Chaithra Kundapura Marriage: ನ್ಯೂಸ್ ಚಾನೆಲ್‌ನಲ್ಲಿ ಒಟ್ಟಿಗೆ ಕೆಲಸ: ಚೈತ್ರಾ ಕುಂದಾಪುರ ಮದುವೆ ಆಗುತ್ತಿರುವ ಈ ಹುಡುಗ ಯಾರು ಗೊತ್ತೇ?
ಚೈತ್ರಾ ಕುಂದಾಪುರ ಅವರ ಭಾವಿ ಪತಿಯನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಇದೀಗ ಚೈತ್ರಾ ತಾನು ಮದುವೆ ಆಗುವ ಹುಡುಗನನ್ನು ಪರಿಚಯಿಸಿದ್ದಾರೆ. ಚೈತ್ರಾ ಕುಂದಾಪುರ ಅವರನ್ನ ಮದುವೆಯಾಗಲಿರುವ ಹುಡುಗನ ಹೆಸರು ಶ್ರೀಕಾಂತ್ ಕಶ್ಯಪ್. 12 ವರ್ಷಗಳಿಂದ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಪರಸ್ಪರ ಪ್ರೀತಿಸುತ್ತಿದ್ದರು.

Chaithra Kundapura Shrikanth Kashyap

ಕರಾವಳಿಯ ಫೈರ್ ಬ್ರ್ಯಾಂಡ್ ಎಂದೇ ಕರುನಾಡಿನೆಲ್ಲೆಡೆ ಹೆಸರುವಾಸಿಯಾದ ಚೈತ್ರಾ ಕುಂದಾಪುರ (Chaithra Kundapura) ಬಿಗ್ ಬಾಸ್ ಸೀಸನ್ 11ರ ಮೂಲಕ ಸಾಕಷ್ಟು ಜನಪ್ರಿಯರಾದರು. ಇದೀಗ ಇವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋದಾಗಲೇ ಮದುವೆ ಬಗ್ಗೆ ಮೌನ ಮುರಿದಿದ್ದರು. ನನಗೆ ಈಗಾಗಲೇ ಹುಡುಗ ಫಿಕ್ಸ್ ಆಗಿದ್ದಾನೆ. ಬಿಗ್ ಬಾಸ್ನಿಂದ ಹೋದ ತಕ್ಷಣ ಮದುವೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಬಿಗ್ ಬಾಸ್ ಮುಗಿದು ಕೆಲ ತಿಂಗಳಾದರು ಚೈತ್ರಾ ಮದುವೆ ಬಗ್ಗೆ ಯಾವುದೇ ಅಪ್ಡೇಟ್ ಇರಲಿಲ್ಲ.
ಆದರೆ, ಇತ್ತೀಚೆಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಡಿದು ಓಡಾಡುತ್ತಿದ್ದ ಚೈತ್ರಾ ಅವರ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಮದುವೆಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿದೆ. ಚೈತ್ರಾ ಕುಂದಾಪುರ ಅವರದ್ದು ಇಂದು ಅಂದರೆ ಮೇ 9ಕ್ಕೆ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ, ಈ ಕುರಿತು ಖಚಿತ ಮಾಹಿತಿ ಇಲ್ಲ. ಇದರ ಮಧ್ಯೆ ಚೈತ್ರಾ ಕುಂದಾಪುರ ಅವರು ಪ್ರೀ ವೆಡ್ಡಿಂಗ್ ವಿಡಿಯೋ ಶೂಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಹುಡುಗ ಯಾರು ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಮೊನ್ನೆಯಷ್ಟೆ ಕಲರ್ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ಶೋಗೆ ಚೈತ್ರಾ ಕುಂದಾಪುರ ಬಂದಿದ್ದರು. ಚೈತ್ರಾ ಅವರಿಗೆ ಮದುವೆ ಫಿಕ್ಸ್ ಅಗಿದೆ ಎನ್ನುತ್ತಲೇ ಸೃಜನ್ ಲೋಕೇಶ್ ಮಾತು ಶುರು ಮಾಡಿದ್ದರು. ನಮ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ಚೈತ್ರಾ ಹೇಳಿದ್ದರು. ಇವರದ್ದು 12 ವರ್ಷದ ಲವ್ ಸ್ಟೋರಿ. ಕಾಲೇಜಿನಲ್ಲಿ ಲವ್ ಶುರುವಾಗಿದ್ದು ಎಂಬ ವಿಚಾರವನ್ನು ರಿವೀಲ್ ಮಾಡಿದ್ದರು.
‘‘ನನ್ನ ಮದುವೆ ಯಾವಾಗಲೋ ನಡೆಯಬೇಕಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಮದುವೆ ಯಾವಾಗ ಎಂದು ನಮ್ಮ ಮನೆಯವರು ನಿರ್ಧಾರ ಮಾಡುತ್ತಾರೆ. ಈ ವಿಚಾರದಲ್ಲಿ ಮನೆಯವರ ನಡುವೆ ಮಾತುಕಥೆಗಳು ಇನ್ನೂ ನಡೆಯುತ್ತಿದೆ. ನಾವೆಲ್ಲರೂ ಒಂದೊಳ್ಳೆ ಮುಹೂರ್ತಕ್ಕೆ ಕಾಯುತ್ತಿದ್ದೇವೆ. ನಮ್ಮ ಸಂಪ್ರದಾಯಗಳಲ್ಲಿ ಏನೆಲ್ಲಾ ನಡೆಯಬೇಕೋ ಮೊದಲು ಅದೆಲ್ಲವೂ ನಡೆಯಲಿ ಆ ನಂತರ ಮದುವೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ’’ ಎಂದು ಚೈತ್ರಾ ಕುಂದಾಪುರ ಮಜಾ ಟಾಕೀಸ್ನಲ್ಲಿ ಹೇಳಿಕೊಂಡಿದ್ದರು.
ಹೀಗಾಗಿ ಚೈತ್ರಾ ಕುಂದಾಪುರ ಅವರ ಭಾವಿ ಪತಿಯನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಇದೀಗ ಚೈತ್ರಾ ತಾನು ಮದುವೆ ಆಗುವ ಹುಡುಗನನ್ನು ಪರಿಚಯಿಸಿದ್ದಾರೆ. ಚೈತ್ರಾ ಕುಂದಾಪುರ ಅವರನ್ನ ಮದುವೆಯಾಗಲಿರುವ ಹುಡುಗನ ಹೆಸರು ಶ್ರೀಕಾಂತ್ ಕಶ್ಯಪ್. 12 ವರ್ಷಗಳಿಂದ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಇಬ್ಬರ ಪ್ರೀತಿಗೆ ಅಧಿಕೃತ ಮುದ್ರೆ ಬೀಳುತ್ತಿದೆ. ಶ್ರೀಕಾಂತ್ ಕಶ್ಯಪ್ ಮೂಲತಃ ಉಡುಪಿಯ ಹಿರಿಯಡ್ಕದವರು.
ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಒಂದೇ ಕಾಲೇಜಿನಲ್ಲಿ ಓದಿದವರು. ಕಾಲೇಜು ದಿನಗಳಿಂದಲೂ ಇಬ್ಬರ ಮಧ್ಯೆ ಪ್ರೀತಿ ಇದೆ. ಈ ವಿಚಾರವನ್ನು ಸ್ವತಃ ಚೈತ್ರಾ ಅವರೇ ಖಚಿತಪಡಿಸಿದ್ದಾರೆ. ಶ್ರೀಕಾಂತ್ ಕಶ್ಯಪ್ ಆನಿಮೇಷನ್ ಓದಿದ್ದಾರೆ. ಆನಿಮೇಷನ್ ಓದಿದ್ದರೂ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಶ್ರೀಕಾಂತ್ ಪರಿಣಿತಿ ಪಡೆದಿದ್ದಾರೆ.
ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಉಡುಪಿಯ ಸ್ಥಳೀಯ ನ್ಯೂಸ್ ಚಾನೆಲ್‌ನಲ್ಲಿ (ಸ್ಪಂದನ ಟಿವಿ) ಜೊತೆಯಾಗಿ ಕೆಲಸ ಮಾಡುತ್ತಿದ್ದರು. ನ್ಯೂಸ್ ಚಾನೆಲ್‌ನಲ್ಲಿ ಚೈತ್ರಾ ಕುಂದಾಪುರ ಆಂಕರ್ ಆಗಿದ್ದರೆ, ಶ್ರೀಕಾಂತ್ ಕಶ್ಯಪ್ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ಇಬ್ಬರೂ ಈ ಫೀಲ್ಡ್ ತೊರೆದು ಚೈತ್ರಾ ಭಾಷಣದ ಕಡೆ ಹೆಚ್ಚು ಸಕ್ರಿಯರಾದರೆ ಇದಕ್ಕೆ ಶ್ರೀಕಾಂತ್ ಬೆನ್ನೆಲುಬಾಗಿದ್ದರು.
Bro Gowda Marriage: ಬ್ರೋ ಗೌಡ ಭಾವಿ ಪತ್ನಿಯಿಂದ ಭರ್ಜರಿ ಬ್ಯಾಚುಲರ್ ಪಾರ್ಟಿ