Monalisa: ಕುಂಭಮೇಳದ ವೈರಲ್ ಸ್ಟಾರ್ ಮೊನಾಲಿಸಾ ಸಿನಿಮಾದಲ್ಲಿ ಭರ್ಜರಿ ಆಫರ್!
Mahakumbh Girl Monalisa: ಮಹಾಕುಂಭ ಮೇಳದಲ್ಲಿ ಸುಂದರ ಕಣ್ಣುಗಳ ಸುಂದರಿ ಮೊನಾಲಿಸಾ ಕೂಡ ರಾತ್ರೋರಾತ್ರಿ ಫೇಮಸ್ ಆಗಿದ್ದರು. ಮಧ್ಯಪ್ರದೇಶದ ಇಂದೋರ್‌ನಿಂದ ಬಂದು ಪ್ರಯಾಗ್‌ರಾಜ್‌ನ ತೀರ್ಥಯಾತ್ರೆಯ ಸ್ಥಳದಲ್ಲಿ ಹೂಮಾಲೆ, ರುದ್ರಾಕ್ಷಿಗಳನ್ನು ಮಾರಾಟ ಮಾಡುವ ಮೊನಾಲಿಸಾ ಅವರ ಫೋಟೊ ಹಾಗೂ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಮೊನಾಲಿಸಾ ಭೋಸ್ಲೆ ಅವರು ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.


ನವದೆಹಲಿ: ಈ ಬಾರೀ ಮಹಾಕುಂಭ ಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಪವಿತ್ರ ಸ್ನಾನ ಮಾಡಲೆಂದು ಲಕ್ಷಾಂತರ ಜನರು ಪ್ರಯಾಗ್‌ರಾಜ್ ಗೆ ಬಂದಿದ್ದು ಅಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದು ಎಲ್ಲವೂ ದೊಡ್ಡಸುದ್ದಿಯಾಗಿತ್ತು. ಅದರ ಜೊತೆಗೆ ಮಹಾಕುಂಭ ಮೇಳದಲ್ಲಿ ಕಣ್ಣಿನ ಸುಂದರಿ ಮೊನಾಲಿಸಾ (Monalisa) ಕೂಡ ರಾತ್ರೋ ರಾತ್ರಿ ಫೇಮಸ್ ಆಗಿದ್ದರು. ಮಧ್ಯಪ್ರದೇಶದ ಇಂದೋರ್ ನಿಂದ ಬಂದು ಪ್ರಯಾಗ್ ರಾಜ್ ನ ತೀರ್ಥಯಾತ್ರೆಯ ಸ್ಥಳದಲ್ಲಿ ಹೂಮಾಲೆ, ರುದ್ರಾಕ್ಷಿ ಗಳನ್ನು ಮಾರಾಟ ಮಾಡುವ ಮೊನಾಲಿಸಾ ಅವರ ಫೋಟೊ ಹಾಗೂ ವಿಡಿಯೋಗಳು ಸೋಶಿ ಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಬಳಿಕ ಸಿನಿಮಾ ಆಫರ್ ಕೂಡ ಬಂದಿತ್ತು. ಗ್ರಾಹಕರನ್ನು ನಗುನಗುತ್ತಾ ಮಾತನಾಡಿಸುವ ಮೊನಾಲಿಸಾ ರೂಪಕ್ಕೆ ನೆಟ್ಟಿಗರಿಂದಲೂ ಮೆಚ್ಚುಗೆಯ ಪ್ರತಿ ಕ್ರಿಯೆ ವ್ಯಕ್ತವಾಗಿತ್ತು. ಇದಾದ ಬಳಿಕ ಅವರಿಗೆ ಸಿನಿಮಾ ಆಫರ್ ಕೂಡ ಬರುತ್ತಿದೆ ಎಂದು ಹೇಳಲಾಗಿತ್ತು. ಮೊನಾಲಿಸಾ ಭೋಸ್ಲೆ ಅವರು ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಲಯಾಳಂನ 'ನಾಗಮ್ಮ' ಎಂಬ ಹೆಸರಿನ ಸಿನಿಮಾದಲ್ಲಿ ಮೊನಾಲಿಸಾ ನಟಿಸಲಿದ್ದಾರೆ. ಈ ಚಿತ್ರದ ಪೂಜಾ ಸಮಾರಂಭವು ಕೊಚ್ಚಿಯಲ್ಲಿ ನಡೆದಿದ್ದು ಅದರಲ್ಲಿ ಮೊನಾಲಿಸಾ ಚಿತ್ರ ತಂಡದ ಜೊತೆಗೆ ಭಾಗಿಯಾಗಿದ್ದು ಅದರ ಕೆಲವು ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನೀಲತಾಮರ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ಕೈಲಾಶ್ ನಾಯಕನಾಗಿ ನಟಿಸಲಿದ್ದಾರೆ. ಪಿ. ಬಿನು ವರ್ಗೀಸ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಜೀಲಿ ಜಾರ್ಜ್ ನಿರ್ಮಾಣ ಮಾಡಲಿದ್ದ ಈ ಸಿನಿಮಾ ಸೆಪ್ಟೆಂಬರ್ ಕೊನೆವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
