Trivikram: ತ್ರಿವಿಕ್ರಮ್ ಸಿನಿಮಾ ಬದಲು ಧಾರಾವಾಹಿ ಯಾಕೆ ಒಪ್ಪಿಕೊಂಡ್ರು..?: ಇಲ್ಲಿದೆ ಕಾರಣ
ಸದ್ಯ ತ್ರಿವಿಕ್ರಮ್ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ನಿನ್ನೆಯಿಂದ (ಏ. 14) ಮುದ್ದು ಸೊಸೆ ಎಂಬ ಹೊಸ ಧಾರಾವಾಹಿ ಶುರುವಾಗಿದೆ. ಈ ಸೀರಿಯಲ್ ತ್ರಿವಿಕ್ರಮ್ ಮುಖ್ಯಭೂಮಿಕೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ತ್ರಿವಿಕ್ರಮ್ ಸಿನಿಮಾ ಬದಲು ಧಾರಾವಾಹಿ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂಬುದು ಅವರ ಅಭಿಮಾನಿಗಳ ಪ್ರಶ್ನೆಯಾಗಿತ್ತು.

Trivikram

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ (Bigg Boss Kannada Season 11) ತನ್ನ ವಿಶೇಷ ವ್ಯಕ್ತಿತ್ವದ ಮೂಲಕ ಎಲ್ಲರ ಮನಗೆದ್ದ ಸ್ಪರ್ಧಿ ಎಂದರೆ ಅದು ತ್ರಿವಿಕ್ರಮ್. ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಎಂದೇ ಜನಪ್ರಿಯತೆ ಪಡೆದಿರುವ ಬಿಬಿಕೆ 11ರ ಫಸ್ಟ್ ರನ್ನರ್ ರಪ್ ತ್ರಿವಿಕ್ರಮ್ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇವರು ಎಲ್ಲೇ ಕಂಡರು ಅಭಿಮಾನಿಗಳು ಸೆಲ್ಫಿಗೋಸ್ಕರ ಮುಗಿಬೀಳುತ್ತಿದ್ದಾರೆ. ಇವರು ಜೀವನದಲ್ಲಿ ನಡೆದುಕೊಂಡು ಬಂದ ದಾರಿ, ಇವರ ಕ್ರಿಕೆಟ್ ಪ್ರೇಮ, ಇನ್ನೂ ಏನಾದರು ಮಾಡಬೇಕು ಎಂಬ ಛಲ ಕಂಡು ಅನೇಕ ಫ್ಯಾನ್ಸ್ ಇವರನ್ನು ಫಾಲೋ ಮಾಡುತ್ತಿದ್ದಾರೆ.
ಸದ್ಯ ತ್ರಿವಿಕ್ರಮ್ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ನಿನ್ನೆಯಿಂದ (ಏ. 14) ಮುದ್ದು ಸೊಸೆ ಎಂಬ ಹೊಸ ಧಾರಾವಾಹಿ ಶುರುವಾಗಿದೆ. ಈ ಸೀರಿಯಲ್ ತ್ರಿವಿಕ್ರಮ್ ಮುಖ್ಯಭೂಮಿಕೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರೋಮೋ ಮೂಲಕವೇ ಈ ಧಾರಾವಾಹಿ ಕುತೂಹಲ ಕೆಚ್ಚಿಸಿತ್ತು.
ಈ ಸೀರಿಯಲ್ಗೆ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಪ್ರೋಮೋದಲ್ಲಿ ತ್ರಿವಿಕ್ರಮ್ ಹೆಣ್ಣು ನೋಡುವ ಗೆಟಪ್ನಲ್ಲಿ ಕಾಣಿಸಿಕೊಂದ್ದರು. ಬಳಿಕ ಮದುವೆ ಮನೆಯಲ್ಲಿ ತ್ರಿವಿಕ್ರಮ್ ತಾಳಿ ಕಟ್ಟುವ ವೇಳೆ ಪೊಲೀಸರು ಬಂದು ತಡೆದಿದ್ದನ್ನು ತೋರಿಸಲಾಗಿತ್ತು. ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 7:30ಕ್ಕೆ ಪ್ರಸಾರ ಕಾಣುತ್ತಿದೆ.
ಸಾಮಾನ್ಯವಾಗಿ ಬಿಗ್ ಬಾಸ್ನಿಂದ ಹೊರಬಂದ ಬಳಿಕ ಅವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಬರುತ್ತದೆ. ಸೀರಿಯಲ್ ನಟಿಸುವುದು ಕೆಲವೇ ಕೆಲವು ಮಂದಿ. ಆದರೆ, ತ್ರಿವಿಕ್ರಮ್ ಸಿನಿಮಾ ಬದಲು ಧಾರಾವಾಹಿ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂಬುದು ಅವರ ಅಭಿಮಾನಿಗಳ ಪ್ರಶ್ನೆಯಾಗಿತ್ತು. ಇದಕ್ಕೀಗ ಸ್ವತಃ ಅವರೇ ಉತ್ತರ ಕೊಟ್ಟಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕೆ ಒಪ್ಪಿಕೊಂಡಿದ್ದು ಯಾಕೆ ಎಂದು ಹೇಳಿದ್ದಾರೆ.
Kannada Serial TRP: ಟಿಆರ್ಪಿಯಲ್ಲಿ ಝೀ ಕನ್ನಡ ಧಾರಾವಾಹಿಯದ್ದೇ ಹವಾ: ನಂಬರ್ 1 ಧಾರಾವಾಹಿ ಇದೇ ನೋಡಿ
"ನಾನು ಚೆನ್ನಾಗಿದ್ದೀನಿ ಸಿನಿಮಾಗಳನ್ನು ಮಾಡ್ತೀನಿ ಅಂತ ಜನಗಳು ಅಭಿಪ್ರಾಯ ಪಟ್ಟಿದ್ದರು. ಆದ್ರೆ ಯಾವ ನಿರ್ದೇಶಕರಿಗೂ ಮತ್ತು ಪ್ರೊಡ್ಯೂಸರ್ಸ್‌ಗೆ ಆ ರೀತಿ ಅನಿಸಿಲ್ಲವೆಂದು ಕಾಣುತ್ತದೆ. ನಿರೀಕ್ಷೆಗಳನ್ನು ಬ್ರೇಕ್ ಮಾಡಿ ಅದನ್ನು ಮೀರಿ ನಾನು ಜನರಿಗೆ ಪಾತ್ರ ಮತ್ತು ಕೆಲಸಗಳಿಂದ ಹೆಚ್ಚು ರೀಚ್ ಆಗಬೇಕು. ಚೆನ್ನಾಗಿರೋ ಮುಖ ಮತ್ತು ಸಿಕ್ಸ್ ಪ್ಯಾಕ್ ಇದ್ದೋರೆಲ್ಲಾ ಹೀರೋಗಳಾಗೋಕೆ ಆಗಲ್ಲ. ಜನ ಸ್ವೀಕರಿಸಬೇಕು, ಅಂತಹ ಕಥೆ ಸಿಗಬೇಕು, ಡೈರೆಕ್ಟರ್‌ಗಳು ಸಿಗಬೇಕು. ನಾನು ಒಂದು ಸಿನಿಮಾ ಮಾಡ್ತೀನಿ ಅಂದ್ರೆ ಎಂಟರಿಂದ ಒಂಬತ್ತು ತಿಂಗಳುಗಳ ಕಾಲ ಸಿನಿಮಾಗೆ ಸಮಯ ತೆಗೆದುಕೊಳ್ಳುತ್ತದೆ. ಸಿನಿಮಾಗಳ ಕಥೆಗಳನ್ನು ಕೇಳುತ್ತಿದ್ದೀನಿ, ಪೇಮೆಂಟ್ ಜೊತೆಗೆ ಒಳ್ಳೆ ಕಥೆ ಬಂದ್ರೆ ಖಂಡಿತವಾಗಿಯೂ ನಟಿಸುತ್ತೇನೆ" ಎಂದು ತ್ರಿವಿಕ್ರಮ್ ಹೇಳಿದ್ದಾರೆ.