ ಜೊತೆಗೆ ಮದುವೆ ಕಾರ್ಯ ಕೂಡ ಶುರುವಾಗಿದೆ.

ಕಳೆದ ತಿಂಗಳು ಏಪ್ರಿಲ್ 14ರಂದು ವೈಷ್ಣವಿ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅನುಕೂಲ್ ಮಿಶ್ರಾ ಜೊತೆಗೆ ಹಿರಿಯರ ಸಮ್ಮುಖದಲ್ಲಿ ಒಬ್ಬರೊಬ್ಬರು ಉಂಗುರ ಬದಲಾಯಿಸಿಕೊಂಡಿದ್ದರು. ಸದ್ಯದಲ್ಲೇ ಅದ್ಧೂರಿಯಾಗಿ ಇವರು ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ. ಇದರ ಮಧ್ಯೆ ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಅರಿಶಿನ ಶಾಸ್ತ್ರ ಕೂಡ ನಡೆದಿದೆ.

ಮನೆಯವರ ಸಮ್ಮುಖದಲ್ಲಿ ವೈಷ್ಣವಿ ಮೈಗೆ ಅರಿಶಿನದ ಸ್ಪರ್ಶವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡ ಅರಿಶಿನ ಶಾಸ್ತ್ರದ ವಿಡಿಯೋ ವೈರಲ್ ಆಗುತ್ತಿದೆ. ಸೀರೆಯುಟ್ಟು, ಕೊರಳಿಗೆ ಮಾಲೆ ಹಾಕಿ ಕುಳಿತಿರುವ ವೈಷ್ಣವಿ ಗೌಡಗೆ, ಕುಟುಂಬಸ್ಥರು ಅರಿಶಿನ ಹಚ್ಚುತ್ತಿದ್ದಾರೆ. ಮನೆಯವರ ಜೊತೆ ಫೋಟೋಗಳಿಗೆ ವೈಷ್ಣವಿ ಫೋಸ್ ನೀಡಿದ್ದಾರೆ.

ಭಾರತೀಯ ವಾಯುಸೇನೆಯಲ್ಲಿ ಇರುವ ಅನುಕೂಲ್ ಮಿಶ್ರಾ ಹಾಗೂ ವೈಷ್ಣವಿದು ಲವ್ ಕಮ್ ಎರೇಂಜ್ ಮ್ಯಾರೇಜ್. ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಪೋಷಕರು ಈ ಮದುವೆ ನಿಶ್ಚಯಿಸಿದರಂತೆ. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ, ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದು ಮೊನ್ನೆಯಷ್ಟೆ ವೈಷ್ಣವಿ ಹೇಳಿದ್ದರು.

Mokshitha Pai: ಮೂಗುತಿ ಸುಂದರಿ: ಹೊಸ ಫೋಟೋ ಶೂಟ್​ನಲ್ಲಿ ಮಿಂಚಿದ ಮೋಕ್ಷಿತಾ ಪೈ