Toxic Movie: ಚಿಂತೆಯಲ್ಲಿ ಕೂರಬೇಡಿ! ʼಟಾಕ್ಸಿಕ್ʼ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್ ಹೇಳಿದ್ದೇನು?
Toxic Movie: ಟಾಕ್ಸಿಕ್ ಸಿನಿಮಾದ ಡಬ್ಬಿಂಗ್ ಸೂಪರ್ ವೈಸರ್ ಹಾಗೂ ನಟ ಜೈದೇವ್ ಮೋಹನ್ ಅವರು ಖಾಸಗಿ ಮಾಧ್ಯ,ವೊಂದರ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಟಾಕ್ಸಿಕ್ ಬಾಕ್ಸ್‌ಆಫೀಸ್ ನಲ್ಲಿ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಮಾಡಿಲ್ಲ. ಆದರೂ ನಟ ಯಶ್ ಅವರು ಸಿನಿಮಾದ ಸೋಲನ್ನು ಧೈರ್ಯದಿಂದ ಸ್ವೀಕರಿಸಿದ್ದಾರೆ.
ಟಾಕ್ಸಿಕ್ ಸಿನಿಮಾ -
ಟಾಕ್ಸಿಕ್ ಸೋಲಿನ ಬಗ್ಗೆ ಮತ್ತು ಟಾಕ್ಸಿಕ್ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆದ ಬಗ್ಗೆ ಟಾಕ್ಸಿಕ್ ಸಿನಿಮಾದ ಡಬ್ಬಿಂಗ್ ಸೂಪರ್ ವೈಸರ್ ಹಾಗೂ ನಟ ಜೈದೇವ್ ಮೋಹನ್ (Jaidev Mohan) ಅವರು ಖಾಸಗಿ ಮಾಧ್ಯ,ವೊಂದರ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಟಾಕ್ಸಿಕ್ ಬಾಕ್ಸ್‌ಆಫೀಸ್ ನಲ್ಲಿ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ (Collection) ಮಾಡಿಲ್ಲ. ಆದರೂ ನಟ ಯಶ್ ಅವರು ಸಿನಿಮಾದ ಸೋಲನ್ನು ಧೈರ್ಯದಿಂದ ಸ್ವೀಕರಿಸಿದ್ದಾರೆ.
ಭಾರೀ ಕುಸಿತ
ಜೈದೇವ್ ಮೋಹನ್ ಮಾತನಾಡಿ, ‘Toxic’ ಸಿನಿಮಾದ 3 ಲಕ್ಷಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಲಾಗಿದೆ. ಕಥೆಯ ವಿಚಾರದಲ್ಲಿ ತೀವ್ರ ನೆಗೆಟಿವ್ ವಿಮರ್ಶೆಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ವಿರೋಧದಿಂದಾಗಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕುಸಿತ ಕಂಡಿತು ಎಂದರು.
ಇದನ್ನೂ ಓದಿ: Bigg Boss Kannada 13: ದುರಹಂಕಾರ ಇಟ್ಟುಕೊಳ್ಳಬೇಡಿ ಎಂದ ಗಗನ್ ಮೇಲೆ ಧನುಷ್ ಕೆಂಡಾಮಂಡಲ
ಯೋಚಿಸಿ ತಲೆಕೆಡಿಸಿಕೊಳ್ಳಬೇಡ
ಯಶ್ ಅವರನ್ನು ನೇರವಾಗಿ ಭೇಟಿಯಾಗಿಲ್ಲ. ಫೋನ್‌ನಲ್ಲಿ ಮಾತನಾಡಿದೆ. ನನಗೆ ಯಶ್ ಅವರ ಕಡೆಯಿಂದಲೇ ಫೋನ್ ಕರೆ ಬಂತು.
