ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಯಶ್ - ರಾಧಿಕಾ ಲವ್ ಕಹಾನಿ ಏನು?

Rocking Star Yash- Radhika Pandit: ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬವಿದ್ದ ಹಿನ್ನೆಲೆ ಅವರ ಬಗ್ಗೆ ನಾನಾ ತರನಾಗಿ ಮಾಹಿತಿಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂತೆಯೇ ಇದೇ ದಿನದಂದು ಅವರ ಲವ್ ಸ್ಟೋರಿ ಹೇಗೆ ಸ್ಟಾರ್ಟ್ ಆಯ್ತು, ಸ್ನೇಹಿತರಾಗಿದ್ದ ಅವರ ನಡುವೆ ಈ ಪ್ರೀತಿಯ ಬಾಂಧವ್ಯ ಮೂಡಿದ್ದು ಹೇಗೆ? ಎಂಬ ಅನೇಕ ವಿಚಾರಗಳು ಹರಿದಾಡುತ್ತಿದೆ. ಸಂದರ್ಶನ ವೊಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದು ಸದ್ಯ ಅವರ ಲವ್ ಸಿಕ್ರೆಟ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಯಶ್-ರಾಧಿಕಾಗೆ ಪ್ರೀತಿ ಹುಟ್ಟಿದ್ದು ಯಾವಾಗ? ಲವ್ ಸಿಕ್ರೆಟ್ ರಿವಿಲ್!

ಯಶ್ ಮತ್ತು ರಾಧಿಕಾ ಪಂಡಿತ್ -

Profile
Pushpa Kumari Jan 8, 2026 12:10 PM

ಬೆಂಗಳೂರು, ಜ. 8: ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್‌ಗಳಲ್ಲಿ ನಟ ಯಶ್ (Yash) ಮತ್ತು ನಟಿ ರಾಧಿಕಾ ಪಂಡಿತ್ (Radhika Pandit) ಕೂಡ ಒಬ್ಬರಾಗಿದ್ದಾರೆ. ಒಟ್ಟಿಗೆ ಅನೇಕ ಸಿನಿಮಾದಲ್ಲಿ ಹೀರೋ ಹೀರೋಯಿನ್ ಆಗಿ ಮಿಂಚಿದ್ದ ಈ ಜೋಡಿ ಕಂಡರೆ ಬಹುತೇಕರಿಗೆ ಅಚ್ಚು ಮೆಚ್ಚು. ಮೊದಲಿಗೆ ಸ್ನೇಹಿತರಾಗಿದ್ದ ಈ ಜೋಡಿ ಬಳಿಕ ಈ ಸ್ನೇಹವೇ ಪ್ರೀತಿಯಾಗಿ ಬದಲಾಗಿದೆ. ನಂತರ ಇಬ್ಬರು ಮದುವೆಯಾಗಿದ್ದು ಖುಷಿಯ ಜೀವನ ನಡೆಸುತ್ತಿದ್ದಾರೆ. ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬವಿದ್ದ ಹಿನ್ನೆಲೆ ಅವರ ಬಗ್ಗೆ ನಾನಾ ತರನಾಗಿ ಮಾಹಿತಿಗಳು ಸೋಶಿ ಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂತೆಯೇ ಇದೇ ದಿನದಂದು ಅವರ ಲವ್ ಸ್ಟೋರಿ ಹೇಗೆ ಸ್ಟಾರ್ಟ್ ಆಯ್ತು, ಸ್ನೇಹಿತರಾಗಿದ್ದ ಅವರ ನಡುವೆ ಈ ಪ್ರೀತಿಯ ಬಾಂಧವ್ಯ ಮೂಡಿದ್ದು ಹೇಗೆ? ಎಂಬ ಅನೇಕ ವಿಚಾರಗಳು ಹರಿದಾಡುತ್ತಿದೆ. ಸಂದರ್ಶನ ವೊಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದು ಸದ್ಯ ಅವರ ಲವ್ ಸಿಕ್ರೆಟ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಸ್ಯಾಂಡಲ್‌ವುಡ್‌ನಲ್ಲಿ ರೀಲ್ ಜೋಡಿಯಿಂದ ರಿಯಲ್ ಜೋಡಿಯಾದ ಕಥೆ ಬಗ್ಗೆ ಈ ಹಿಂದೆಯೇ ಅನೇಕ ಗಾಸಿಪ್ ಹರಿದಾಡಿತ್ತು. ನಂದಗೋಕುಲ ಧಾರವಾಹಿಯಲ್ಲಿ ಇಬ್ಬರು ಪೋಷಕ ನಟರಾಗಿ ಮಿಂಚಿದ್ದರು. ಬಳಿಕ ರಾಧಿಕಾ ಅವರು ಉದಯ ಟಿವಿಯ ಕಾದಂಬರಿ ಧಾರವಾಹಿಯಲ್ಲಿಯೂ ನಟಿಸಿದ್ದಾರೆ. ನಟ ಯಶ್ ಅವರಿಗೆ ನಾಯಕ ನಟನಾಗಿ ಮಿಂಚಬೇಕು ಎಂಬ ಕನಸ್ಸು ಇದ್ದ ಕಾರಣ ಅವಕಾಶಕ್ಕಾಗಿ ಸಾಕಷ್ಟು ಅಲೆದಾಡಿದ್ದಾರೆ. ಆಗ ಅವರಿಗೆ ಜಂಭದ ಕೋಳಿ ಸಿನಿಮಾ ಆಫರ್ ಬಂದಿದದ್ದು ಅಲ್ಲಿಂದ ನಂತರ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಪೋಷಕ ನಟನಾಗುವ ಆಫರ್ ಸಿಕ್ಕಿತ್ತು.