'ತನಿಯವರ್ತನಂ', ' ಹಿಸ್ ಹೈನೆಸ್ ಅಬ್ದುಲ್ಲಾ', 'ಭಾರತಂ', ಕಿರೀಡಂ', 'ದಶರಥಂ, 'ಸದಯಂ', '29 ಚೇಲಂ (192)' ಸಿನಿಮಾಗಳನ್ನು ನಿರ್ದೇಶಿಸಿದ್ದ ಬಿನು ವರ್ಗೀಸ್‌ಗೆ ಅವರಿಗೆ ನಾಗಮ್ಮ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದು ಇದು ಅವರ ಸಿನಿ ಪ್ರಯಣದಲ್ಲಿ ಮಹತ್ವದ ಮೈಲಿಗಲ್ಲು ಆಗುವ ಸಾಧ್ಯತೆ ಕೂಡ ಇದೆ. ಈ ಮೂಲಕ ಈ ಸಿನಿಮಾ ಹಿಟ್ ಆದರೆ ಕಣ್ಣಿನ ಸುಂದರಿ ಮೊನಾಲಿಸಾ ಅವರಿಗೆ ಮಲಯಾಳಂ ಸೇರಿದಂತೆ ಇತರ ಭಾಷೆ ಸಿನಿಮಾದಲ್ಲಿ ಉತ್ತಮ ಆಫರ್ಸ್ ಸಿಗಲಿದೆ ಎನ್ನಬಹುದು.
ಈ ಸಿನಿಮಾ ಜೊತೆಗೆ ಮೋನಾಲಿಸಾ ಅವರು ತಮ್ಮ ಮುಂಬರುವ ಚಿತ್ರ 'ದಿ ಡೈರಿ ಆಫ್ ಮಣಿಪುರ್' ನಲ್ಲಿಯೂ ಪ್ರಮುಖ ಪಾತ್ರ ವಹಿಸಲಿದ್ದಾರೆ. 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಸಿನಿಮಾ ಮೂಲಕ ಖ್ಯಾತರಾದ ನಿರ್ದೇಶಕ ಸನೋಜ್ ಮಿಶ್ರಾ ಈ ಚಿತ್ರವನ್ನು ಕೂಡ ನಿರ್ದೇಶಿಸಲಿದ್ದಾರೆ. ರಾಜ್ ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಅವರ ಜೊತೆಗೆ ಮೊನಾಲಿಸಾ ಅವರು ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
16 ವರ್ಷದ ಮೊನಾಲಿಸಾ ಭೋಸ್ಲೆ ಅವರು ಪ್ರಯಾಗ್ರಾಜ್ ಮಹಾಕುಂಭದ ಸಮಯದಲ್ಲಿ ಅದ್ಭುತ ಸೌಂದರ್ಯದಿಂದಾಗಿ ಮತ್ತು ಮೋಹಕ ಕಣ್ಣುಗಳಿಂದ ಸುದ್ದಿಯಾಗಿದ್ದರು. ನರ್ಮದಾ ನದಿಯ ಬಳಿಯ ಕಿಲಾ ಘಾಟ್‌ನಲ್ಲಿ ಮೊನಾಲಿಸಾ ಹಾರಗಳನ್ನು ಮಾರಾಟ ಮಾಡುತ್ತಾ ಅದನ್ನೇ ವೃತ್ತಿಯಾಗಿ ಜೀವನ ಸಾಗಿಸಿದ್ದರು. ಮಹಾಕುಂಭದ ಸಮಯದಲ್ಲಿ ರುದ್ರಾಕ್ಷಿ ಹಾರಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಟೆಂಟ್ ಕ್ರಿಯೇಟರ್ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮಿಡಿಯಾ ದಲ್ಲಿ ಅಪ್ಲೋಡ್ ಮಾಡಿದ್ದ, ಸಹಜ ಸೌಂದರ್ಯದ ಕಾರಣಕ್ಕೆ ರಾತ್ರೋರಾತ್ರಿ ಅವರ ಲಕ್ ಬದಲಾಗಿದೆ ಎನ್ನಬಹುದು. ಆದಾಗ್ಯೂ ಅವರು ಆರಂಭದಲ್ಲಿ ಅವರು ಜನರಿಂದ ಕಿರುಕುಳ ವನ್ನು ಎದುರಿಸಬೇಕಾಯಿತು, ಅದಾದ ಬಳಿಕ ಈ ವರ್ಷದ ಆರಂಭದಲ್ಲಿ ಆಭರಣ ಮಳಿಗೆ ಒಂದನ್ನು ಉದ್ಘಾಟಿಸುವ ಮೂಲಕ ಮತ್ತೆ ಪ್ರಚಲಿತಕ್ಕೆ ಕೂಡ ಅವರು ಬಂದಿದ್ದರು.