ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manya Anand: ʻಧನುಷ್‌ ಕರೆದರೂ ಬರಲ್ವಾʼ; ಮ್ಯಾನೇಜರ್‌ ಮೇಲೆ ʻಕಾಸ್ಟಿಂಗ್‌ ಕೌಚ್‌ʼ ಆರೋಪ ಮಾಡಿದ ನಟಿ ಮಾನ್ಯ ಆನಂದ್!‌

Manya Anand accuses Dhanush's Manager: ತಮಿಳು ನಟ ಧನುಷ್‌ ಅವರ ಮ್ಯಾನೇಜರ್‌ ಮತ್ತು ನಿರ್ಮಾಣ ಸಂಸ್ಥೆ ವಂಡರ್‌ಬಾರ್ ಫಿಲ್ಮ್ಸ್‌ನ ಸಿಇಓ ಶ್ರೇಯಸ್‌ ಮೇಲೆ ನಟಿ ಮಾನ್ಯ ಆನಂದ್‌ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ. ಮಾನ್ಯ ಅವರನ್ನು ʻಕಮಿಟ್‌ಮೆಂಟ್‌ಗೆ ಒಪ್ಪಿಕೊಳ್ಳಬೇಕುʼ ಎಂದು ಶ್ರೇಯಸ್‌ ನೇರವಾಗಿ ಕೇಳಿದ್ದಾರಂತೆ!

Manya Anand:'ಧನುಷ್‌ ಕರೆದರೂ ಬರಲ್ವಾ'; ನಟಿಗೆ ಹಿಂಗೆ ಕೇಳಿದವರು ಯಾರು?

-

Avinash GR
Avinash GR Nov 18, 2025 6:49 PM

ತಮಿಳು ನಟ ಧನುಷ್‌ ಅವರ ಮ್ಯಾನೇಜರ್‌ ಮತ್ತು ಅವರ ವಂಡರ್‌ಬಾರ್ ಫಿಲ್ಮ್ಸ್‌ ಸಿಇಓ ಶ್ರೇಯಸ್‌ ಮೇಲೆ ಗಂಭೀರವಾದ ಆರೋಪವೊಂದು ಕೇಳಿಬಂದಿದೆ. ಹೌದು, ನಟಿ ಮಾನ್ಯ ಆನಂದ್‌ ಎಂಬುವವರು ಶ್ರೇಯಸ್‌ ಅವರ ಮೇಲೆ ಕಾಸ್ಟಿಂಗ್‌ ಕೌಚ್ ಆರೋಪ ಕೇಳಿಬಂದಿದೆ. "ಶ್ರೇಯಸ್‌ ನನ್ನನ್ನು ಬಲವಂತ ಮಾಡುತ್ತಿದ್ದಾರೆ" ಎಂದು ಮಾನ್ಯ ನೇರವಾಗಿ ಆರೋಪ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಇದರಲ್ಲಿ ಧನುಷ್‌ ಅವರ ಹೆಸರು ಕೂಡ ತಳುಕು ಹಾಕಿಕೊಂಡಿದೆ!

ಏನಿದು ಘಟನೆ?

ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾನ್ಯ ಆನಂದ್‌, "ಶ್ರೇಯಸ್‌ ಅವರು ಕಮಿಟ್‌ಮೆಂಟ್‌ಗೆ ಒಪ್ಪಿಕೊಳ್ಳಬೇಕು ಎಂದು ಕೇಳಿದರು. ಅರೇ, ನಾನ್ಯಾಕೆ ಕಮಿಟ್‌ಮೆಂಟ್‌ಗೆ ಒಪ್ಪಿಕೊಳ್ಳಲಿ? ಈ ರೀತಿ ಒಂದು ಅನೈತಿಕವಾದ ಒಪ್ಪಂದವನ್ನು ನಾನು ಆರಂಭದಲ್ಲೇ ನಿರಾಕರಿಸಿದೆ" ಎಂದು ಹೇಳಿದ್ದಾರೆ.

Actress Shashikala: ಬಲವಂತವಾಗಿ ನಿರ್ದೇಶಕನ ಮದುವೆಯಾಗಿ ಕಿರುಕುಳ; ಕಿರುತೆರೆ ನಟಿ ಶಶಿಕಲಾ ವಿರುದ್ಧ ಎಫ್‌ಐಆರ್‌

ಧನುಷ್‌ ಕರೆದರೂ ಬರುವುದಿಲ್ಲವೇ?

ಮಾನ್ಯ ಅವರು ರಿಜೆಕ್ಟ್‌ ಮಾಡಿದರೂ ಅವರ ಬೆನ್ನುಬಿದ್ದಿದ್ದ ಶ್ರೇಯಸ್‌, "ಧನುಷ್‌ ಅವರು ಕರೆದರೂ ನೀನು ಬರುವುದಿಲ್ಲವೇ" ಎಂದು ಕೇಳಿದ್ದರಂತೆ. ಈ ವಿಚಾರವನ್ನು ಕೂಡ ಮಾನ್ಯ ಅವರೇ ಬಹಿರಂಗಪಡಿಸಿದ್ದಾರೆ. "ನಾನು ನಿರಾಕರಣೆ ಮಾಡಿದಮೇಲೂ ನನ್ನನ್ನು ಹಲವು ಬಾರಿ ಸಂಪರ್ಕಿಸಲು ಶ್ರೇಯಸ್‌ ಪ್ರಯತ್ನಿಸಿದ್ದಾರೆ. ಧನುಷ್ ಅವರ ನಿರ್ಮಾಣ ಸಂಸ್ಥೆ ವುಂಡರ್‌ಬಾರ್ ಫಿಲ್ಮ್ಸ್‌ನ ಸ್ಥಳ ವಿವರಗಳನ್ನು ಮತ್ತು ಹೊಸ ಸಿನಿಮಾವೊಂದರ ಸ್ಕ್ರಿಪ್ಟ್ ಅನ್ನು ಸಹ ನನಗೆ ಕಳುಹಿಸಿದ್ದರು. ಆದರೂ ಆ ಸ್ಕ್ರಿಪ್ಟ್ ಓದಿಲ್ಲ ಮತ್ತು ಅವರ ಚಿತ್ರಗಳಲ್ಲಿ ಕೆಲಸ ಮಾಡುವ ಉದ್ದೇಶವಿಲ್ಲ" ಎಂದು ಕಡ್ಡಿ ತುಂಡು ಮಾಡಿದಂತೆ ಮಾನ್ಯ ಹೇಳಿದ್ದಾರೆ.

Daisy Shah: ಶೂಟಿಂಗ್‌ ವೇಳೆ ಕಿರುಕುಳ ಅನುಭವಿಸಿದ್ದ ಬಗ್ಗೆ ನಟಿ ಡೈಸಿ ಶಾ ಹೇಳಿದ್ದೇನು?

"ಈ ಸಿನಿಮಾವನ್ನು ನಾನು ಮಾಡುತ್ತಿಲ್ಲ. ನಾವು ಕಲಾವಿದರು, ನೀವು ನಮ್ಮಿಂದ ಕೆಲಸ ತೆಗೆದುಕೊಳ್ಳುತ್ತೀರಿ. ಆದರೆ ಪ್ರತಿಯಾಗಿ ಬೇರೇನನ್ನೂ ನಿರೀಕ್ಷಿಸಬೇಡಿ. ನಾವು ನಿಮ್ಮ ಬೇಡಿಕೆಗಳನ್ನು ಪೂರೈಸಿದರೆ, ನಮ್ಮನ್ನು ಬೇರೆಯದೇ ಹೆಸರಿನಿಂದ ಕರೆಯಲಾಗುತ್ತದೆ. ಜನರು ಈ ಮಾದರಿಯನ್ನು ಗುರುತಿಸಿ ಅದನ್ನು ವಿಂಗಡಿಸಿದರೆ ಉತ್ತಮ ಎಂದು ನಾನು ಭಾವಿಸುತ್ತೇನೆ" ಎಂದು ಖಡಕ್‌ ಆಗಿ ಹೇಳಿದ್ದಾರೆ ಮಾನ್ಯ.

ಯಾರು ಈ ಮಾನ್ಯ ಆನಂದ್?

ತಮಿಳು ಕಿರುತೆರೆಯಲ್ಲಿ ಫೇಮಸ್‌ ಆಗಿರುವ ಮಾನ್ಯ ಆನಂದ್ ಅವರು ʻವನತೈ ಪೋಲಾʼ ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಕೆಲ ಸಿನಿಮಾಗಳಲ್ಲಿಯೂ ಮಾನ್ಯ ಆನಂದ್‌ ಅವರು ನಟಿಸಿದ್ದು, ಇದೀಗ ಧನುಷ್‌ ಮ್ಯಾನೇಜರ್‌ ಮೇಲೆ ಆರೋಪ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಮಾನ್ಯ ಆನಂದ್‌ ಮಾಡಿರುವ ಆರೋಪಕ್ಕೆ ಧನುಷ್‌ ಟೀಮ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.