ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Devil Movie: ದರ್ಶನ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಸಹೋದರ ದಿನಕರ್ ಹೇಳಿದ್ದೇನು?

Actor Darshan: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ‘ಡೆವಿಲ್’ ಸಿನಿಮಾ ಇಂದು (ಡಿಸೆಂಬರ್ 11) ಬಿಡುಗಡೆ ಆಗಿದೆ. ಬೆಂಗಳೂರು ಮಾತ್ರವಲ್ಲದೆ ಹಲವೆಡೆ ಮುಂಜಾನೆ ಶೋ ಅನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಸಿನಿಮಾ ಚೆನ್ನಾಗಿದೆ, ಸೂಪರ್ ಹಿಟ್ ಆಗಲಿದೆ ಎಂದಿದ್ದಾರೆ. ಇದೀಗ ದರ್ಶನ್‌ ಸಹೋದರ ದಿನಕರ್‌ ಮಾಧ್ಯಮವೊಂದಕ್ಕೆ ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ.

ದರ್ಶನ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಸಹೋದರ ದಿನಕರ್ ಹೇಳಿದ್ದೇನು?

ನಟ ದರ್ಶನ್‌ -

Yashaswi Devadiga
Yashaswi Devadiga Dec 11, 2025 11:04 AM

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅಭಿನಯದ ‘ಡೆವಿಲ್’ (The Devil Movie) ಸಿನಿಮಾ ಇಂದು (ಡಿಸೆಂಬರ್ 11) ಬಿಡುಗಡೆ ಆಗಿದೆ. ಬೆಂಗಳೂರು ಮಾತ್ರವಲ್ಲದೆ ಹಲವೆಡೆ ಮುಂಜಾನೆ ಶೋ ಅನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಸಿನಿಮಾ ಚೆನ್ನಾಗಿದೆ, ಸೂಪರ್ ಹಿಟ್ ಆಗಲಿದೆ ಎಂದಿದ್ದಾರೆ. ಇದೀಗ ದರ್ಶನ್‌ ಸಹೋದರ ದಿನಕರ್‌ (Dinakar) ಮಾಧ್ಯಮವೊಂದಕ್ಕೆ ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ.

ದರ್ಶನ್‌ ಗೆಲ್ಲಿಸ್ತಾ ಇದ್ದಾರೆ

ದಿನಕರ್‌ ಮಾತನಾಡಿ, ಅಭಿಮಾನಿಗಳು ಯಾವ ಸಮಯದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ಅಂತ ಬಿರುದು ಕೊಟ್ರೋ ಗೊತ್ತಿಲ್ಲ. ಅಲ್ಲಿಂದ ದರ್ಶನ್‌ ಲೈಫ್‌ನಲ್ಲಿ ಚಾಲೆಂಜ್‌ ಫೇಸ್‌ ಮಾಡ್ತಾ ಇದ್ದಾರೆ. ಆದ್ರೆ ಆ ಚಾಲೆಂಜಸ್‌ನ ದರ್ಶನ್‌ ಮಾತ್ರ ಅಲ್ಲ ಅವರ ಸೆಲೆಬ್ರಿಟಿಸ್‌ ಕೂಡ ಫೇಸ್‌ ಮಾಡ್ತಾ ಇದ್ದಾರೆ. ದರ್ಶನ್‌ ಗೆಲ್ಲಿಸ್ತಾ ಇದ್ದಾರೆ. ಅವರು ಗೆಲ್ತಾ ಇದ್ದಾರೆ.

ಇದನ್ನೂ ಓದಿ: The Devil First Half Review: ಕರುನಾಡಿನೆಲ್ಲೆಡೆ ದರ್ಶನ್ ಅಬ್ಬರ; ಹೇಗಿದೆ ‘ಡೆವಿಲ್‌’ ಸಿನಿಮಾ ಫಸ್ಟ್ ಹಾಫ್?

ದರ್ಶನ್‌ ಸಿನಿಮಾದಲ್ಲಿ ಮಾತ್ರ ಚಾಲೆಂಜಿಂಗ್‌ ಸ್ಟಾರ್‌. ಮನೆಯಲ್ಲಿ ದರ್ಶನ್‌. ಸ್ಟಾರ್‌ ತರ ಮನೆಯಲ್ಲಿ ಥರ ಇರಲ್ಲ. ಕಾನೂನುಗಿಂತ ದೊಡ್ಡವರು ಯಾರೂ ಇಲ್ಲ. ದರ್ಶನ್‌ ಗೆ ಆತಂಕ ಕೂಡ ಆಯ್ತು. ಸಿನಿಮಾ ಬಗ್ಗೆ ಯೋಚನೆ ಮಾಡ್ತಾ ಇದ್ದರು. ಪ್ರಕಾಶ್‌ ಅವರಿಗೆ ಸಪೋರ್ಟ್‌ ಮಾಡಿ ಎಂದಿದ್ದರು. ಅದೇ ರೀತಿ ಮಾಡಿದ್ದಾರೆ. ಸಿನಿಮಾ ಬಗ್ಗೆ ಆಗ ಜಾಸ್ತಿ ಮಾತಾಡಿರಲಿಲ್ಲ. ಸಿನಿಮಾ ಹೇಗೆ ಬರ್ತಿದೆ ಅನ್ನೋದು ಮಾತಾಡ್ತಾ ಇದ್ದೀವಿ.

