ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Spanish music: ಮೇ.23ಕ್ಕೆ ನಗರದಲ್ಲಿ ಸ್ಪೇನ್‌ ಸಂಗೀತ ಸಂಜೆ

ಇದು ಕಲೆ, ಸಂಗೀತ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಮೂಲಕ ಪ್ರೇಕ್ಷಕರನ್ನು ಒಂದು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯುತ್ತದೆ. ಸ್ಪೇನ್‌ನಿಂದಲೇ ಬರಲಿರುವ ಸಂಗೀತಗಾರರು, ರಂಗಭೂಮಿ ಕಲಾವಿದರು ನಗರದಲ್ಲಿ ಕಲೆಯನ್ನು ಉಣಬಡಿಸಲಿದ್ದಾರೆ. ಯುರೋಪ್, ಅಮೆರಿಕ, ಮಧ್ಯಪ್ರಾಚ್ಯ ಮತ್ತು ಏಷ್ಯಾದಾದ್ಯಂತ ಈಗಾಗಲೇ 70 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಎಲ್ರೊ, ಈಗ ಬೆಂಗಳೂರಿನಲ್ಲಿ ತನ್ನ ಮೊದಲ ಆವೃತ್ತಿಯನ್ನು ಆರಂಭಿಸುತ್ತಿದೆ

Spanish music: ನಗರದಲ್ಲಿ ಸ್ಪೇನ್‌ ಸಂಗೀತ ಸಂಜೆ ಮೇ.23ಕ್ಕೆ

-

Profile
Ashok Nayak Apr 8, 2026 9:22 PM

ಬೆಂಗಳೂರು: ಎಂಆರ್ ಬಿ ಲೈವ್ ಎಂಟರ್‌ಟೈನ್‌ಮೆಂಟ್ ಮತ್ತು ರಾಯ್ಸ್ ವೆಂಚರ್ಸ್ ಸಹಯೋಗ ದಲ್ಲಿ ಸ್ಪೇನ್‌ನ ಅತ್ಯಂತ ಕ್ರೇಜಿ ಹಬ್ಬ ‘ ಎಲ್ರೋʼ (elrow) ಎಂಬ ʼನಿಯೋ ಕಾಮೋಸ್ ಗಾರ್ಡನ್’ ಎಂಬ ಸಂಗೀತ ಸಂಜೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಮೇ.23 ರಂದು ನಡೆಯಲಿದೆ.

ಇದು ಕಲೆ, ಸಂಗೀತ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಮೂಲಕ ಪ್ರೇಕ್ಷಕರನ್ನು ಒಂದು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯುತ್ತದೆ. ಸ್ಪೇನ್‌ನಿಂದಲೇ ಬರಲಿರುವ ಸಂಗೀತಗಾರರು, ರಂಗಭೂಮಿ ಕಲಾವಿದರು ನಗರದಲ್ಲಿ ಕಲೆಯನ್ನು ಉಣಬಡಿಸಲಿದ್ದಾರೆ. ಯುರೋಪ್, ಅಮೆರಿಕ, ಮಧ್ಯಪ್ರಾಚ್ಯ ಮತ್ತು ಏಷ್ಯಾದಾದ್ಯಂತ ಈಗಾಗಲೇ 70 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಎಲ್ರೊ, ಈಗ ಬೆಂಗಳೂರಿನಲ್ಲಿ ತನ್ನ ಮೊದಲ ಆವೃತ್ತಿಯನ್ನು ಆರಂಭಿಸುತ್ತಿದೆ.

ಇದನ್ನೂ ಓದಿ: Udupa Music Festival: ʼಉಡುಪ ಸಂಗೀತೋತ್ಸವʼ ಕ್ಕೆ ಪಂಡಿತ್ ವೆಂಕಟೇಶ್‌ ಕುಮಾರ್ ಚಾಲನೆ

ಈ ಕುರಿತು ಮಾತನಾಡಿದ ಎಮ್‌ಆರ್‌ಬಿ ಲೈವ್ ಎಂಟರ್‌ಟೈನ್‌ಮೆಂಟ್‌ನ ಸ್ಥಾಪಕ ಮತ್ತು ಎಂಡಿ ಶ್ರೀ ಬಾಲಾಜಿ ಮನೋಹರನ್, ಇಂದಿನ ಭಾರತೀಯ ಪ್ರೇಕ್ಷಕರು ಜಾಗತಿಕ ಮಟ್ಟದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಬಯಸುತ್ತಿದ್ದಾರೆ. ಅಂತಾರಾಷ್ಟ್ರೀಯವಾಗಿ ಯಶಸ್ವಿ ಕಾರ್ಯಕ್ರಮಗಳನ್ನು ಭಾರತದಲ್ಲಿ ಪ್ರಸ್ತುತ ಪಡಿಸುವುದು ನಮ್ಮ ಗುರಿ ಎಂದರು.

ರಾಯ್ಸ್ ವೆಂಚರ್ಸ್‌ನ ಸ್ಥಾಪಕ ರೇಮಂಡ್ ರಾಯ್ ಮಾತನಾಡಿ, ಜಾಗತಿಕ ಅನುಭವ ನೀಡಲಿ ರುವ ಮನೋರಂಜನಾ ಕಾರ್ಯಕ್ರಮವು ಭಾರತದಲ್ಲಿ ಯಶಸ್ವಿಗೊಳ್ಳಲಿದೆ. ಇಂತಹ ಕಾರ್ಯಕ್ರಮ ಗಳನ್ನು ಹೆಚ್ಚಾಗಿ ನಮ್ಮ ಜನ ಸ್ವೀಕರಿಸಲಿದ್ದಾರೆ ಎಂದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 15,000 ಜನರು ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರು ಆವೃತ್ತಿಯ ಟಿಕೆಟ್‌ಗಳು ಪ್ರತ್ಯೇಕವಾಗಿ ಜೊಮಾಟೊದ District ಆ್ಯಪ್‌ನಲ್ಲಿ ಲಭ್ಯವಿರುತ್ತವೆ. 'ಅರ್ಲಿ ಬರ್ಡ್' ಟಿಕೆಟ್ ಮಾರಾಟವು 3 ಏಪ್ರಿಲ್ 2026 ರಂದು ಪ್ರಾರಂಭವಾಗಲಿದೆ.