OTT Movie Releases This Week: ಒಟಿಟಿಯಲ್ಲಿ ಈ ವಾರ ಸೌತ್ ಸಿನಿಮಾಗಳ ಅಬ್ಬರ!
OTT Movie Releases This Week: ಸಿನಿ ಪ್ರಿಯರಿಗೆ ಸಿಹಿ ಉಣ ಬಡಿಸಲು ಹಲವು ವಿಭಿನ್ನ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿವೆ. ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ಅಪರಾಧ ಥ್ರಿಲ್ಲರ್ ಸಿನಿಮಾದಿಂದ ಹಿಡಿದು ಸೈಕಲಾಜಿಕಲ್ ಥ್ರಿಲ್ಲರ್‌ವರೆಗೆ ಎಲ್ಲಾ ಜಾನರ್‌ಗಳು ಸಿನಿಮಾಗಳು (Cinema OTT) ಒಟಿಟಿಗೆ ಬಂದಿವೆ?
ಒಟಿಟಿ ಸಿನಿಮಾಗಳು -
ಜುಲೈ 2026 ರ ಕೊನೆಯ ವಾರ ಸಾಲು ಸಾಲು ಸಿನಿಮಾಗಳು ಒಟಿಟಿಗೆ (OTT) ಎಂಟ್ರಿ ಕೊಡಲಿವೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಮಲಯಾಳಂ ನಾಟಕ ಚಿನ್ನ ಚಿನ್ನ ಆಸೈ, ಶ್ರೀನಿವಾಸ ಮಂಗಾಪುರಂ, ಉನ್ಮಾಧಮ್, ಪ್ಲುಟೊ ಸೇರಿದಂತೆ ಯಾವೆಲ್ಲ ಸಿನಿಮಾಗಳು (Cinema OTT) ಒಟಿಟಿಗೆ ಬಂದಿವೆ?
ಬಾಲನ್: ದಿ ಬಾಯ್ - Zee5 (ಜುಲೈ 31)
ಬಾಲನ್ - ದಿ ಬಾಯ್ ಒಂದು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು Zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಹಾರ್ಟ್ ಬೀಟ್ ಸೀಸನ್ 3 - ಜಿಯೋಹಾಟ್‌ಸ್ಟಾರ್ (ಜುಲೈ 30)
ಈ ತಮಿಳು ಪ್ರ ರೊಮ್ಯಾಂಟಿಕ್ ಸಿನಿಮಾ ಇದಾಗಿದೆ. ದೀಪಕ್ ಸುಂದರರಾಜನ್, ಅಬ್ದುಲ್ ಕಬೀಜ್ ಮತ್ತು ಚಿದಂಬರಂ ಮಣಿವಣ್ಣನ್ ನಿರ್ದೇಶಿಸಿದ್ದಾರೆ. ದೀಪಾ ಬಾಲು, ಅನುಮೋಲ್, ಚಾರುಕೇಶ್ ಎಂ ಮತ್ತು ಕಾರ್ತಿಕ್ ಕುಮಾರ್ ತಾರಾಗಣದ ಭಾಗವಾಗಿದ್ದಾರೆ. ಜಿಯೋಹಾಟ್‌ಸ್ಟಾರ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಇದನ್ನೂ ಓದಿ: Amruthadhaare Serial: ಐಪಿಎಸ್ ಮಲ್ಲಿ ರಾಕ್ ಜೈದೇವ್ ಶಾಕ್! ಮನದರಸಿ ಭೂಮಿಗಾಗಿ ಗೌತಮ್ ಚೌಕಾಸಿ
ಲವ್ ಓ ಲವ್ - ಪ್ರೈಮ್ ವಿಡಿಯೋ (ಜುಲೈ 31)
ಮಗೇಶ್ ರಾಜೇಂದ್ರನ್ ನಿರ್ದೇಶನದ ಈ ತಮಿಳು ರೊಮ್ಯಾಂಟಿಕ್ ಕಾಮಿಡಿಯಲ್ಲಿ ಪವೀಶ್ ನಾರಾಯಣ್, ನಾಗ ದುರ್ಗ, ಸೆಲ್ವರಾಘವನ್, ಕೆ ಎಸ್ ರವಿಕುಮಾರ್, ವನಿತಾ ವಿಜಯಕುಮಾರ್, ರಮ್ಯಾ, ಅಶ್ವಥ್ ಮತ್ತು ಸೌಂದರ್ಯ ನಟಿಸಿದ್ದಾರೆ.