ಮೊದಲು ಮೊಗ್ಗಿನ ಮನಸ್ಸು ಪೋಷಕ ನಟರಾಗಲು ಬೇರೊಬ್ಬ ನಾಯಕ ನಟನಿಗೆ ಆಫರ್ ನೀಡಲಾಗಿತ್ತು‌. ಬಹುತೇಕ ಶೂಟಿಂಗ್ ಕೂಡ ನಡೆದಿತ್ತು. ಆದರೆ ಆ ವ್ಯಕ್ತಿ ಅನಿವಾರ್ಯ ಕಾರಣ ದಿಂದ ಶೂಟಿಂಗ್ ಬರಲಾಗದ ಕಾರಣ ಹೊಸ ನಟನನ್ನು ಸಿನಿಮಾ ತಂಡ ಹುಡುಕುತ್ತಿದ್ದಾಗಲೇ ನಟ ಯಶ್ ಅವರನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ಅದೇ ಸಿನಿಮಾದಲ್ಲಿ ನಟಿ ರಾಧಿಕಾ ಪಂಡಿತ್ ಮತ್ತು ನಟ ಯಶ್ ಹೀರೋ ಹೀರೋಯಿನ್ ಆಗಿ ಮಿಂಚಿದ್ದು ಈ ಸಿನಿಮಾ ಅವರ ಬದುಕಿನಲ್ಲಿ ಸಕ್ಸಸ್ ಜರ್ನಿಗೆ ಹೊಸ ಮುನ್ನುಡಿ ಬರೆದಿದೆ.

