Jackie Chan: ಸೂಪರ್ ಸ್ಟಾರ್ ಜಾಕಿ ಚಾನ್ ನಿಧನ? ಈ ಸುದ್ದಿ ನಿಜವೇ? ಭಾರೀ ವೈರಲ್ ಆಗ್ತಿದೆ ಈ ಪೋಸ್ಟ್
ಕರಾಟೆ, ಮಾರ್ಷಲ್ ಆರ್ಟ್ಸ್ ಮತ್ತು ಇತರ ಸಾಹಸಗಳಿಗೆ ಹೆಸರುವಾಸಿಯಾಗಿದ್ದ ಜಾಕಿ ಚಾನ್ ಸಿನಿಮಾಗಳೆಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಅವರಿಗೆ ಈಗ ವಯಸ್ಸು71 ದಾಟಿದ್ದು ಸಿನಿಮಾ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇತ್ತೀಚೆಗಷ್ಟೇ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದು ಫೇಕ್ ನ್ಯೂಸ್ ಎಂದು ದೃಢಪಟ್ಟಿದೆ.
ನಟ ಜಾಕಿ ಚಾನ್(ಸಂಗ್ರಹ ಚಿತ್ರ) -
ನವದೆಹಲಿ: ವಿಶ್ವದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಜಾಕಿ ಚಾನ್ (Jackie Chan) ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕರಾಗಿ ಮತ್ತು ಸ್ಟಂಟ್‌ಮ್ಯಾನ್ ಆಗಿ ಇವರು ಪ್ರಸಿದ್ಧರಾಗಿದ್ದಾರೆ. ಕರಾಟೆ, ಮಾರ್ಷಲ್ ಆರ್ಟ್ಸ್ ಮತ್ತು ಇತರ ಸಾಹಸಗಳಿಗೆ ಹೆಸರುವಾಸಿಯಾಗಿದ್ದ ಇವರ ಸಿನಿಮಾಗಳೆಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಅವ ರಿಗೆ ಈಗ ವಯಸ್ಸು71 ದಾಟಿದ್ದು ಸಿನಿಮಾ ಕೆಲಸ ಮಾಡಲು ಸಾಧ್ಯ ವಾಗುತ್ತಿಲ್ಲ. ಅಲ್ಲದೆ ಇತ್ತೀಚೆ ಗಷ್ಟೇ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲ ಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದು ಫೇಕ್ ನ್ಯೂಸ್ ಎಂದು ದೃಢಪಟ್ಟಿದೆ.
ಆ್ಯಕ್ಷನ್-ಕಾಮಿಡಿ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಜಾಕಿ ಚಾನ್ ಅವರು ಇದುವರೆಗೆ 150ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2016 ರ ಗೌರವ ಆಸ್ಕರ್ (Oscars) ಪ್ರಶಸ್ತಿ ವಿಜೇತ, ಪ್ರಸಿದ್ಧ ಜಾಕಿ ಚಾನ್,ಕೆಲವು ತಿಂಗಳುಗಳ ಚಿಕಿತ್ಸೆಯ ನಂತರ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಕುಟುಂಬದಿಂದ ಕೂಡ ಈ ಬಗ್ಗೆ ಪ್ರತಿಕ್ರಿಯೆ ಶೀಘ್ರವೇ ಸಿಗುತ್ತದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡಿದೆ.
Facebook’s latest fake news: Jackie Chan has passed.
— Digital Gal 🌸 (@DigitalGal_X) November 10, 2025
He hasn’t. pic.twitter.com/fxBdLGuRCf
ಅವರು ಫೈಟಿಂಗ್ ,ಆ್ಯಕ್ಷನ್ ದೃಶ್ಯಗಳಿಂದ ತುಂಬಾ ಫೇಮಸ್ ಆದ ಕಾರಣ ಈ ದೃಶ್ಯಗಳ ಚಿತ್ರೀ ಕರಣದ ಸಂದರ್ಭದಲ್ಲಿ ಅವರಿಗೆ ಅನೇಕ ಸಲ ಗಾಯಗಳು ಆಗಿವೆ. ಹೀಗಾಗಿ ಸೆಟ್ ನಲ್ಲಿ ಆದ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಫೋಟೊ ಇಟ್ಟುಕೊಂಡು ಅನಾರೋಗ್ಯಕ್ಕೆ ತುತ್ತಾಗಿ ಸಾವನಪ್ಪಿದ್ದಾರೆ ಎಂದು ಮಾರ್ಪಾಡು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಟ್ವಿಟ್ಟರ್ ಎಕ್ಸ್ ನಲ್ಲಿ ಡಿಜಿಟಲ್ ಗಾಲ್ ಮತ್ತು ರವಿ ಜಿ. ಮಹಾಜನ್ ಅವರು ಪೋಸ್ಟ್ ಹಂಚಿಕೊಂಡಿದ್ದು ಇದು ಫೇಕ್ ನ್ಯೂಸ್ ಎಂಬುದನ್ನು ದೃಢೀಕರಿಸಿದ್ದಾರೆ. ಈ ಮೂಲಕ ಈ ಸುದ್ದಿ ಸುಳ್ಳು ಎಂದು ಅಧಿಕೃತ ವಾಗಿ ಜಾಕಿ ಚಾನ್ ಅವರ ಫ್ಯಾನ್ಸ್ ಫಾಲೋವರ್ಸ್ ಪೇಜ್ ನಲ್ಲಿ ತಿಳಿಸಲಾಗಿದೆ.
ಜಾಕಿ ಚಾನ್ ಅವರು ಜೀವಂತ ವಾಗಿದ್ದಾರೆ, ಆರೋಗ್ಯ ವಾಗಿದ್ದಾರೆ..ಹಾಗಾಗಿ ಈ ಬಗ್ಗೆ ಅನಗತ್ಯ ಸುಳ್ಳು ಸುದ್ದಿ ಹಬ್ಬಿಸಬೇಡಿ. ಅವರು ಈಗ ತಮ್ಮ ಮುಂಬರುವ ಯೋಜನೆಗಳಿಗೆ ತಯಾರಿ ನಡೆ ಸುತ್ತಿದ್ದಾರೆ. ವಯಸ್ಸು 71 ಆಗಿದ್ದರೂ ಈಗಲೂ ಆರೋಗ್ಯಯುತವಾಗಿದ್ದಾರೆ. ದಾರಿತಪ್ಪಿಸುವ ಪೋಸ್ಟ್‌ಗಳು ಆಧಾರರಹಿತವಾಗಿದ್ದು ಸುಳ್ಳು ಸುದ್ದಿಗೆ ಅಭಿಮಾನಿಗಳು ಗೊಂದಲ ಗೊಳ್ಳುವುದು ಬೇಡ ಎಂದು ಫ್ಯಾನ್ಸ್ ಪೇಜ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಬದುಕಿದ್ದಾರೆ ಎಂಬುದನ್ನು ದೃಢಪಡಿಸಲಾಗಿದೆ.
ಇದನ್ನೂ ಓದಿ:Udaala Movie: ಯೋಗರಾಜ್ ಭಟ್ ನಿರ್ಮಾಣದ ʼಉಡಾಳʼ ಚಿತ್ರದ ಟ್ರೇಲರ್ ಔಟ್
ಜಾಕಿ ಚಾನ್ ಸಾವಿನ ವದಂತಿಗಳು ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. 2015 ರಲ್ಲಿಯೂ ಇಂತಹದ್ದೇ ಒಂದು ಸುದ್ದಿ ಹರಿದಾಡಿತ್ತು. ಆಗ ಸ್ವತಃ ಅವರೇ ಈ ಬಗ್ಗೆ ಮಾತನಾಡಿ, ವಿಮಾನದಿಂದ ಇಳಿಯುತ್ತಿದ್ದಂತೆ ಈ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೆ. ಆದರೆ ಚಿಂತಿಸಬೇಡಿ! ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಹೇಳಿದರು.
ಜಾಕಿ ಚಾನ್ ಅಭಿನಯದ ಡ್ರಂಕನ್ ಮಾಸ್ಟರ್ ,ಪೊಲೀಸ್ ಸ್ಟೋರಿ, ರಂಬಲ್ ಇನ್ ದಿ ಬ್ರಾಂಕ್ಸ್ , ಷಾಂಘೈ ನೂನ್ , ಮತ್ತು ಕುಂಗ್ ಫೂ ಪಾಂಡಾ ಇತರೆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಬಳಿಕ ಚಾನ್ ರೈಡ್ ಆನ್ , ದಿ ಲೆಜೆಂಡ್ , ಮತ್ತು ದಿ ಶ್ಯಾಡೋಸ್ ಎಡ್ಜ್ ನಂತಹ ಚಿತ್ರಗಳಲ್ಲಿಯೂ ಕೂಡ ಅವರು ಕಾಣಿಸಿಕೊಂಡಿದ್ದಾರೆ. ಅನಂತರ ಮೇ 2025 ನಲ್ಲಿ ಕರಾಟೆ ಕಿಡ್: ಲೆಜೆಂಡ್ಸ್ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ನ್ಯೂ ಪೊಲೀಸ್ ಸ್ಟೋರಿ 2, ಪ್ರಾಜೆಕ್ಟ್ ಪಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಅದಾದ ಬಳಿಕ ಫೈವ್ ಅಗೇನ್ಸ್ಟ್ ಎ ಬುಲೆಟ್ ಸಿನಿಮಾ ಕೂಡ ಮಾಡಲಿದ್ದಾರೆ.