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅನ್ನೋ ವಿಚಾರದ ಬಗ್ಗೆ ಮಾತನಾಡಿ , ದರ್ಶನ್‌ ರಾಜಕೀಯಕ್ಕೆ ಬರ್ತಾರಾ ಇಲ್ವಾ ಅನ್ನೋದು ಸೆಲೆಬ್ರಿಟಿಗಳೇ ನಿರ್ಧಾರ ಮಾಡ್ತಾರೆ. ಅಭಿಮಾನಿಗಳು ಹೇಗೆ ಹೇಳ್ತಾರೆ ಹಾಗೆ ಮಾಡ್ತಾರೆ. ದರ್ಶನ್‌ ತಮ್ಮನಾಗಿ ರಾಜಕೀಯಕ್ಕೆ ಬರ್ತಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಸಿನಿಮಾ ವೀಕ್ಷಿಸಿದ ಬಳಿಕ ಕೆಲವು ಫ್ಯಾನ್ಸ್‌ ಕೂಡ ದರ್ಶನ್ ಮುಂದಿನ ಸಿಎಂ ಎನ್ನುತ್ತಿದ್ದಾರೆ. ಅಸಲಿಗೆ ಸಿನಿಮಾನಲ್ಲಿಯೂ ದರ್ಶನ್ ರಾಜಕೀಯಕ್ಕೆ ಪ್ರವೇಶಿಸುವ ದೃಶ್ಯಗಳು ಇವೆ. ಹೀಗಾಗಿ ದರ್ಶನ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅನ್ನೋ ಚರ್ಚೆಗಳು ಆಗುತ್ತಿವೆ.

ಅದ್ಧೂರಿಯಾಗಿ ರಿಲೀಸ್‌

ದರ್ಶನ್‌ ಅವರು ಜೈಲಿನಿಂದ ಜಾಮೀನು ಸಿಕ್ಕ ನಂತರ ಅರ್ಧಕ್ಕೆ ನಿಂತಿದ್ದ ಡೆವಿಲ್‌ ಸಿನಿಮಾ ಶೂಟಿಂಗ್‌ ಮುಗಿಸಿಕೊಟ್ಟಿದ್ದರು. ಅಲ್ಲದೆ ತಮ್ಮ ಸಿನಿಮಾ ಅದ್ಧೂರಿಯಾಗಿ ರಿಲೀಸ್‌ ಆಗುವುದನ್ನು ನೋಡುವ ಉತ್ಸಾಹದಲ್ಲಿದ್ದರು. ಆದರೆ ಸುಪ್ರೀಂಕೋರ್ಟ್‌ನಲ್ಲಿ ದರ್ಶನ್‌ ಅವರ ಜಾಮೀನು ರದ್ದಾಯಿತು. ಹೀಗಾಗಿ ಸಿನಿಮಾ ರಿಲೀಸ್‌ ಹೊತ್ತಲ್ಲೇ ಅವರು ಮತ್ತೆ ಜೈಲಿಗೆ ವಾಪಸ್‌ ಆಗಬೇಕಾಯಿತು.

ಇದನ್ನೂ ಓದಿ: The Devil X Review: ಕಳೆದು ಹೋಗಬೇಕು , ಆ ಥರ ಇದೆ ಅದೊಂದು ಸೀನ್‌! ʻಡೆವಿಲ್‌ʼ ನೋಡಿದವರು ಏನು ಹೇಳಿದರು?

ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ಇದ್ದಾರೆ. ಶರ್ಮಿಳಾ ಮಾಂಡ್ರೆ ಇಂಪಾರ್ಟೆಂಟ್‌ ರೋಲ್‌ ಮಾಡಿದ್ದು, ಮಹೇಶ ಮಾಂಜ್ರೇಕರ್‌, ಅಚ್ಯುತ್‌ ಕುಮಾರ್‌, ಶೋಭರಾಜ್‌, ಚಂದು ಗೌಡ, ವಿನಯ್‌ ಗೌಡ, ಗಿಲ್ಲಿ ನಟ, ಗೋವಿಂದೇಗೌಡ, ರೋಜರ್‌ ನಾರಾಯಣ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.