ಚಿನ್ನ ಚಿನ್ನ ಆಸೆ - JioHotstar (ಜುಲೈ 28)
ಈ ಮಲಯಾಳಂ ಇಂದ್ರನ್ಸ್, ಮಧು ಶಾ, ಅಪರ್ಣಾ ಬಾಲಮುರಳಿ, ತಂಬಿ ರಾಮಯ್ಯ, ಕಾಳಿ ವೆಂಕಟ್ ಮತ್ತು ವಿಷ್ಣು ಅಗಸ್ತ್ಯ ನಟಿಸಿದ್ದಾರೆ. ಮಾನವ ಸಂಬಂಧಗಳು ಮತ್ತು ಪುಟ್ಟ ಸಂತೋಷಗಳ ಸುತ್ತ ಈ ಕಥೆ ಸಾಗುತ್ತದೆ. ನಟ ಇಂದ್ರನ್ಸ್ ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದರೆ, ನಟಿ ಮಧೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯ ನಟ ಇಂದ್ರನ್ಸ್ ಮತ್ತು ನಟಿ ಮಧೂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ, ಮನುಷ್ಯನ ಪುಟ್ಟ ಪುಟ್ಟ ಆಸೆಗಳು ಮತ್ತು ಜೀವನದ ಪಯಣದ ಕಥೆಯನ್ನು ಹೊಂದಿದೆ. ವಿಶೇಷವೆಂದರೆ, ಕರ್ನಾಟಕದ ಪ್ರೇಕ್ಷಕರಿಗಾಗಿ ಈ ಸಿನಿಮಾ ಕನ್ನಡದಲ್ಲೂ ಲಭ್ಯವಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ.
ದೀವಾನಾ - ಆಹಾ ವಿಡಿಯೋ (ಜುಲೈ 31)
ತೆಲುಗು ಸಿನಿಮಾ ಹರ್ಷಿತ್ ಆರ್, ಸ್ಮೇಹಾ ಮಣಿಮೇಗಲೈ, ನರೇಶ್ ವಿಜಯ್ ಕೃಷ್ಣ ಮತ್ತು ಜೀವನ್ ಕುಮಾರ್ ನಟಿಸಿದ್ದಾರೆ.
ಆಜಾದಿ 501 - ಆಹಾ ವಿಡಿಯೋ (ಜುಲೈ 29)
ತೇಜ ಕಲ್ವಕೋಟ, ಹರ್ಷ ವರ್ಧನ್ ಮತ್ತು ಗೀತಾ ಭಾಸ್ಕರ್ ನಟಿಸಿರುವ ಈ ಥ್ರಿಲ್ಲರ್ ಸಿನಿಮಾ ಇದಾಗಿದೆ. ಶಿವ ತೇಜ ನಿರ್ದೇಶನದ ಈ ಸಿನಿಮಾ ಸ್ಮಾರ್ಟ್‌ಫೋನ್ ಸಂಬಂಧಿತ ಹಗರಣ ಕುರಿತಾಗಿ ಇದೆ.
ಇದನ್ನೂ ಓದಿ: Ramayana Movie: ʻರಾಮಾಯಣʼ ಸೆಟ್‌ನಲ್ಲಿ ಶಿವನ ಭಕ್ತಿಗೀತೆ! ನಟ ಯಶ್ ಹೇಳಿದ್ದೇನು?
ಭುವನಂ ಗಗನಂ - Zee5 (ಜುಲೈ 31)
ಗಿರೀಶ್ ಮೂಲಿಮನಿ ನಿರ್ದೇಶನದ ಈ ಕನ್ನಡ ರೋಮ್ಯಾಂಟಿಕ್ ಡ್ರಾಮಾದಲ್ಲಿ ಪ್ರಮೋದ್ ಪಂಜು, ಪೃಥ್ವಿ ಅಂಬಾರ್, ರೇಚೆಲ್ ಡೇವಿಡ್, ಪೊನ್ನು ಅಶ್ವತಿ ಮತ್ತು ಶರತ್ ಲೋಹಿತಾಸ್ವ ನಟಿಸಿದ್ದಾರೆ. 'ಭುವನಂ ಗಗನಂ' ಸಿನಿಮಾ ಲವ್, ರೊಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಅಂಶಗಳುಳ್ಳ ಕಥಾಹಂದರವನ್ನೊಳಗೊಂಡಿದೆ.