Gauthami Jadav: ಎರಡು ದಿನ ಮೊದಲು ಮಂಗಳೂರಲ್ಲಿದ್ರೂ ಚೈತ್ರಾ ಕುಂದಾಪುರ ಮದುವೆಗೆ ಗೌತಮಿ ಹೋಗಿಲ್ಲವೇಕೆ?: ಕರೆದಿಲ್ಲವೇ..?
ಚೈತ್ರಾ ಕುಂದಾಪುರ ಮದುವೆಗೆ ಕೆಲ ಬಿಗ್ ಬಾಸ್ ಸ್ಪರ್ಧಿಗಳು ಆಗಮಿಸಿ ಶುಭ ಹಾರೈಸಿದ್ದರು. ಆದರೆ, ಗೌತಮಿ ಜಾಧವ್ ಮಾತ್ರ ಈ ಮದುವೆಗೆ ಬಂದಿರಲಿಲ್ಲ. ಅಲ್ಲದೆ ಇತ್ತೀಚೆಗಷ್ಟೆ ನಡೆದ ರಂಜಿತ್ ಮದುವೆಗೆ ಕೂಡ ಗೌತಮಿ ಗೈರಾಗಿದ್ದರು. ಅಲ್ಲದೆ ಗೌತಮಿ ಯಾವುದೇ ಬಿಗ್ ಬಾಸ್ ಸ್ಪರ್ಧಿ ಜೊತೆಗೆ ಅಥವಾ ಅವರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸ್ವತಃ ಗೌತಮಿ ಅವರೇ ಮಾತನಾಡಿದ್ದಾರೆ.

Gauthami Jadav and Chaithra kundapura

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapura) ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಎಂಬವರ ಜೊತೆ ಚೈತ್ರಾ ವಿವಾಹವಾಗಿದೆ. ತುಂಬಾ ಸಿಂಪಲ್ ಆಗಿ ನಡೆದಿದ್ದ ಈ ವಿವಾಹಕ್ಕೆ ಬೆರಳಣಿಕೆಯಷ್ಟು ಮಂದಿ ಮಾತ್ರ ಬಂದಿದ್ದರು. ಕೆಲ ಬಿಗ್ ಬಾಸ್ ಸ್ಪರ್ಧಿಗಳು ಆಗಮಿಸಿ ಶುಭ ಹಾರೈಸಿದ್ದರು. ಆದರೆ, ಗೌತಮಿ ಜಾಧವ್ ಮಾತ್ರ ಈ ಮದುವೆಗೆ ಬಂದಿರಲಿಲ್ಲ. ಅಲ್ಲದೆ ಇತ್ತೀಚೆಗಷ್ಟೆ ನಡೆದ ರಂಜಿತ್ ಮದುವೆಗೆ ಕೂಡ ಗೌತಮಿ ಗೈರಾಗಿದ್ದರು.
ಧನರಾಜ್ ಆಚಾರ್, ಗೋಲ್ಡ್ ಸುರೇಶ್, ರಜತ್ ಕಿಶನ್ ಹಾಗೂ ಅವರ ಪತ್ನಿ ಚೈತ್ರಾ ಮದುವೆಗೆ ಹಾಜರಿದ್ದರು. ರಜತ್ ಅವರು ಅಣ್ಣನ ಸ್ಥಾನದಲ್ಲಿ ನಿಂತು ಶಾಸ್ತ್ರವನ್ನು ಮಾಡಿದರು. ಉಗ್ರಂ ಮಂಜು ಸಹ ಮದುವೆಯ ಮರುದಿನ ಆಗಮಿಸಿ ನವದಂಪತಿಗೆ ಶುಭ ಹಾರೈಸಿದ್ದರು. ಆದರೆ, ಗೌತಮಿ ಯಾವುದೇ ಬಿಗ್ ಬಾಸ್ ಸ್ಪರ್ಧಿ ಜೊತೆಗೆ ಅಥವಾ ಅವರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸ್ವತಃ ಗೌತಮಿ ಅವರೇ ಮಾತನಾಡಿದ್ದಾರೆ.
ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿ ಜೊತೆ ಮಾತಾಡಿದ ಅವರು, ನೀವು ನನ್ನನ್ನೂ 111 ದಿನ ಬಿಗ್ಬಾಸ್ ಮನೆಯಲ್ಲಿ ನೋಡಿದ್ದೀರಾ. ತುಂಬಾ ಕಡಿಮೆ ಜನರ ಜೊತೆಗೆ ಇರೋಳು ನಾನು. ಹಾಂಗಂತ ಕಾರ್ಯಕ್ರಮ, ಸಮಾರಂಭಕ್ಕೆ ಹೋಗೋದಿಲ್ಲ ಅಂತಲ್ಲ. ಹಾಗೇ ನೋಡಿದ್ರೆ ಚೈತ್ರಾ ಅವರ ಮದುವೆಗೆ 2 ದಿನದ ಹಿಂದೆ ನಾನು ಮಂಗಳೂರಿನಲ್ಲೇ ಇದ್ದೇ. ಆ ಟೈಮ್ನಲ್ಲಿ ಹೋಗೋದಕ್ಕೆ ಆಗಿರಲಿಲ್ಲ. ನನಗೆ ಟೈಮ್ ಕೂಡಿ ಬರುತ್ತಿಲ್ಲ. ಎಲ್ಲೂ ಹೋಗೋದಕ್ಕೂ ಆಗುತ್ತಿಲ್ಲ ಎಂದು ಗೌತಮಿ ಹೇಳಿದ್ದಾರೆ.
Bro Gowda Marriage: ಶಮಂತ್ ಅದ್ಧೂರಿ ಮದುವೆ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರೋ ಗೌಡ
ಬಿಗ್ ಬಾಸ್ ಮುಗಿದ ಬಳಿಕ ಗೌತಮಿ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಸಿನಿಮಾ ಬಗ್ಗೆಯೂ ಯಾವುದೇ ಅಪ್ಡೇಟ್ ಇಲ್ಲ. ಆದರೆ, ಮೊನ್ನೆಯಷ್ಟೆ ಗೌತಮಿ ಅಭಿಮಾನಿಗಳಿಗೆ ಸಡನ್ ಆಗಿ ಬಿಗ್ ಸರ್ಪ್ರೈಸ್ ಕೊಟ್ಟರು. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾರ್ಗವಿ LL.B. ಅಲ್ಲಿ ಭಾರ್ಗವಿಗೆ ಅಪಾಯ ಎದುರಾದಾಗ, ಕೇಡಿಗಳು ಅವಳ ಪ್ರಾಣಕ್ಕೇ ಕುತ್ತು ತಂದಿದ್ದಾಗ ಭಾರ್ಗವಿಯನ್ನು ಕಾಪಾಡಲಿಕ್ಕೆ ಗೌತಮಿ ಜಾಧವ್ ಸ್ಪೆಷಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಭಾರ್ಗವಿ LL.B. ಧಾರಾವಾಹಿಯ ಟಿಆರ್ಪಿ ಪಾತಾಳಕ್ಕೆ ಕುಸಿದಿತ್ತು. ಇದೀಗ ಗೌತಮಿ ಎಂಟ್ರಿಯಿಂದ ಮೇಲೇಳುತ್ತ ಎಂಬುದು ನೋಡಬೇಕಿದೆ.