ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿಯ ಮನೆ ಬೆಂಕಿಗೆ ಆಹುತಿ; ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳ ಹರಸಾಹಸ

Shiv Thakare: ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ್ಟ್‌ಮೆಂಟ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರ ಮನೆಯ ಗೋಡೆಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಶಿವ್ ಠಾಕ್ರೆ ಅವರ ಮನೆಯೊಳಗಿನ ದೃಶ್ಯ, ಬೆಂಕಿದೊಡ್ಡ ಪ್ರಮಾಣದಲ್ಲಿದ್ದು, ವ್ಯಾಪಕ ಹಾನಿಯಾಗಿದೆ ಎಂದು ಎಂದು ವರದಿಯಾಗಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿಯ ಮನೆ ಬೆಂಕಿಗೆ ಆಹುತಿ

ಶಿವ್ ಠಾಕ್ರೆ -

Yashaswi Devadiga
Yashaswi Devadiga Nov 18, 2025 7:35 PM

ಬಿಗ್ ಬಾಸ್ ಮತ್ತು ರೋಡೀಸ್‌ನಂತಹ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಶಿವ್ ಠಾಕ್ರೆ (Shiv Thakare) ಅವರ ಮುಂಬೈನ ಗೋರೆಗಾಂವ್‌ನ ಮನೆಯಲ್ಲಿ ಬೆಂಕಿ (Fire) ಅವಘಡ ಸಂಭವಿಸಿದೆ. ಭೀಕರ ಬೆಂಕಿಯ ವೀಡಿಯೊಗಳು ಮತ್ತು ಫೋಟೋಗಳು (Photos) ವೈರಲ್ ಆಗುತ್ತಿದ್ದು, ಈ ಘಟನೆಯಲ್ಲಿ ಮಾಜಿ ರಿಯಾಲಿಟಿ ಶೋ ಸ್ಪರ್ಧಿಗೆ ಹಾನಿಯಾಗಿದೆಯೇ ಎಂಬ ಬಗ್ಗೆ ಅಭಿಮಾನಿಗಳು (Fans) ಕಳವಳ ವ್ಯಕ್ತಪಡಿಸಿದ್ದಾರೆ.

ವ್ಯಾಪಕ ಹಾನಿ

ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ್ಟ್‌ಮೆಂಟ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರ ಮನೆಯ ಗೋಡೆಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಶಿವ್ ಠಾಕ್ರೆ ಅವರ ಮನೆಯೊಳಗಿನ ದೃಶ್ಯ, ಬೆಂಕಿದೊಡ್ಡ ಪ್ರಮಾಣದಲ್ಲಿದ್ದು, ವ್ಯಾಪಕ ಹಾನಿಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:Bigg Boss Kannada 12: ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ; ಇವರೆಲ್ಲರ ಕಣ್ಣು ಬೀಳಬಾರದಂತೆ!

ಅಗ್ನಿಶಾಮಕ ದಳದ ಅಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. ಹಲವು ಮಹಡಿಗಳ ಮೇಲಿರುವ ಮನಯೆಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳ ಸಿಬ್ಬಂದಿ ಕೆಲ ಹೊತ್ತು ಹರಸಾಹಸ ಮಾಡಬೇಕಾಯಿತು.

ಶಿವ್ ಠಾಕ್ರೆ ಸುರಕ್ಷಿತ

ಶಿವ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ವೈರಲ್ ಭಯಾನಿ ಮಾಹಿತಿ ನೀಡಿದ್ದು, ನಟ ಸುರಕ್ಷಿತವಾಗಿದ್ದಾರೆ ಎಂದು ದೃಢಪಡಿಸಿದ್ದಾರೆ "ಇಂದು ಬೆಳಗ್ಗೆ ಶಿವ್ ಠಾಕ್ರೆ ಅವರ ಮುಂಬೈ ನಿವಾಸದಲ್ಲಿ ದುರದೃಷ್ಟಕರ ಘಟನೆ ಸಂಭವಿಸಿದೆ. ನಟ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಮತ್ತು ಯಾವುದೇ ಗಾಯಗಳಾಗಿಲ್ಲ, ಆದರೂ ಮನೆಗೆ ಹಾನಿಯಾಗಿದೆ." ಅಪಘಾತ ಸಂಭವಿಸಿದಾಗ ಶಿವ್ ಮುಂಬೈನಲ್ಲಿ ಇರಲಿಲ್ಲ. ಅವರು ನಿನ್ನೆ ರಾತ್ರಿಯಷ್ಟೇ ಮುಂಬೈಗೆ ತೆರಳಿದ್ದರು ಎಂದು ವರದಿಯಾಗಿದೆ. ಮನೆಯ ವಸ್ತುಗಳು, ಪಿಠೋಪಕರಣ ಸೇರಿದಂತೆ ಎಲ್ಲವೂ ಸುಟ್ಟು ಕರಕಲಾಗಿದೆ.

ಶಿವ್ ಠಾಕ್ರೆ

ಶಿವ ಠಾಕರೆ ದೂರದರ್ಶನ ಮತ್ತು ಮರಾಠಿ ಸಿನಿಮಾ ಜಗತ್ತಿನಲ್ಲಿ ಚಿರಪರಿಚಿತ ಹೆಸರು, ಒಂದರ ನಂತರ ಒಂದರಂತೆ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆದವರು. ರೋಡೀಸ್‌ನಿಂದ ಬಿಗ್ ಬಾಸ್ ಮರಾಠಿ ಮತ್ತು ನಂತರ ಬಿಗ್ ಬಾಸ್‌ನ ಹಿಂದಿ ಆವೃತ್ತಿಯವರೆಗೆ, ಅವರು ದೇಶಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮಾಡಿದ ಆ ಒಂದು ತಪ್ಪಿಂದ ಇಡೀ ಮನೆಗೆ ಶಿಕ್ಷೆ!

ಶಿವ್ ಖತ್ರೋನ್ ಕೆ ಖಿಲಾಡಿ ಮತ್ತು ಝಲಕ್ ದಿಖ್ಲಾ ಜಾ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ಶಿವ ಠಾಕರೆ "ರಾಜ್ ರಾಜ್ ನಾಚನ್" ಎಂಬ ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡರು, ಇದರಲ್ಲಿ ಅವರು ರಶ್ಮಿ ದೇಸಾಯಿ ಅವರೊಂದಿಗೆ ಕೆಲಸ ಮಾಡಿದರು.