Sonakshi Sinha: ಗರ್ಭಿಣಿ ವದಂತಿಗೆ ಸ್ಪಷ್ಟನೆ ಕೊಟ್ಟ ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದೇನು?
Sonakshi Sinha: ಇತ್ತೀಚೆಗಷ್ಟೇ ಸೋನಾಕ್ಷಿ ಮತ್ತು ಅವರ ಪತಿ ಜಹೀರ್ ಇಕ್ಬಾಲ್ ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ಕಾರ್ಯಕ್ರಮದಲ್ಲಿ ಸೋನಾಕ್ಷಿ ಅವರ ಹೊಟ್ಟೆಯ ಮೇಲೆ ಪತಿ ಜಹೀರ್ ಕೈ ಇಟ್ಟು ಪೋಸ್ ಕೊಟ್ಟಿದ್ದನ್ನು ನೋಡಿ ದಂಪತಿ ಶೀಘ್ರದಲ್ಲೇ ಗುಡ್‌ನ್ಯೂಸ್ ನೀಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಸೋನಾಕ್ಷಿ ಸಿನ್ಹಾ ಈ ವದಂತಿಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಉತ್ತರ ನೀಡಿದ್ದಾರೆ.

ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್ ದಂಪತಿ -

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಗರ್ಭಿಣಿ ಎನ್ನುವ ವದಂತಿ ಬಹಳಷ್ಟು ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಸೋನಾಕ್ಷಿ ಮತ್ತು ಅವರ ಪತಿ ಜಹೀರ್ ಇಕ್ಬಾಲ್ ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ಕಾರ್ಯಕ್ರಮದಲ್ಲಿ ಸೋನಾಕ್ಷಿ ಅವರ ಹೊಟ್ಟೆಯ ಮೇಲೆ ಪತಿ ಜಹೀರ್ ಕೈ ಇಟ್ಟು ಪೋಸ್ ನೀಡಿದ್ದರು. ಇದನ್ನು ನೋಡಿದ ನೆಟ್ಟಿಗರು ಸೋನಾಕ್ಷಿ ಗರ್ಭಿಣಿ ಎಂದು ಊಹಿಸಿಕೊಂಡಿದ್ದರು. ಇದೀಗ ನಟಿ ಸೋನಾಕ್ಷಿ ಸಿನ್ಹಾ ಈ ವದಂತಿಗೆ ಉತ್ತರ ಕೊಟ್ಟಿದ್ದಾರೆ.
ಈ ವದಂತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸೋನಾಕ್ಷಿ ಇನ್‌ಸ್ಟಾಗ್ರಾಮ್‌ನಲ್ಲಿ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ತಮ್ಮ ಫೋಟೊಗಳನ್ನು ಹಂಚಿಕೊಂಡು, ʼʼಕೇವಲ ನನ್ನ ಹೊಟ್ಟೆಯ ಮೇಲೆ ಕೈ ಇಟ್ಟು ಪೋಸ್ ಕೊಟ್ಟಿದ್ದಕ್ಕೆ ಹಲವರು ನನ್ನನ್ನು 16 ತಿಂಗಳುಗಳಿಂದ ಗರ್ಭಿಣಿ ಎಂದು ಸುದ್ದಿ ಮಾಡಿದ್ದಾರೆ. ಈ ಮೂಲಕ ನಾನು ಈ ವಿಚಾರದಲ್ಲಿ ವಿಶ್ವ ದಾಖಲೆ ಮಾಡಿದ್ದೇನೆʼʼ ಎಂದಿದ್ದಾರೆ. ಕೊನೆಯ ಫೋಟೋವೊಂದಲ್ಲಿ ಸೋನಾಕ್ಷಿ ಮತ್ತು ಜಹೀರ್ ಇಬ್ಬರೂ ಜೋರಾಗಿ ನಗುತ್ತಾ ಪೋಸ್ ಕೊಟ್ಟಿದ್ದು ಇದೇ ತಮ್ಮ ನಿಜವಾದ ಉತ್ತರ ಎಂದು ಬರೆದುಕೊಂಡಿದ್ದಾರೆ. ಇದರಿಂದ ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ಸದ್ಯಕ್ಕೆ ಯಾವುದೇ ಗುಡ್ ನ್ಯೂಸ್ ನೀಡುತ್ತಿಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ.
ಇದನ್ನು ಓದಿ:Dilmaar Movie: 'ದಿಲ್ಮಾರ್' ಪ್ರೀ-ರಿಲೀಸ್ ಇವೆಂಟ್ ಗೆ ಶಿವಣ್ಣ ಭಾಗಿ- ಇದೇ 24ರಂದು ಸಿನಿಮಾ ರಿಲೀಸ್!
ಇತ್ತೀಚೆಗೆ ಪಾಪರಾಜಿಗಳಿಗೆ ಪೋಸ್ ನೀಡುವಾಗ ಜಹೀರ್ ಇಕ್ಬಾಲ್ ತಮಾಷೆಯಾಗಿ ಸೋನಾಕ್ಷಿ ಅವರ ಹೊಟ್ಟೆಯ ಮೇಲೆ ಕೈಯಿಟ್ಟಿದ್ದರು. ಇದನ್ನು ಕಂಡ ಸೋನಾಕ್ಷಿ ನಕ್ಕು "ಜಹೀರ್!" ಎಂದು ಕರೆದಿದ್ದರು. ನಂತರ ಜಹೀರ್ ನಾವು ತಮಾಷೆ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ವದಂತಿ ತಳ್ಳಿಹಾಕಿದ್ದರು. ಈ ಹಿಂದೆಯೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಾಗ ಸೋನಾಕ್ಷಿ ಪ್ರಗ್ನೆಂಟ್ ಇರಬೇಕು ಎಂಬ ಗಾಸಿಪ್ ಹರಿದಾಡಿತ್ತು. ಆಗ ಅವರು ʼʼಯಾವಾಗಲೂ ನನ್ನನ್ನು ಕಂಡು 'ಗರ್ಭಿಣಿ' ಎಂದು ಏಕೆ ಭಾವಿಸುತ್ತಾರೆ?ʼʼ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದರು.
2024ರ ಜೂನ್ 23ರಂದು ಮುಂಬೈಯ ಬಾಂದ್ರಾದಲ್ಲಿ ನಟಿ ಸೋನಾಕ್ಷಿ ಮತ್ತು ಜಹೀರ್ ತಮ್ಮ ಕುಟುಂಬ ಮತ್ತು ಆಪ್ತ ಸಮ್ಮುಖದಲ್ಲಿ ವಿವಾಹವಾದರು. ಸೋನಾಕ್ಷಿ ಸಿನ್ಹಾ ಮುಂದಿನ ಸಿನಿಮಾ 'ಜಾಟಾಧಾರ' ಆಗಿದ್ದು, ಇದರಲ್ಲಿ ಅವರೊಂದಿಗೆ ಸುಧೀರ್ ಬಾಬು ಮತ್ತು ದಿವ್ಯಾ ಖೋಸ್ಲಾ ನಟಿಸುತ್ತಿದ್ದಾರೆ.