ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೂರು ದಿನಗಳ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ; ನಟಿ ಸೋನಾಲ್ ಮೊಂಥೆರೊ ರಿಂದ ಉದ್ಘಾಟನೆ

ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನವು ವಿವಿಧ ನಗರಗಳ ಪ್ರಮುಖ ಜ್ಯುವೆಲರ್‌ಗಳು ಹಾಗೂ ವಿನ್ಯಾಸಗಳನ್ನು ಬೆಂಗಳೂರಿನ ಗ್ರಾಹಕರಿಗೆ ಒಂದೇ ಸೂರಿನಡಿ ಪರಿಚಯಿಸುವ ವೇದಿಕೆ ಯಾಗಿದ್ದು, ಹಬ್ಬ ಮತ್ತು ಮದುವೆ ಋತುವಿನ ಖರೀದಿಗೆ ವಿಶೇಷ ಆಕರ್ಷಣೆಯಾಗಿದೆ. ಶೋ ಆ.29ರಿಂದ 31ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶದೊಂದಿಗೆ ನಡೆಯಲಿದ್ದು, ಆಭರಣ ಪ್ರಿಯರಿಗೆ ವೈವಿಧ್ಯಮಯ ವಿನ್ಯಾಸಗಳನ್ನು ವೀಕ್ಷಿಸಿ ಖರೀದಿಸಲು ಅವಕಾಶ ಕಲ್ಪಿಸಿದೆ.

ಬೆಂಗಳೂರಿನಲ್ಲಿ ‘ದಿ ಜ್ಯುವೆಲರಿ ಶೋ’ಗೆ ಅದ್ದೂರಿ ಚಾಲನೆ

-

Profile
Ashok Nayak Aug 29, 2026 8:45 PM

ಬೆಂಗಳೂರು: ಹಬ್ಬಗಳು ಹಾಗೂ ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳ ಹಿನ್ನೆಲೆ ಯಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ *‘ದಿ ಜ್ಯುವೆಲರಿ ಶೋ’*ಗೆ ಬೆಂಗಳೂರಿನಲ್ಲಿ ಅದ್ದೂರಿ ಚಾಲನೆ ದೊರೆಯಿತು. ನಟಿ ಸೋನಾಲ್ ಮೊಂಥೆರೊ(Actress Sonal Monteiro) ಅವರು ಖಾಸಗಿ ಹೋಟೇಲ್‌ನಲ್ಲಿ ಆಯೋಜಿಸಲಾಗಿರುವ ಪ್ರದರ್ಶನವನ್ನು ಉದ್ಘಾಟಿಸಿದರು.

*ಗೋಲ್ಡನ್ ಕ್ರೀಪರ್ ಎಂಟರ್‌ಪ್ರೈಸಸ್* ಆಯೋಜಿಸಿರುವ ಈ ಪ್ರದರ್ಶನದಲ್ಲಿ *50ಕ್ಕೂ ಹೆಚ್ಚು ಪ್ರಮುಖ ಜ್ಯುವೆಲರ್‌ಗಳು ಹಾಗೂ 50,000ಕ್ಕೂ ಅಧಿಕ ಆಭರಣ ವಿನ್ಯಾಸಗಳು* ಗ್ರಾಹಕರಿಗಾಗಿ ಲಭ್ಯವಿವೆ.

ಇದನ್ನೂ ಓದಿ: Sonal Monteiro: ʼʼನಮ್ಮ ಬಂಧ ಇನ್ನಷ್ಟು ಬಿಗಿಯಾಗಲಿʼʼ; ಭೀಮನ ಅಮಾವಾಸ್ಯೆ ಆಚರಿಸಿದ ಸೋನಾಲ್ ಮೊಂತೆರೊ ಭಾವುಕ

ಚಿನ್ನ ಮತ್ತು ವಜ್ರಾಭರಣಗಳ ವಿವಿಧ ಶ್ರೇಣಿಯ ವಿನ್ಯಾಸಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಲಾಗುತ್ತಿದ್ದು, ಸಾಂಪ್ರದಾಯಿಕ ವಿನ್ಯಾಸಗಳಿಂದ ಹಿಡಿದು ಸಮಕಾಲೀನ ಶೈಲಿಯ ಆಭರಣಗಳವರೆಗೆ ಗ್ರಾಹಕರಿಗೆ ಹಲವು ಆಯ್ಕೆಗಳು ದೊರೆಯುತ್ತಿವೆ.

ಪ್ರದರ್ಶನದಲ್ಲಿ *BIS ಹಾಲ್‌ಮಾರ್ಕ್ ಚಿನ್ನಾಭರಣಗಳು ಹಾಗೂ GIA/IGI ಪ್ರಮಾಣೀಕೃತ ವಜ್ರಾಭರಣಗಳಿಗೆ* ವಿಶೇಷ ಆದ್ಯತೆ ನೀಡಲಾಗಿದೆ. ಹಳೆಯ ಆಭರಣಗಳ ವಿನಿಮಯ ಸೇರಿದಂತೆ ಗ್ರಾಹಕರಿಗೆ ಅಗತ್ಯವಿರುವ ವಿವಿಧ ಸೇವೆಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನವು ವಿವಿಧ ನಗರಗಳ ಪ್ರಮುಖ ಜ್ಯುವೆಲರ್‌ಗಳು ಹಾಗೂ ವಿನ್ಯಾಸಗಳನ್ನು ಬೆಂಗಳೂರಿನ ಗ್ರಾಹಕರಿಗೆ ಒಂದೇ ಸೂರಿನಡಿ ಪರಿಚಯಿಸುವ ವೇದಿಕೆ ಯಾಗಿದ್ದು, ಹಬ್ಬ ಮತ್ತು ಮದುವೆ ಋತುವಿನ ಖರೀದಿಗೆ ವಿಶೇಷ ಆಕರ್ಷಣೆಯಾಗಿದೆ.

ಶೋ ಆ.29ರಿಂದ 31ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶದೊಂದಿಗೆ ನಡೆಯಲಿದ್ದು, ಆಭರಣ ಪ್ರಿಯರಿಗೆ ವೈವಿಧ್ಯಮಯ ವಿನ್ಯಾಸಗಳನ್ನು ವೀಕ್ಷಿಸಿ ಖರೀದಿಸಲು ಅವಕಾಶ ಕಲ್ಪಿಸಿದೆ.