'ಟಾಕ್ಸಿಕ್ʼ ಸಿನಿಮಾಕ್ಕೆ ರವಿ ಬಸ್ರೂರು ಒಬ್ರೇ ಮ್ಯೂಸಿಕ್ ಡೈರೆಕ್ಟರ್ ಅಲ್ಲ! ಹಾಡುಗಳ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್ ಮಾಹಿತಿ
Yash Toxic Movie Updates: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಚಿತ್ರದ ಆಡಿಯೋ ಹಕ್ಕುಗಳನ್ನು 'ಜೀ ಮ್ಯೂಸಿಕ್ ಕಂಪನಿ' ಬೃಹತ್ ಮೊತ್ತಕ್ಕೆ ಖರೀದಿಸಿದೆ. ಕೇವಲ ರವಿ ಬಸ್ರೂರ್ ಮಾತ್ರವಲ್ಲದೆ ವಿಶಾಲ್ ಮಿಶ್ರಾ, ತನಿಷ್ಕ್ ಬಾಗ್ಚಿ ಸೇರಿದಂತೆ ಘಟಾನುಘಟಿ ಸಂಗೀತ ನಿರ್ದೇಶಕರು ಟಾಕ್ಸಿಕ್ ಚಿತ್ರಕ್ಕೆ ಟ್ಯೂನ್ ಹಾಕುತ್ತಿರುವುದು ವಿಶೇಷ.
-
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರದ ಮ್ಯೂಸಿಕ್ ರೈಟ್ಸ್ ಅನ್ನು ಜೀ ಮ್ಯೂಸಿಕ್ ಕಂಪನಿ (Zee Music Company) ಭಾರಿ ಮೊತ್ತಕ್ಕೆ ಖರೀದಿಸುವ ಮೂಲಕ ಚಿತ್ರತಂಡದೊಂದಿಗೆ ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಜೀ ಮ್ಯೂಸಿಕ್ ಕಡೆಯಿಂದ ನಡೆದ ಅತ್ಯಂತ ದೊಡ್ಡ ಮ್ಯೂಸಿಕ್ ಡೀಲ್ ಇದಾಗಿದೆ.
ಜೀ ಮ್ಯೂಸಿಕ್ ಕಂಪನಿ ಹೇಳಿದ್ದೇನು?
ಜೀ ಮ್ಯೂಸಿಕ್ ಕಂಪನಿಯ ಸಿಬಿಒ ಸುಜಲ್ ಪರೇಖ್, "ಟಾಕ್ಸಿಕ್ ಭಾರತೀಯ ಚಿತ್ರರಂಗದ ನಿಜವಾದ ಪ್ಯಾನ್-ಇಂಡಿಯಾ ಸಿನಮಾವಾಗಿದೆ. ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಎಲ್ಲಾ ಹಾಡುಗಳನ್ನು ನಮ್ಮ ಒಂದೇ ವೇದಿಕೆಯಡಿ ತರುತ್ತಿರುವುದು ನಮಗೆ ಹೆಮ್ಮೆಯ ವಿಷಯ" ಎಂದಿದ್ದಾರೆ.
Toxic Movie Teaser: `ಟಾಕ್ಸಿಕ್' ಟೀಸರ್ ನೋಡಿ ರುಕ್ಮಿಣಿ ವಸಂತ್ ಫ್ಯಾನ್ಸ್ ಫುಲ್ ಟೆನ್ಷನ್!
"ಸಂಗೀತವು ಸಿನಿಮಾದ ನಾಡಿಮಿಡಿತ. ಜೀ ಮ್ಯೂಸಿಕ್ ರೂಪದಲ್ಲಿ ನಮಗೆ ಸರಿಯಾದ ಪಾಲುದಾರರು ಸಿಕ್ಕಿದ್ದಾರೆ. ಈ ಒಪ್ಪಂದವು ಕೇವಲ ಒಂದು ಸಿನಿಮಾಗೆ ಸೀಮಿತವಲ್ಲ, ಇದು ಜೀ ಮತ್ತು ಕೆವಿಎನ್ ನಡುವಿನ ದೀರ್ಘಕಾಲದ ಸೃಜನಾತ್ಮಕ ಬಾಂಧವ್ಯದ ಆರಂಭ" ಎಂದು ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ತಿಳಿಸಿದ್ದಾರೆ.
Toxic teaser: ಕೇವಲ 24 ಗಂಟೆಗಳಲ್ಲಿ ‘ಟಾಕ್ಸಿಕ್’ ಟೀಸರ್ ಯಾವ ಭಾಷೆಯಲ್ಲಿ ಹೆಚ್ಚು ವೀಕ್ಷಣೆ ಗೊತ್ತಾ?
ರವಿ ಬಸ್ರೂರು ಒಬ್ರೇ ಮ್ಯೂಸಿಕ್ ಡೈರೆಕ್ಟರ್ ಅಲ್ಲ!
ಹೌದು, ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ ಎಂಬುದು ಈವರೆಗೂ ಗೊತ್ತಿರುವ ಮಾಹಿತಿ. ಆದರೆ ಅವರಷ್ಟೇ ಅಲ್ಲ, ಇನ್ನೂ ನಾಲ್ವರು ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರದ ನಾಲ್ಕು ಹಾಡುಗಳಿಗೆ ವಿಶಾಲ್ ಮಿಶ್ರಾ ಸಂಗೀತ ನೀಡಿದ್ದರೆ, ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಅವರೊಂದಿಗೆ ಸೇರಿ ತನಿಷ್ಕ್ ಬಾಗ್ಚಿ ಒಂದು ಹಾಡನ್ನು ಸಂಯೋಜಿಸಿದ್ದಾರೆ. ಒಂದು ಹಾಡನ್ನು ಕಂಪೋಸ್ ಮಾಡುವುದರ ಜೊತೆಗೆ ಚಿತ್ರದ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ರವಿ ಬಸ್ರೂರು ಹೊತ್ತಿಕೊಂಡಿದ್ದಾರೆ.
ಸದ್ದು ಮಾಡುತ್ತಿರುವ ಟೀಸರ್
ಇತ್ತೀಚೆಗಷ್ಟೇ ಬಿಡುಗಡೆಯಾದ 'ಟಾಕ್ಸಿಕ್' ಟೀಸರ್ ಕೇವಲ 24 ಗಂಟೆಗಳಲ್ಲಿ ಕೋಟ್ಯಂತರ ವೀಕ್ಷಣೆಗಳನ್ನು ಪಡೆದು ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಯಶ್ ಅವರ 'ಟಿಕೆಟ್' ಎಂಬ ಪಾತ್ರದ ರಿವೀಲ್ ಪ್ರೇಕ್ಷಕರಲ್ಲಿ ಹತ್ತಾರು ಪ್ರಶ್ನೆಗಳನ್ನು ಮತ್ತು ಕುತೂಹಲಗಳನ್ನು ಹುಟ್ಟುಹಾಕಿದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಸೇರಿದಂತೆ ಚಿತ್ರದ ಇತರ ತಾರಾಗಣದ ಪಾತ್ರಗಳನ್ನು ಹಂತಹಂತವಾಗಿ ಪರಿಚಯಿಸಲು ಚಿತ್ರತಂಡ ಯೋಜಿಸಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿದ್ದು, ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಕಾಣಲಿದೆ.