ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vinay Gowda: ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ! ಟ್ರೋಲ್ ಮಾಡಿದವರಿಗೆ ವಿನಯ್‌ ಖಡಕ್‌ ಪೋಸ್ಟ್‌

Bigg Boss Kannada 13: ಸರ್ಕಲ್‌ಗೆ ಎಷ್ಟು ಸೈಡ್ಸ್‌ ಇವೆ?’ ಎಂಬ ಪ್ರಶ್ನೆಗೆ ವಿನಯ್‌ ಗೌಡ ನೀಡಿದ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಇದೀಗ ಖಡಕ್ ತಿರುಗೇಟು ನೀಡಿದ್ದು, ಇಂತಹ ಯಾವುದೇ ವಿಚಾರಗಳಿಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಟ್ರೋಲ್ ಮಾಡಿದವರಿಗೆ ವಿನಯ್‌ ಖಡಕ್‌ ಪೋಸ್ಟ್‌

ವಿನಯ್‌ ಗೌಡ -

Yashaswi Devadiga
Yashaswi Devadiga Aug 20, 2026 7:02 PM

ಬಿಗ್ ಬಾಸ್ ಅಗ್ನಿಪರೀಕ್ಷೆ’ (Bigg Boss Agniparikhe) ಕಾರ್ಯಕ್ರಮದ ವೇದಿಕೆಯಲ್ಲಿ ಕಂಪ್ಯೂಟರ್ ಸೈನ್ಸ್‌ ವಿದ್ಯಾರ್ಥಿಗೆ ಕೇಳಿದ ಪ್ರಶ್ನೆಯೊಂದಕ್ಕೆ ಅವರು ನೀಡಿದ್ದ ಉತ್ತರವೇ ವಿನಯ್‌ ಈಗ ಟ್ರೋಲ್‌ಗೆ ಗುರಿಯಾಗಿದ್ದಾರೆ. .‘ಸರ್ಕಲ್‌ಗೆ ಎಷ್ಟು ಸೈಡ್ಸ್‌ ಇವೆ?’ (Circles Sides) ಎಂಬ ಪ್ರಶ್ನೆಗೆ ವಿನಯ್‌ ಗೌಡ ನೀಡಿದ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ (Vinay Gowda) ಇದೀಗ ಖಡಕ್ ತಿರುಗೇಟು ನೀಡಿದ್ದು, ಇಂತಹ ಯಾವುದೇ ವಿಚಾರಗಳಿಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ನೈಜ ಉದ್ದೇಶ ಇದು

ಈ ಕುರಿತು ವಿವರಣೆ ನೀಡಿರುವ ವಿನಯ್, "ನನ್ನ ಪ್ರಶ್ನೆಯ ಹಿಂದಿದ್ದ ನೈಜ ಉದ್ದೇಶವನ್ನು ಅರ್ಥೈಸಿಕೊಂಡು ನನಗಾಗಿ ಧ್ವನಿ ಎತ್ತಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೆ, ಮಾಫಿಯಾ ಗ್ಯಾಂಗ್‌ಸ್ಟರ್ ಆಗಲು ಹೊರಟಿದ್ದ ಆ ವಿದ್ಯಾರ್ಥಿಯ ಜ್ಞಾನದ ಮಟ್ಟ ಅತ್ಯಂತ ನಿರಾಶಾದಾಯಕವಾಗಿತ್ತು. ಅದನ್ನು ಹೊರತರಲು ಆ ಪ್ರಶ್ನೆ ಕೇಳಬೇಕಾಯಿತು. ಹೀಗಾಗಿ, ಯಾವುದೇ ಪಿಆರ್ ಸೃಷ್ಟಿತ ಟ್ರೋಲ್‌ಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Amruthadhaare Serial: ಭೂಮಿ ಬೆಹುಗಾರಿಕೆ ಚುರುಕಾಗೋ ಹೊತ್ತು! ಹಸಿದ ತೋಳ ಹಳ್ಳಕ್ಕೆ ಬೀಳಲೇ ಬೇಕು!

ಕಂಪ್ಯೂಟರ್ ಸೈನ್ಸ್‌ನಲ್ಲಿ, 'ಜೋರ್ಡಾನ್ ಕರ್ವ್ ಸಿದ್ಧಾಂತ'ವು (Jordan Curve Theorem) ಕಂಪ್ಯೂಟೇಶನಲ್ ಜಿಯೊಮೆಟ್ರಿ ಮತ್ತು ಪ್ರಾದೇಶಿಕ ತಾರ್ಕಿಕತೆಯ ಮೂಲಾಧಾರವಾಗಿದೆ. ನಿರ್ದಿಷ್ಟ ಗಡಿಯೊಳಗೆ ಅಥವಾ ಹೊರಗೆ ನಿರ್ದೇಶಾಂಕವೊಂದು ಅಥವಾ ವಸ್ತುವೊಂದು ಇದೆಯೇ ಎಂದು ನಿರ್ಧರಿಸುವ ಅಲ್ಗಾರಿದಮ್‌ಗಳಿಗೆ ಇದು ಸೈದ್ಧಾಂತಿಕ ಆಧಾರವನ್ನು ಒದಗಿಸುತ್ತದೆ.

ವಾಸ್ತವಿಕ ಚಿತ್ರಣವನ್ನು ಸರಿಯಾಗಿ ಅರ್ಥಮಾಡಿಕೊಂಡು ನನ್ನ ಪರವಾಗಿ ನಿಂತ ಎಲ್ಲರಿಗೂ ನನ್ನ ಕೃತಜ್ಞತೆಗಳು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯಾವುದೇ ಅರಿವಿಲ್ಲದ, ಆದರೆ ಗ್ಯಾಂಗ್‌ಸ್ಟರ್ ಆಗಲು ಮತ್ತು ಮಾಫಿಯಾವನ್ನು ಕಟ್ಟಲು ಬಯಸುವ ವ್ಯಕ್ತಿಯೊಬ್ಬನಿಗೆ ಆ ಪ್ರಶ್ನೆಯನ್ನು ಕೇಳಿದಾಗ ಬಂದ ಉತ್ತರವು ಅತ್ಯಂತ ನಿರಾಶಾದಾಯಕವಾಗಿತ್ತು.

'ಮಾಫಿಯಾ' ಕಟ್ಟಲು ಮತ್ತು ಗ್ಯಾಂಗ್‌ಸ್ಟರ್ ಆಗಲು ಈ ಪೀಳಿಗೆಯನ್ನು ಪ್ರೇರೇಪಿಸುವ ಮೂಲಕ ಬೆಂಬಲಿಸಿದವರಿಗೂ ಪ್ರಚಾರದ ತಂತ್ರಗಳು (paid PR) ಮತ್ತು ನನ್ನ ಅಸ್ತಿತ್ವವನ್ನು ಸಹಿಸಿಕೊಳ್ಳಲಾಗದ ಕೆಲವರಿಗೂ ವಿಶೇಷ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇಂತಿ ನಿಮ್ಮ ಬಿಗ್‌ ಬಾಸ್‌ ಆನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಈ ಸ್ಪರ್ಧಿಯ ನೋವಿನ ಮಾತು ಕೇಳಿ ಕಣ್ಣೀರಿಟ್ಟ ಜ್ಯೂರೀಸ್‌ !

ವಿನಯ್‌ ಗೌಡ ತಮ್ಮ ವಾದವನ್ನು ವಿವರಿಸುವ ರೀತಿಯಲ್ಲಿ ಸ್ಟೈಲಿಶ್‌ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಪೋಸ್ಟ್‌ಗೆ ನೆಟ್ಟಿಗರಿಂದ ಮತ್ತೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ.