ಮಲಯಾಳಂನ ʻಪಳ್ಳಿ ಚಟ್ಟಂಬಿʼ ಚಿತ್ರಕ್ಕೆ ಸಾಥ್ ನೀಡಿದ ʻಹೊಂಬಾಳೆ ಫಿಲ್ಮ್ಸ್ʼ; ಕೊನೇ ಕ್ಷಣದಲ್ಲಿ ಈ ಸಿನಿಮಾ ಪೋಸ್ಟ್‌ಪೋನ್ ಆಗಿದ್ದೇಕೆ?
Palli Chattambi Release Date: ಮಲಯಾಳಂ ನಟ ಟೊವಿನೋ ಥಾಮಸ್ ಅಭಿನಯದ ಬಹುನಿರೀಕ್ಷಿತ ‘ಪಳ್ಳಿ ಚಟ್ಟಂಬಿ’ ಚಿತ್ರದ ಬಿಡುಗಡೆ ದಿನಾಂಕ ಬದಲಾಗಿದೆ. ಏಪ್ರಿಲ್ 10ಕ್ಕೆ ಬರಬೇಕಿದ್ದ ಈ ಸಿನಿಮಾ ಕೇರಳ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ.
-
ಮಲಯಾಳಂನ ಸ್ಟಾರ್ ನಟ ಟೊವಿನೋ ಥಾಮಸ್ ಅವರ ಮುಂದಿನ ಸಿನಿಮಾ ‘ಪಳ್ಳಿ ಚಟ್ಟಂಬಿ’ ತೆರೆಗೆ ಸಿದ್ಧವಾಗಿದೆ. ಈ ಚಿತ್ರವು ಕನ್ನಡದಲ್ಲೂ ತೆರೆಗೆ ಬರುತ್ತಿದ್ದು, ಕನ್ನಡದ ಜೊತೆಗೂ ಈ ಚಿತ್ರಕ್ಕೂ ಸಾಕಷ್ಟು ನಂಟಿದೆ ಎಂಬುದು ವಿಶೇಷ. ಏಪ್ರಿಲ್ 15ರಂದು ತೆರೆಕಾಣುತ್ತಿರುವ ಈ ಸಿನಿಮಾದ ಬಗ್ಗೆ ಮಾತನಾಡಲು ಟೊವಿನೋ ಥಾಮಸ್ ಅವರು ಈಚೆಗೆ ಬೆಂಗಳೂರಿಗೆ ಆಗಮಿಸಿದ್ದರು. ಜೊತೆಗೆ ನಾಯಕಿ ಕಯಾದು ಲೋಹರ್ ಕೂಡ ಆಗಮಿಸಿದ್ದರು.
‘ಪಳ್ಳಿ ಚಟ್ಟಂಬಿ’ ಚಿತ್ರಕ್ಕೆ ಕನ್ನಡ ನಂಟು
ಪ್ಯಾನ್ ಇಂಡಿಯಾ ಸಿನಿಮಾ ‘ಪಳ್ಳಿ ಚಟ್ಟಂಬಿ’ಯನ್ನು ಕರುನಾಡಿನಲ್ಲಿ ವಿತರಣೆ ಮಾಡುತ್ತಿರುವುದು ಕೆಜಿಎಫ್, ಕಾಂತಾರ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್. ಇನ್ನು, ನಾಯಕಿಯಾಗಿ ನಟಿಸಿರುವ ಕಯಾದು ಲೋಹರ್ ಅವರ ವೃತ್ತಿ ಬದುಕು ಆರಂಭವಾಗಿದ್ದೇ ಸ್ಯಾಂಡಲ್‌ವುಡ್‌ನಿಂದ ಎಂಬುದು ಮತ್ತೊಂದು ವಿಶೇಷ. ಮನೋರಂಜನ್ ರವಿಚಂದ್ರನ್ ಅವರ ʻಮುಗಿಲ್‌ಪೇಟೆʼ ಸಿನಿಮಾದ ಮೂಲಕವೇ ಕಯಾದು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು. ಇನ್ನು, ಪಳ್ಳಿ ಚಟ್ಟಂಬಿ ಚಿತ್ರದಲ್ಲಿ ಕರ್ನಾಟಕದ ಯಕ್ಷಗಾನದ ಕಲೆಯನ್ನು ಬಳಕೆ ಆಗಿದೆಯಂತೆ. ಮಲಯಾಳಂ ವರ್ಷನ್‌ನಲ್ಲೂ ಕನ್ನಡದ ಸಂಭಾಷಣೆಗಳು ಇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.