ಅದಾದ ಬಳಿಕ ಇಬ್ಬರು ಸ್ನೇಹಿತರಾಗಿದ್ದ ಇವರು ಒಬ್ಬರಿಗೊಬ್ಬರು ಎಲ್ಲವನ್ನೂ ಹಂಚಿ ಕೊಳ್ಳುತ್ತಿದ್ದರು. ವೃತ್ತಿಪರ ಜೀವನದಲ್ಲಿ ಏರಿಳಿತ , ನೋವು , ನಲಿವು, ಎಲ್ಲವನ್ನು ಶೇರ್ ಮಾಡು ತ್ತಿದ್ದರು. ಪ್ರೀತಿ ಯಾವಾಗ ಆಯ್ತು ಎಂಬುದರ ಬಗ್ಗೆ ನಟ ಯಶ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದು‌ನಾವು ಒಳ್ಳೆ ಸ್ನೇಹಿತರಾಗಿದ್ದಾಗ ಎಲ್ಲ ವಿಚಾರ ಹಂಚಿಕೊಳ್ಳುತ್ತಲೇ ಅವರು ನನಗೆ ಅರ್ಥವಾಗುತ್ತ ಹೋದರು. ನಾನು ಯಾರನ್ನು ಅಷ್ಟಾಗಿ ಹಚ್ಚಿಕೊಂಡಿರಲಿಲ್ಲ. ಆದರೆ ರಾಧಿಕಾ ಬಹಳ ಇಷ್ಟವಾಗಿ ಬಿಟ್ಟಿದ್ದರು. ಆಕೆ ಬರಿ ನನ್ನ ಸ್ನೇಹಿತಳಲ್ಲ ಎಂಬ ಅರಿವು ನನಗಾಯ್ತು ಎಂದು ಹೇಳಿದ್ದಾರೆ.

Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ಅವಳ ವೈಯಕ್ತಿಕ ಜೀವನ , ವೃತ್ತಿ ಜೀವನ ಎಲ್ಲವನ್ನು ನಿಭಾಯಿಸುವ ರೀತಿ, ಎಲ್ಲದನ್ನು ಖುಷಿ ಯಾಗಿ ಸ್ವೀಕರಿಸುವ ಪರಿ ನನಗೆ ಇಷ್ಟವಾಯ್ತು. ನನಗೂ ಅನೇಕ ವಿಚಾರದಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ನನಗೆ ಅವರನ್ನು ಭೇಟಿಯಾಗುವ ಮೊದಲು ನನಗೆ ಪ್ರೀತಿ , ಪ್ರೇಮದ ನಂಬಿಕೆ ಇರಲಿಲ್ಲ. ಆದರೆ ಆ ಅಭಿಪ್ರಾಯ ಬದಲಾಗಿದೆ. ಹೀಗೆ ನನ್ನ ಬದುಕು ಅವಳಿಂದ ಹೊಸ ಪರಿ ಪೂರ್ಣತೆ ಸಿಗುತ್ತದೆ ಎಂಬ ಭರವಸೆ ಮೂಡಲ್ಟಟ್ಟಿತ್ತು. ಹೀಗಾಗಿ ಪ್ರಪೋಸ್ ಮಾಡಿದ್ದು ಈಗ ದಂಪತಿಗಳಾಗಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ನಟಿ ರಾಧಿಕಾ ಪಂಡಿತ್ ಕೂಡ ಮಾತನಾಡಿದ್ದು, ನನಗೆ ಲವ್ ಮೂಮೆಂಟ್ ಗಳು ಕಾಲ್ ಮೆಸೇಜ್ ಇಷ್ಟವಿತ್ತು ಆದರೆ ಯಶ್ ಅದರಿಂದೆಲ್ಲ ದೂರ ಇದ್ದರು. ಅವರಿಗೆ ಡೇಟಿಂಗ್ ಮಾಡುವುದು ಅಷ್ಟು ಇಷ್ಟ ಇರಲಿಲ್ಲ. ಅಲ್ಲಿ ಸಮಯ ವ್ಯರ್ಥ ಮಾಡುವ ಬದಲು ಏನಾದರೂ ಹೊಸತು ಮಾಡ ಬೇಕು ಎಂಬ ಯೋಚನೆ ಅವರಲ್ಲಿತ್ತು ಹೀಗಾಗಿ ನಾವು ಡೇಟಿಂಗ್ ಏನು ಮಾಡಿಲ್ಲ. ಲವ್ ಮಾಡಿ ಮದುವೆಯಾಗಿದ್ದು ಈಗ ಖುಷಿಯಿಂದ ಇದ್ದೇವೆ ಎಂದು ತಿಳಿಸಿದ್ದಾರೆ..