ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ಟ್ರೂ ಬ್ಯಾಲೆನ್ಸ್‌ನ ‘ಹರ್ ಲೈಫ್ ಕಾ ಬ್ಯಾಲೆನ್ಸ್’ ಡಾಕ್ಯುಸೀರೀಸ್
ಗ್ರಾಹಕರ ಮನೆಗಳು, ವ್ಯಾಪಾರ ಕೇಂದ್ರಗಳು ಮತ್ತು ಕೆಲಸದ ಸ್ಥಳಗಳಲ್ಲಿ ಚಿತ್ರೀಕರಿಸಲಾದ ಈ ಸರಣಿಯು ಅವರ ನೈಜ ಅನುಭವಗಳನ್ನು ಅವರದೇ ಮಾತುಗಳಲ್ಲಿ ಪ್ರಸ್ತುತಪಡಿಸುತ್ತದೆ. ಅಲ್ಪಾವಧಿ ಯ ಹಣಕಾಸಿನ ಅಗತ್ಯಗಳನ್ನು ಪೂರೈಸುವುದರಿಂದ ಹಿಡಿದು ವ್ಯಾಪಾರದ ಬೆಳವಣಿಗೆ, ಮಕ್ಕಳ ಶಿಕ್ಷಣ ಮತ್ತು ವೈಯಕ್ತಿಕ ಜೀವನದ ಪ್ರಮುಖ ಸಂದರ್ಭಗಳನ್ನು ನಿಭಾಯಿಸುವವರೆಗೆ, ಹಣಕಾಸಿನ ಸೌಲಭ್ಯವು ಜನರ ದೈನಂದಿನ ಬದುಕಿನಲ್ಲಿ ವಹಿಸುವ ಪಾತ್ರವನ್ನು ಈ ಕಥೆಗಳು ಎತ್ತಿ ತೋರಿಸುತ್ತವೆ.
-
ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಆಧಾರಿತ ಡಿಜಿಟಲ್ ಸಾಲ ವೇದಿಕೆಯಾಗಿರುವ ಟ್ರೂ ಬ್ಯಾಲೆನ್ಸ್, ತನ್ನ ಮೂರು ಭಾಗಗಳ ಡಾಕ್ಯುಸೀರೀಸ್ ‘ಹರ್ ಲೈಫ್ ಕಾ ಬ್ಯಾಲೆನ್ಸ್’ ಅನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಮಾಡಿದೆ. ಜೀವನದ ವಿಭಿನ್ನ ಹಿನ್ನೆಲೆಗಳಿಂದ ಬಂದಿರುವ ಆರು ನೈಜ ಗ್ರಾಹಕರ ಬದುಕಿನ ಪಯಣವನ್ನು ಈ ಸರಣಿ ಪರಿಚಯಿಸುತ್ತದೆ. ವ್ಯಾಪಾರವನ್ನು ಬೆಳೆಸುವುದು, ಶಿಕ್ಷಣಕ್ಕೆ ಹಣಕಾಸು ಒದಗಿಸುವುದು ಹಾಗೂ ವೈಯಕ್ತಿಕ ಜೀವನದ ಮಹತ್ವದ ಮೈಲಿಗಲ್ಲುಗಳನ್ನು ತಲುಪುವಲ್ಲಿ ಸಮಯೋಚಿತ ಸಾಲ ಸೌಲಭ್ಯವು ಹೇಗೆ ನೆರವಾಗಿದೆ ಎಂಬುದನ್ನು ಇದು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡುತ್ತದೆ.
ಗ್ರಾಹಕರ ಮನೆಗಳು, ವ್ಯಾಪಾರ ಕೇಂದ್ರಗಳು ಮತ್ತು ಕೆಲಸದ ಸ್ಥಳಗಳಲ್ಲಿ ಚಿತ್ರೀಕರಿಸಲಾದ ಈ ಸರಣಿಯು ಅವರ ನೈಜ ಅನುಭವಗಳನ್ನು ಅವರದೇ ಮಾತುಗಳಲ್ಲಿ ಪ್ರಸ್ತುತಪಡಿಸುತ್ತದೆ. ಅಲ್ಪಾವಧಿಯ ಹಣಕಾಸಿನ ಅಗತ್ಯಗಳನ್ನು ಪೂರೈಸುವುದರಿಂದ ಹಿಡಿದು ವ್ಯಾಪಾರದ ಬೆಳವಣಿಗೆ, ಮಕ್ಕಳ ಶಿಕ್ಷಣ ಮತ್ತು ವೈಯಕ್ತಿಕ ಜೀವನದ ಪ್ರಮುಖ ಸಂದರ್ಭಗಳನ್ನು ನಿಭಾಯಿಸುವವರೆಗೆ, ಹಣಕಾಸಿನ ಸೌಲಭ್ಯವು ಜನರ ದೈನಂದಿನ ಬದುಕಿನಲ್ಲಿ ವಹಿಸುವ ಪಾತ್ರವನ್ನು ಈ ಕಥೆಗಳು ಎತ್ತಿ ತೋರಿಸುತ್ತವೆ.
ತಮ್ಮ ಬ್ಯೂಟಿ ಮತ್ತು ಗ್ರೂಮಿಂಗ್ ವ್ಯವಹಾರವನ್ನು ವಿಸ್ತರಿಸುತ್ತಿರುವ ಮಹಿಳೆ, ಬೇಡಿಕೆ ಕುಸಿಯುವ ಅವಧಿಗಳಲ್ಲಿ ತಮ್ಮ ಈವೆಂಟ್ ವ್ಯವಹಾರವನ್ನು ನಿರ್ವಹಿಸುತ್ತಿರುವ ಉದ್ಯಮಿ ಹಾಗೂ ವೈಯಕ್ತಿಕ ಹಣಕಾಸಿನ ಅಗತ್ಯ ಎದುರಾದಾಗ ಡಿಜಿಟಲ್ ಸಾಲದಾತರ ಸೇವೆ ಪಡೆದ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಸೇರಿದಂತೆ ವಿಭಿನ್ನ ಜೀವನಾನುಭವಗಳನ್ನು ಹೊಂದಿರುವ ಗ್ರಾಹಕರ ಕಥೆಗಳು ಈ ಸರಣಿಯ ಪ್ರಮುಖ ಆಕರ್ಷಣೆಯಾಗಿವೆ.
ಇದನ್ನೂ ಓದಿ: JioHome: ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ: ತಿಂಗಳಿಗೆ ಕೇವಲ 400 ರೂ.ಗೆ 1,000+ ಲೈವ್ ಟಿವಿ ಚಾನೆಲ್ಸ್
ಸ್ವಯಂ ಉದ್ಯೋಗಿಗಳು, ಸಣ್ಣ ವ್ಯಾಪಾರ ಮಾಲೀಕರು ಮತ್ತು ಮೊದಲ ಬಾರಿಗೆ ಸಾಲ ಪಡೆಯು ತ್ತಿರುವ ಗ್ರಾಹಕರ ಅನುಭವಗಳನ್ನು ಒಳಗೊಂಡಿರುವ ಈ ಸರಣಿಯು ವಿವಿಧ ವರ್ಗಗಳ ಜನರ ಹಣಕಾಸಿನ ಅಗತ್ಯಗಳನ್ನು ಪ್ರತಿಬಿಂಬಿಸುತ್ತದೆ. 2026ರ ಸೆಪ್ಟೆಂಬರ್ 30ರ ವೇಳೆಗೆ ಟ್ರೂ ಬ್ಯಾಲೆನ್ಸ್ ಒಟ್ಟು 1.93 ಕೋಟಿ ಸಾಲಗಳನ್ನು ವಿತರಿಸಿದೆ.
ಆರು ಗ್ರಾಹಕರು, ಆರು ವಿಭಿನ್ನ ಬದುಕಿನ ಪಯಣಗಳು
‘ಹರ್ ಲೈಫ್ ಕಾ ಬ್ಯಾಲೆನ್ಸ್’ ಸರಣಿಯಲ್ಲಿ ಪರಿಚಯಿಸಲಾಗಿರುವ ಆರು ಗ್ರಾಹಕರು ಮತ್ತು ಅವರ ಕಥೆಗಳು ಹೀಗಿವೆ:
ಗಾಯತ್ರಿ: ವಿವಾಹದ ಸಿದ್ಧತೆಗಳ ನಡುವೆ ತಮ್ಮ ಬ್ಯೂಟಿ ಮತ್ತು ಗ್ರೂಮಿಂಗ್ ವ್ಯವಹಾರವನ್ನು ವಿಸ್ತರಿಸುತ್ತಿರುವ ಮಹಿಳೆ.
ಕೇವಲ್: ಬೇಡಿಕೆ ಏರಿಳಿತಗಳನ್ನು ಎದುರಿಸುತ್ತಾ ತಮ್ಮ ಈವೆಂಟ್ ವ್ಯವಹಾರವನ್ನು ಮುನ್ನಡೆಸುತ್ತಿರುವ ಉದ್ಯಮಿ.
ರೂಪೇಶ್: ತಮ್ಮ ಮಗನ ಶಿಕ್ಷಣಕ್ಕೆ ಅಗತ್ಯವಾದ ಹಣಕಾಸಿನ ವ್ಯವಸ್ಥೆ ಮಾಡುತ್ತಿರುವ ವಿಮಾ ಕ್ಷೇತ್ರದ ವೃತ್ತಿಪರರು.
ವಿಕಾಸ್: ತಮ್ಮ ಕುಟುಂಬದ ಜೀವನೋಪಾಯಕ್ಕೆ ಆಧಾರವಾಗಿರುವ ಕಿರಾಣಿ ಅಂಗಡಿಯನ್ನು ನಡೆಸುತ್ತಿರುವವರು.
ಸಿಮ್ರನ್: ವಿವಾಹದ ನಂತರ ಸಾಮಾಜಿಕ ಮಾಧ್ಯಮವನ್ನು ಆಧರಿಸಿದ ಉದ್ಯಮವನ್ನು ಕಟ್ಟಿಕೊಂಡಿರುವ ಮಹಿಳೆ.
ವಿಶ್ವಾಸ್: ಸ್ವತಃ ಹಣಕಾಸಿನ ಅಗತ್ಯ ಎದುರಾದಾಗ ಡಿಜಿಟಲ್ ಸಾಲದಾತರ ಸೇವೆ ಪಡೆದ ಬ್ಯಾಂಕ್ ಶಾಖಾ ವ್ಯವಸ್ಥಾಪಕರು.
ಈ ಆರು ಕಥೆಗಳು ಹಣಕಾಸು ಒಳಗೊಳ್ಳುವಿಕೆಯ ಮಹತ್ವವನ್ನು ದೈನಂದಿನ ಬದುಕಿನ ನೈಜ ಅನುಭವಗಳ ಮೂಲಕ ಪರಿಚಯಿಸುತ್ತವೆ. ಸ್ವಂತ ಆದಾಯ ಗಳಿಸುತ್ತಿರುವ ಮಹಿಳೆಯರು, ಏರಿಳಿತದ ನಗದು ಹರಿವನ್ನು ನಿರ್ವಹಿಸುತ್ತಿರುವ ಸಣ್ಣ ವ್ಯಾಪಾರ ಮಾಲೀಕರು ಹಾಗೂ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಿರುವ ಪೋಷಕರ ಬದುಕಿನಲ್ಲಿ ಹಣಕಾಸಿನ ಸೌಲಭ್ಯವು ವಹಿಸುವ ಪಾತ್ರವನ್ನು ಈ ಸರಣಿ ಅನಾವರಣಗೊಳಿಸುತ್ತದೆ.
“ನಮ್ಮ ಗ್ರಾಹಕರ ಕಥೆಗಳ ಮೂಲಕ ಎಲ್ಲರಿಗೂ ಹಣಕಾಸು ಎಂಬ ಪರಿಕಲ್ಪನೆಯನ್ನು ಜೀವಂತಗೊಳಿಸುವುದು ನಮ್ಮ ಉದ್ದೇಶ”
ಈ ಕುರಿತು ಮಾತನಾಡಿದ ಟ್ರೂ ಬ್ಯಾಲೆನ್ಸ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಚಾರ್ಲಿ ಲೀ ಅವರು, “ಭಾರತವು ಜನರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯ ವ್ಯಾಪ್ತಿಗೆ ತರುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ದೃಢಸಂಕಲ್ಪ ಹೊಂದಿರುವ ಜನರಿಗೆ ಅಗತ್ಯವಾದ ಸಾಲ ಸೌಲಭ್ಯವನ್ನು ಒದಗಿಸುವುದು ಮುಂದಿನ ಮಹತ್ವದ ಹೆಜ್ಜೆಯಾಗಿದೆ. ಈ ಪ್ರಯತ್ನಕ್ಕೆ ಕೊಡುಗೆ ನೀಡುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ.
‘ಹರ್ ಲೈಫ್ ಕಾ ಬ್ಯಾಲೆನ್ಸ್’ ಸರಣಿಯಲ್ಲಿ ಪರಿಚಯಿಸಲಾದ ನಮ್ಮ ಆರು ಗ್ರಾಹಕರು ದೈನಂದಿನ ಸವಾಲುಗಳನ್ನು ಎದುರಿಸುತ್ತಲೇ ತಮ್ಮ ವ್ಯವಹಾರಗಳನ್ನು ಬೆಳೆಸುತ್ತಿದ್ದಾರೆ, ಕುಟುಂಬಗಳನ್ನು ಬೆಂಬಲಿಸುತ್ತಿದ್ದಾರೆ ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರ ಕಥೆಗಳು ಕೋಟ್ಯಂತರ ಭಾರತೀಯರ ಆಶಯಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ.
ಈ ಸರಣಿಯ ಮೂಲಕ ನಮ್ಮ ಗ್ರಾಹಕರ ದೃಷ್ಟಿಕೋನದಿಂದ ಅವರ ಬದುಕಿನ ಪಯಣಗಳನ್ನು ಪರಿಚಯಿಸುವುದರ ಜೊತೆಗೆ, ‘ಎಲ್ಲರಿಗೂ ಹಣಕಾಸು’ ಎಂಬ ಪರಿಕಲ್ಪನೆಯನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುವುದು ನಮ್ಮ ಉದ್ದೇಶವಾಗಿದೆ,” ಎಂದು ಹೇಳಿದರು.
‘ಹರ್ ಲೈಫ್ ಕಾ ಬ್ಯಾಲೆನ್ಸ್’ ಡಾಕ್ಯುಸೀರೀಸ್ ಇದೀಗ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.