Rishab Shetty: ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್ ಶೆಟ್ಟಿ!
ಟೊವಿನೋ ಥಾಮಸ್ ಹೇಳಿದ್ದೇನು?
"ನಾನು ನಟಿಸಿದ ಸಿನಿಮಾಗಳು ಕರ್ನಾಟಕದಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಕನ್ನಡಿಗರು ನನ್ನ ಸಿನಿಮಾಗಳಿಗೆ ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ಕರ್ನಾಟಕ ನನಗೆ ಹೊಸದಲ್ಲ, ಬಾಲ್ಯದಿಂದಲೂ ನಾನು ಇಲ್ಲಿ ಬರುತ್ತಿದ್ದೇನೆ. ನಮ್ಮ ಶಾಲಾ ದಿನಗಳಲ್ಲಿ ಪ್ರವಾಸಕ್ಕೆಂದು ಬೆಂಗಳೂರು ಹಾಗೂ ಮೈಸೂರಿಗೆ ಕರೆದುಕೊಂಡು ಬರುತ್ತಿದ್ದರು. ನನ್ನ ಗೆಳೆಯರು ಇಲ್ಲಿ ಓದಿದ್ದಾರೆ. ಆಗ ಬಂದು ನಾನು ಇಲ್ಲಿ ಉಳಿದುಕೊಳ್ಳುತ್ತಿದ್ದೆ. ನನ್ನ ʻಡಿಯರ್ ಫ್ರೆಂಡ್ʼ ಸಿನಿಮಾದ ಬೆಂಗಳೂರಿನಲ್ಲೇ ನಡೆದಿತ್ತು. ಆಗ ಒಂದು ತಿಂಗಳು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದೆ. ಇಲ್ಲಿನ ಊಟದ ಶೈಲಿಯನ್ನು ಎಂಜಾಯ್ ಮಾಡಿದ್ದೆ" ಎಂದು ಟೊವಿನೋ ಥಾಮಸ್ ಹೇಳಿದ್ದಾರೆ.
Rishab Shetty: ಹೊಂಬಾಳೆ ಅನ್‌ಫಾಲೋ ಮಾಡಿದ್ರಾ ರಿಷಬ್? ತಮ್ಮ ಬ್ಯಾನರ್‌ನಲ್ಲೇ ಈ ಹೊಸ ಸಿನಿಮಾ!
"ನಿಮ್ಮೆಲ್ಲರ ಪ್ರೀತಿಯನ್ನು ನನ್ನ ಹೊಸ ‘ಪಳ್ಳಿ ಚಟ್ಟಂಬಿ’ ಚಿತ್ರಕ್ಕೂ ನೀಡಿ. ಈ ಸಿನಿಮಾದ ಶೂಟಿಂಗ್ ಕಳೆದ ವರ್ಷ ಮುಗಿದಿತ್ತು. ಖಂಡಿತ ಈ ಸಿನಿಮಾ ನಿಮಗೆ ಇಷ್ಟವಾಗುತ್ತದೆ ಎಂಬುದು ನನ್ನ ಭಾವನೆ. ನಾವು ಕೇವಲ ನೆರೆಹೊರೆಯವರಲ್ಲ, ನಾವು ರಕ್ತ ಸಂಬಂಧಿಗಳು. ದಕ್ಷಿಣದ ಎಲ್ಲಾ ಭಾಷೆಗಳ ಮಧ್ಯೆ ಸಾಮ್ಯತೆ ಇದೆ" ಎಂದು ಟೊವಿನೋ ಥಾಮಸ್ ಹೇಳಿದ್ದಾರೆ.
ಮುಗಿಲ್ ಪೇಟೆ ಸುಂದರಿ ಕಯಾದು
"ನನಗೆ ಪಳ್ಳಿ ಚಟ್ಟಂಬಿ ವಿಶೇಷವಾದ ಸಿನಿಮಾ. ರೆಬೇಕಾ ರೀತಿಯ ಪಾತ್ರ ಮಾಡಬೇಕು ಎಂಬ ಕನಸು ಇತ್ತು. ಅದು ಈಗ ನೆರವೇರಿದೆ. ನಾನು ಶೇ.100ರಷ್ಟು ಶ್ರಮ ಹಾಕಿದ್ದೇನೆ. ‘ಮುಗಿಲ್ ಪೇಟೆ’ ಸಿನಿಮಾದಿಂದ ನನ್ನ ಸಿನಿ ಜರ್ನಿ ಶುರುವಾಯಿತು. ನನ್ನ ಮೊದಲ ಸಿನಿಮಾಗೆ ತೋರಿಸಿದ ಪ್ರೀತಿಯನ್ನು ಈಗ ಪಳ್ಳಿ ಚಟ್ಟಂಬಿಗೂ ತೋರಿಸಿ" ಎನ್ನುತ್ತಾರೆ ನಟಿ ಕಯಾದು ಲೋಹರ್.
ʻಪಳ್ಳಿ ಚಟ್ಟಂಬಿʼ ಸಿನಿಮಾ ಪೋಸ್ಟ್‌ಪೋನ್ ಆಗಿದ್ದೇಕೆ?
ಎಲ್ಲಾ ಅಂದುಕೊಂಡರೆ ʻಪಳ್ಳಿ ಚಟ್ಟಂಬಿʼ ಸಿನಿಮಾವು ಏಪ್ರಿಲ್ 10ರಂದು ತೆರೆಗೆ ಬರಬೇಕಿತ್ತು. ಆದರೆ ಕೇರಳದಲ್ಲಿ ಈಗ ಚುನಾವಾಣೆ ಇರುವ ಕಾರಣ, ಈ ಸಿನಿಮಾವನ್ನು ಏಪ್ರಿಲ್ 15ಕ್ಕೆ ಪೋಸ್ಟ್‌ಪೋನ್ ಮಾಡಲಾಗಿದೆ. ‘ಜನ ಗಣ ಮನ’ ಖ್ಯಾತಿಯ ನಿರ್ದೇಶಕ ಡಿಜೋ ಜೊಸೆ ಆಂಟೋನಿ ಅವರು ‘ಪಳ್ಳಿ ಚಟ್ಟಂಬಿ' ಚಿತ್ರದ ಮೂಲಕ 1950ರ ಕಾಲಘಟ್ಟದ ಒಂದು ಹಳ್ಳಿಯ ಕಥೆಯನ್ನು ಹೇಳಲಿದ್ದಾರಂತೆ.
ಈ ಚಿತ್ರಕ್ಕೆ ಎಸ್. ಸುರೇಶ್ ಬಾಬು ಕಥೆ ಬರೆದಿದ್ದಾರೆ. ಟಿಜೋ ಟಾಮಿ ಛಾಯಾಗ್ರಹಣ ಮಾಡಿದ್ದು, ಜೇಕ್ಸ್ ಬಿಜೋಯ್ ಸಂಗೀತ ನೀಡಿದ್ದಾರೆ. ‘ಪಳ್ಳಿ ಚೆಟ್ಟಂಬಿ’ ಚಿತ್ರವನ್ನು ವರ್ಲ್ಡ್ ವೈಡ್ ಫಿಲಂಸ್, ಸಿ ಕ್ಯೂಬ್ ಬ್ರೋಸ್ ಎಂಟರ್ಟೇನ್ಮೆಂಟ್ ಅಡಿಯಲ್ಲಿ ನೌಫಲ, ಬ್ರಿಜೇಶ್, ಚಾಣುಕ್ಯ ಚೈತನ್ಯ, ಚರಣ್ ನಿರ್ಮಾಣ ಮಾಡಿದ್ದಾರೆ.