BBK 12: ಇಂದು ವಾರದ ಕತೆ ಕಿಚ್ಚನ ಜೊತೆ: ಈ ಸ್ಪರ್ಧಿಗಳಿಗೆ ಕ್ಲಾಸ್ ಖಚಿತ
Varada Kathe Kichchana Jothe: ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಎರಡು ವಾರ ಆಗುತ್ತ ಬರುತ್ತಿದೆ. ಇಂದು ಕಿಚ್ಚನ ಎರಡನೇ ವಾರದ ಪಂಚಾಯಿತಿ ನಡೆಯಲಿದೆ. ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆ ಎರಡನೇ ವಾರ ಕೂಡ ರಣರಂಗವಾಗಿತ್ತು.

Varada Kathe Kichchana Jothe -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಎರಡು ವಾರ ಆಗುತ್ತ ಬರುತ್ತಿದೆ. ಇಂದು ಕಿಚ್ಚನ ಎರಡನೇ ವಾರದ ಪಂಚಾಯಿತಿ ನಡೆಯಲಿದೆ. ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆ ಎರಡನೇ ವಾರ ಕೂಡ ರಣರಂಗವಾಗಿತ್ತು. ಪ್ರತಿ ಎಪಿಸೋಡ್ನಲ್ಲಿ ಜಗಳಗಳೇ ನಡೆದಿತ್ತು. ಅದರಲ್ಲೂ ನಿನ್ನೆಯ ಎಪಿಸೋಡ್ನಲ್ಲಿ ಚಂದ್ರಪ್ರಭ, ಡಾಗ್ ಸತೀಶ್ ಹಾಗೂ ಧನುಷ್ ನಡುವಣ ಜಗಳ ತಾರಕಕ್ಕೇರಿತು. ಎರಡನೇ ವಾರದಲ್ಲಿ ಅನೇಕ ಸಂಗತಿಗಳು ನಡೆದಿದ್ದು, ಈ ಕುರಿತು ವಾರದ ಕತೆಯಲ್ಲಿ ಚರ್ಚೆ ನಡೆಯಲಿದೆ.
ಜಂಟಿಗಳ ಕಡೆಯಿಂದ ಈ ವಾರ ಕೂಡ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ಕಂಡುಬಂದಿಲ್ಲ. ಹೀಗಾಗಿ ಇವರಿಗೆ ಕ್ಲಾಸ್ ತೆಗೆದುಕೊಳ್ಳುವುದು ಖಚಿತ. ಅಲ್ಲದೆ ಮಂಜು ಭಾಷಿಣಿ ಹಾಗೂ ರಾಶಿಕ ನಡುವೆ ಎಲ್ಲವೂ ಸರಿಯಿಲ್ಲ.. ಇವರು ಹೆಚ್ಚು ಅಡುಗೆ ಮನೆಯಲ್ಲೇ ಸಮಯ ಕಳೆಯುತ್ತಾರೆ ಎಂಬ ದೂರಿದೆ. ಹೀಗಾಗಿ ಈ ಕುರಿತು ಕ್ಲಾರಿಟಿ ತೆಗದುಕೊಳ್ಳಬಹುದು. ಜೊತೆಗೆ ಚಂದ್ರಪ್ರಭ, ಡಾಗ್ ಸತೀಶ್ ಹಾಗೂ ಧನುಷ್ ನಡುವಣ ಜಗಳದ ಕುರಿತು ಅಭಿಪ್ರಾಯ ಕೇಳಬಹುದು.
ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನ ಪ್ರೋಮೋ:
ಇನ್ನು ರಕ್ಷಿತಾ ಶೆಟ್ಟಿಗೆ ಈ ವಾರ ಕಿಚ್ಚನ ಕ್ಲಾಸ್ ಖಚಿತ ಎನ್ನಲಾಗುತ್ತಿದೆ. ರಕ್ಷಿತಾ ಅಸುರಾಧಿಪತಿಯ ಕೆಲಸದಿಂದ ಕೋಪಗೊಂಡು ಪ್ರತಿಕಾರ ತೀರಿಸಿಕೊಳ್ಳಲು 12 ಜನರಿಗೆ ಚಿಕನ್ ಬೇಯಿಸುತ್ತಿರುವಾಗ ಆ ಪಾತ್ರೆಗೆ ಟೀ ಸುರಿದಿದ್ದರು. ಅದರಿಂದಾಗಿ ತಿನ್ನುವ ಅನ್ನಕ್ಕೆ ಮಣ್ಣು ಹಾಕಿದಂತಾಯಿತು. ರಕ್ಷಿತಾ ಮಾಡಿದ ಈ ಕೆಲಸದಿಂದ ಇಡೀ ಮನೆ ಹೊತ್ತಿ ಉರಿದಿತ್ತು. ಕಾಕ್ರೋಜ್ ಸುಧಿ ಒಬ್ಬರು ಮಾಡಿದ ತಪ್ಪಿಗಾಗಿ ರಕ್ಷಿತಾ ಶೆಟ್ಟಿ ಅವರು 12 ಜನರ ಊಟ ಕೆಡಿಸಬಾರದಾಗಿತ್ತು ಎಂದು ಎಲ್ಲರೂ ರೇಗಾಡಿದರು.
BBK 12: ಒಟ್ಟು 10 ಮಂದಿ ನಾಮಿನೇಟ್: ಈ ವಾರ ಎಲಿಮಿನೇಷನ್ ಇರುತ್ತಾ-ಇಲ್ವಾ?
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಊಟ ಹಾಳು ಮಾಡಿದಾಗ ವೀಕೆಂಡ್ನಲ್ಲಿ ಸುದೀಪ್ ಸ್ಪರ್ಧಿಗಳ ಮೈಚಳಿ ಬಿಡಿಸಿದ್ದರು. ಇದೀಗ ರಕ್ಷಿತಾ ಕೂಡ ಅದೇ ತಪ್ಪನ್ನು ಮಾಡಿರುವ ಕಾರಣ ಇಂದು ಕಿಚ್ಚನ ಕ್ಲಾಸ್ ಖಚಿತ ಎನ್ನಲಾಗುತ್ತಿದೆ. ಇದರ ಜೊತೆಗೆ ರಕ್ಷಿತಾ ಈ ವಾರ ಉತ್ತಮ ಆಟವಾಡಿದ್ದಾರೆ. ಜೊತೆಗೆ ತಮ್ಮ ಮಾತುಗಳ ಮೂಲಕ ರಂಜಿಸಿದ್ದಾರೆ. ಹೀಗಾಗಿ ಇವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದರೂ ಅಚ್ಚರಿ ಪಡಬೇಕಿಲ್ಲ. ಮತ್ತೊಂದೆಡೆ ಈ ವಾರ ಅಸುರಾಧಿಪತಿ ಆಗಿದ್ದ ಕಾಕ್ರೋಚ್ ಸುಧಿ ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸಲಿಲ್ಲ. ಅಸುರನಿಗೆ ಏನು ಬೇಕಾದ್ರು ನಿಯಮ ಮಾಡಬಹುದಾದ ಅಧಿಕಾರ ಇತ್ತು. ಆದರೆ, ಇವರು ಅದನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ.. ಆ ಖಡಕ್ ಮಾತು ಇವರ ಬಾಯಿಂದ ಬರಲಿಲ್ಲ. ಈ ಬಗ್ಗೆ ಕೂಡ ಸುದೀಪ್ ಮಾತನಾಡಬಹುದು.
ಇನ್ನು ಈ ವಾರ ಮನೆಯಿಂದ ಹೊರಹೋಗಲು 10 ಮಂದಿ ನಾಮಿನೇಟ್ ಆಗಿದ್ದಾರೆ. ಜಾನ್ವಿ, ರಕ್ಷಿತಾ ಶೆಟ್ಟಿ, ಧನುಷ್, ಅಶ್ವಿನಿ ಗೌಡ, ಸ್ಪಂದನಾ ಹಾಗೂ ಮಾಳು, ಅಭಿಷೇಕ್ ಹಾಗೂ ಅಶ್ವಿನಿ ಎಸ್.ಎನ್ ಮತ್ತು ರಾಶಿಕಾ- ಮಂಜು ಭಾಷಿಣಿ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಈ ವಾರ ದೊಡ್ಮನೆಯಿಂದ ಯಾರು ಔಟ್ ಆಗುತ್ತಾರೆ ಎಂಬುದು ನೋಡಬೇಕಿದೆ. ಒಬ್ಬರು ಹೋಗುತ್ತಾರ ಅಥವಾ ಒಂದು, ಎರಡು ಜೋಡಿ ಹೋಗುತ್ತಾ ಎಂಬುದು ಕುತೂಹಲ ಮೂಡಿಸಿದೆ. ಮೊದಲ ವಾರ ಆರ್ಜೆ ಅಮಿತ್ ಹಾಗೂ ಕರಿಬಸಪ್ಪ ಜೋಡಿ ಎಲಿಮಿನೇಟ್ ಆಗಿತ್ತು.