ಅವರು ನನಗೆ ಅತಿಯಾಗಿ ಯೋಚಿಸಿ ತಲೆಕೆಡಿಸಿಕೊಳ್ಳಬೇಡ. ಎಲ್ಲವನ್ನೂ ಪ್ರೇಕ್ಷಕರಿಗೆ ಬಿಟ್ಟುಬಿಡೋಣ, ಅದು ಅವರ ಇಷ್ಟ. ಮುಂದೆ ನಾವಿನ್ನೂ ಮಾಡಬೇಕಾದ ಕೆಲಸ ಸಾಕಷ್ಟಿದೆ ಎಂದು ಸಮಾಧಾನ ಮಾಡಿದರು. ಪ್ರಾಮಾಣಿಕತೆಯಿಂದ ಸಿನಿಮಾ ಮಾಡಿದ್ದೇವೆ ಮತ್ತು ಅದನ್ನು ಜನರಿಗೆ ತಲುಪಿಸಿದ್ದೇವೆ. ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾ ಕೂರಬೇಡಿ ಎಂದಿದ್ದರು ಎಂದಿದ್ದಾರೆ.
ಶೂಟಿಂಗ್ ಮುಗಿಯುವ ಹೊತ್ತಿಗೆ ಹಲವು ಬದಲಾವಣೆಗಳಾಗಿದ್ದವು. ಸಿನಿಮಾ ಹೇಗೆ ಹಂತ-ಹಂತವಾಗಿ ಬೆಳೆಯಿತು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಯಶ್ ಪ್ರೇಕ್ಷಕರ ತೀರ್ಪಿಗೆ ತಲೆಬಾಗಿದ್ದರು ಎಂದು ಜೈದೇವ್ ಹಂಚಿಕೊಂಡಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಮೊದಲ ದಿನವೇ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅಬ್ಬರಿಸಿತ್ತು.
ಆದರೆ ಕಥೆಯ ವಿಚಾರದಲ್ಲಿ ತೀವ್ರ ನೆಗೆಟಿವ್ ವಿಮರ್ಶೆಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ವಿರೋಧದಿಂದಾಗಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕುಸಿತ ಕಂಡಿತು ನಟ ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಿಷಭ್ ಶೆಟ್ಟಿ ಸೇರಿದಂತೆ ಹಲವು, ನಟರು ಮತ್ತು ನಿರ್ದೇಶಕರು ಯಶ್ ಅವರ ಸಿನಿಮಾಗೆ ಬೆಂಬಲ ಸೂಚಿಸಿದ್ದರು.
Yash Toxic: ಚಿಂತೆಯಲ್ಲಿ ಕೂರಬೇಡಿ ಎಂದ ಯಶ್;ಈ ತಂಡವು ಈ ಹಿಂದೆ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಿಂದ ಸುಮಾರು 150 ಕೋಟಿ ರೂ.ಗಳ ಆಫರ್ ಪಡೆದಿತ್ತು. ಆದರೆ 200 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಒಪ್ಪಂದವನ್ನು ಚಿತ್ರತಂಡ ಹುಡುಕುತ್ತಿತ್ತು ಎಂದು ವರದಿ ಹೇಳುತ್ತದೆ. ಟಾಕ್ಸಿಕ್ ತಯಾರಕರು 200 ಕೋಟಿ ರೂ.ಗಿಂತ ಹೆಚ್ಚಿನ OTT ಒಪ್ಪಂದವನ್ನು ನಿರೀಕ್ಷಿಸಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: Bigg Boss Kannada 13: ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ
ಚಿತ್ರದ ಬಾಕ್ಸ್ ಆಫೀಸ್ ಪ್ರದರ್ಶನದ ನಂತರ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಆಫರ್ ಗಣನೀಯವಾಗಿ ಕಡಿಮೆ ಮಾಡಿವೆ ಎನ್ನಲಾಗಿದೆ. ಡಿಜಿಟಲ್ ಪ್ಲಾಟ್ಫಾರ್ಮ್ ಈಗ ಎಲ್ಲಾ ಭಾಷೆಗಳ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ರೂ. 30 ಕೋಟಿಯಷ್ಟು ಕಡಿಮೆ ಮೊತ್ತವನ್ನು ನೀಡೋಕೆ ಅಷ್ಟೇ ಸಿದ್ಧವಾಗಿದೆ.