ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shah Rukh Khan: ಶಾರುಖ್ ಖಾನ್ ಮನೆಯಲ್ಲಿಈ ಬಾರಿ ಐಷಾರಾಮಿ ದೀಪಾವಳಿ ಪಾರ್ಟಿ ಇದೆಯೇ?

Shah Rukh Khan: ಬೆಳಕಿನ ಹಬ್ಬ ದೀಪಾವಳಿ ಬರಲು ಇನ್ನೇನು ಕೆಲವೇ ದಿನ ಬಾಕಿ. ಹಬ್ಬಕ್ಕೆ ಎಲ್ಲೆಡೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದೆ. ಈ ವರ್ಷ ಕೂಡ ಅನೇಕ ಸೆಲೆಬ್ರಿಟಿಗಳು ದೀಪಾವಳಿ ಪಾರ್ಟಿಯನ್ನು ಆಯೋಜಿಸುತ್ತಿದ್ದಾರೆ. ಹಾಗಿದ್ದರೂ ಬಹುತೇಕರು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಪಾರ್ಟಿಗಾಗಿಯೇ ಎದುರು ನೋಡುತ್ತಿದ್ದಾರೆ. ಹಾಗಿದ್ರೆ ಶಾರುಖ್ ಮನೆಯಲ್ಲಿ ಈ ಬಾರಿ ದೀಪಾವಳಿ ಪಾರ್ಟಿ ಇರುತ್ತ?

ಶಾರುಖ್ ಮನೆಯಲ್ಲಿ ಈ ಬಾರಿ ದೀಪಾವಳಿ ಪಾರ್ಟಿ ಇರುತ್ತ?

Shah Rukh Khan -

Profile Pushpa Kumari Oct 17, 2025 7:55 PM

ಮುಂಬೈ: ಬೆಳಕಿನ ಹಬ್ಬ ದೀಪಾವಳಿ ಬರಲು ಇನ್ನೇನು ಕೆಲವೇ ದಿನ ಬಾಕಿ. ಹಾಗಿದ್ದರೂ ಹಬ್ಬಕ್ಕೆ ಎಲ್ಲೆಡೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದೆ. ಅಂತೆಯೇ ಪ್ರತಿ ವರ್ಷದಂತೆ ಈ ಬಾರಿಯೂ ಸೆಲೆಬ್ರಿಟಿಗಳು ದೀಪಾವಳಿ ಪಾರ್ಟಿಯನ್ನು ಆಯೋಜಿಸುತ್ತಿದ್ದಾರೆ. ಹಾಗಿದ್ದರೂ ಬಹುತೇಕರು ಬಾಲಿವುಡ್ ಕಿಂಗ್ ಶಾರುಖ್ ಖಾನ್ (Shah Rukh Khan) ಅವರ ಪಾರ್ಟಿಗಾಗಿಯೇ ಎದುರು ನೋಡುತ್ತಿದ್ದಾರೆ. 2019ರ ಕೋವಿಡ್‌ಗೂ ಮೊದಲು ನಟ ಶಾರುಖ್ ಖಾನ್ ದೀಪಾವಳಿ ಹಬ್ಬವನ್ನು ಐಷಾರಾಮಿ ಪಾರ್ಟಿ ಆಯೋಜಿಸುವ ಮೂಲಕ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದರು. ಈ ಕಾರ್ಯಕ್ರಮಕ್ಕೆ ಬಹುಸಂಖ್ಯಾತ ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಿದ್ದರು. ಆದರೆ ಕೋವಿಡ್ -19 ಬಳಿಕ ನಿರ್ಬಂಧವಿದ್ದ ಕಾರಣ ಪಾರ್ಟಿ ನಡೆದಿರಲಿಲ್ಲ. ಅದಾದ ಬಳಿಕ ಶಾರುಖ್ ಅವರ ಮುಂಬೈಯ ಮನ್ನತ್ ಮನೆಯನ್ನು ನವೀಕರಣ ಮಾಡಬೇಕಿದ್ದ ಕಾರಣ ಈ ಪಾರ್ಟಿ ಆಯೋಜನೆಗೆ ಅಲ್ಲಿ ಕೂಡ ಬ್ರೇಕ್ ಬಿದ್ದಿತ್ತು. ಹೀಗಾಗಿ ಈ ಬಾರಿಯಾದರೂ ಶಾರುಖ್ ಖಾನ್ ಅವರ ಐಷಾರಾಮಿ ಪಾರ್ಟಿ ಇರುತ್ತ ಎಂದು ಸೆಲೆಬ್ರಿಟಿಗಳು ಎದುರು ನೋಡುತ್ತಿದ್ದಾರೆ.

ನಟ ಶಾರುಖ್ ಖಾನ್ ತಮ್ಮ ಹೊಸ ನಿವಾಸದಲ್ಲಿ ಅದ್ಧೂರಿ ದೀಪಾವಳಿ ಪಾರ್ಟಿ ಆಯೋಜಿಸುತ್ತಾರೆ ಎಂದು ಬಹುತೇಕ ಸೆಲೆಬ್ರಿಟಿಗಳು ನಿರೀಕ್ಷಿಸುತ್ತಿದ್ದರು. ಅದರೆ ಅವರು ಈ ಬಾರಿ ಕೂಡ ಪಾರ್ಟಿ ಮಾಡುವುದಿಲ್ಲ ಎಂಬುದು ಖಾತ್ರಿಯಾಗಿದೆ. ನಟ ಶಾರುಖ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ (Pooja Dadlani) ಈ ವರ್ಷ ಪಾರ್ಟಿ ಆಯೋಜಿಸುವುದಿಲ್ಲ ಎಂದು ಖಾಸಗಿ ಮಾಧ್ಯಮ ಒಂದಕ್ಕೆ ಸ್ಪಷ್ಟಪಡಿಸಿದ್ದಾರೆ.

ಶಾರುಖ್ ಖಾನ್ ಮತ್ತು ಗೌರಿ 2018ಕ್ಕಿಂತ ಮೊದಲು ಮನ್ನತ್‌ನಲ್ಲಿ ಬೆಳಕಿನ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದರು. ಈ ಕಾರ್ಯಕ್ರಮಕ್ಕೆ ಸ್ನೇಹಿತರು, ಕುಟುಂಬ ಮತ್ತು ಸೆಲೆಬ್ರಿಟಿ ಗಳನ್ನು ಕೂಡ ವಿಶೇಷವಾಗಿ ಆಹ್ವಾನಿಸುತ್ತಿದ್ದರು. 2018ರಲ್ಲಿ ನಡೆದ ಕಾರ್ಯಕ್ರಮಕ್ಕು ಕೂಡ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಸಾಂಪ್ರದಾಯಿಕ ಉಡುಪುಗಳಲ್ಲಿ ಬಂದು ಈ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದ್ದರು. ಬಾಲಿವುಡ್ ನಟಿ ಕತ್ರಿನಾ ಕೈಫ್, ಶಿಲ್ಪಾ ಶೆಟ್ಟಿ, ಅನನ್ಯ ಪಾಂಡೆ, ರಣಬೀರ್ ಕಪೂರ್ ಮತ್ತಿತರರು ಆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಇದನ್ನು ಓದಿ:Pathashala Movie: ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ದಿನ ತೆರೆಗೆ ಬರಲಿದೆ ʼಪಾಠಶಾಲಾʼ

ಬಳಿಕ 2022ರ ತನಕ ಪಾರ್ಟಿ ಆಯೋಜನೆ ಇರಲಿಲ್ಲ. 2022ರಲ್ಲಿ ಕಡಿಮೆ ಮಟ್ಟದಲ್ಲಿ ಅತಿಥಿಗಳನ್ನು ಆಹ್ವಾನಿಸಿ ಅದ್ಧೂರಿಯಾಗಿ ದೀಪಾವಳಿ ಸೆಲಬ್ರೇಟ್ ಮಾಡಿದ್ದಾರೆ. 2024ರಲ್ಲಿ ಕೂಡ ಪಾರ್ಟಿ ಆಯೋಜಿಸಿದ್ದರು. ಅವರ ಮನ್ನತ್‌ನಲ್ಲಿ ಮನರಂಜನೆ ಕಾರ್ಯಕ್ರಮ ಬಹಳ ಗ್ರ್ಯಾಂಡ್ ಆಗಿ ನಡೆದಿತ್ತು. ರಣವೀರ್ ಸಿಂಗ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಕರಣ್ ಜೋಹರ್ ಮತ್ತು ಇತರ ಪ್ರಸಿದ್ಧ ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ 250ಕ್ಕೂ ಹೆಚ್ಚು ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆದರೆ ಈ ಬಾರಿ ಹೊಸ ಮನೆಯಲ್ಲಿ ಅವರು ದೀಪಾವಳಿ ಆಚರಣೆಯ ಗ್ರ್ಯಾಂಡ್ ಪಾರ್ಟಿಗೆ ಬ್ರೇಕ್ ಹಾಕಿದ್ದಾರೆ.

ಶಾರುಖ್ ಖಾನ್‌ನಂತೆ ಆಯುಷ್ಮಾನ್ ಖುರಾನ ಕೂಡ ದೀಪಾವಳಿ ಪಾರ್ಟಿ ಆಯೋಜನೆ ಕೈ ಬಿಟ್ಟಿದ್ದಾರೆ. ನಟ ಶಾರುಖ್ ಖಾನ್ ಮನೆಯಲ್ಲಿ ಯಾವುದೇ ಪಾರ್ಟಿ ಆಯೋಜನೆ ಇಲ್ಲ ಎಂಬುದು ಖಾತರಿಯಾಗಿದ್ದು ಉಳಿದ ಸೆಲೆಬ್ರಿಟಿಗಳಿಗೆ ಈ ವಿಚಾರ ಬೇಸರ ತರಿಸಿದೆ. ಸದ್ಯ ಅವರು 'ಕಿಂಗ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಈ ಚಿತ್ರವು 2026ರಲ್ಲಿ ಬಿಡುಗಡೆಯಾಗಲಿದೆ.