Navya Nair: ಮಲ್ಲಿಗೆ ಹೂವು ಆಸ್ಟ್ರೇಲಿಯಾಗೆ ತೆಗೆದುಕೊಂಡು ಹೋಗಿದ್ದಕ್ಕೆ ನಟಿಗೆ ಬಿತ್ತು ಭಾರೀ ದಂಡ!
ಖ್ಯಾತ ನಟಿ ನವ್ಯಾ ನಾಯರ್ ಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.1.1 ಲಕ್ಷ ದಂಡ ಹಾಕಲಾಗಿದೆ. ಕಾರಣ ಕೇಳಿದ್ರೆ ಅಚ್ಚರಿ ಎನಿಸುವುದಂತೂ ಸುಳ್ಳಲ್ಲ. ಮಲ್ಲಿಗೆ ಹೂಗಳನ್ನು ಕೊಂಡೊಯ್ದಿದ್ದಕ್ಕಾಗಿ ನಟಿ ನವ್ಯಾ ನಾಯರ್ ಅವರಿಗೆ ಸುಮಾರು 1.14 ಲಕ್ಷ (AUD 1,980) ದಂಡ ವಿಧಿಸಲಾಗಿದೆ.

-

ಮುಂಬೈ: ಖ್ಯಾತ ನಟಿ ನವ್ಯಾ ನಾಯರ್ ಗೆ (Navya Nair) ಆಸ್ಟ್ರೇಲಿಯಾದ (Australia Airport) ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.1.1 ಲಕ್ಷ ದಂಡ ಹಾಕಲಾಗಿದೆ. ಕಾರಣ ಕೇಳಿದ್ರೆ ಅಚ್ಚರಿ ಎನಿಸುವುದಂತೂ ಸುಳ್ಳಲ್ಲ. ಮಲ್ಲಿಗೆ ಹೂಗಳನ್ನು ಕೊಂಡೊಯ್ದಿದ್ದಕ್ಕಾಗಿ ನಟಿ ನವ್ಯಾ ನಾಯರ್ ಅವರಿಗೆ ಸುಮಾರು 1.14 ಲಕ್ಷ (AUD 1,980) ದಂಡ ವಿಧಿಸಲಾಗಿದೆ. ವಿಕ್ಟೋರಿಯಾದಲ್ಲಿ ಮಲಯಾಳಿ ಅಸೋಸಿಯೇಷನ್‌ನ (Viral News) ಓಣಂ ಆಚರಣೆಯಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಕೇರಳದ ಕೊಚ್ಚಿಯಿಂದ ನಟಿ ನವ್ಯಾ ನಾಯರ್ ಆಸ್ಟ್ರೇಲಿಯಾಗೆ ಓಣಂಗೆಂದು ತೆರಳಿದ್ದರು. ವಿಮಾನ ಹತ್ತುವ ಮುನ್ನ ಆಕೆಯ ತಂದೆ ಮಲ್ಲಿಗೆ ಹೂವನ್ನು ತಂದುಕೊಟ್ಟಿದ್ದರು. ಬ್ಯಾಗ್‌ನಲ್ಲಿ ಇಟ್ಟುಕೊಂಡು ಮೆಲ್ಬೋರ್ನ್‌ನಲ್ಲಿ ಇಳಿದಿದ್ದರು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು 1.14 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ ಎಂದು ನಟಿ ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡುವ ಮೊದಲು ತನ್ನ ತಂದೆ ಉಡುಗೊರೆಯಾಗಿ ನೀಡಿದ 15 ಸೆಂ.ಮೀ ಉದ್ದದ ಮಲ್ಲಿಗೆ ಹೂವಿನ ಹಾರವನ್ನು ತೆಗೆದುಕೊಂಡು ಹೋಗಿದ್ದೆ. ಆ ದೇಶದ ನಿಯಮಗಳ ಅರಿವಿಲ್ಲದೆ ವಿಮಾನ ನಿಲ್ದಾಣದ ಫಾರಂನಲ್ಲಿ ಮಲ್ಲಿಗೆ ಹೂ ತೆಗೆದುಕೊಂಡು ಹೋಗುವ ಬಗ್ಗೆ ಯಾವುದೇ ಘೋಷಣೆ ಮಾಡಿರಲಿಲ್ಲ. ಇದು ದಂಡಕ್ಕೆ ಕಾರಣವಾಯಿತು ಎಂದು ಸ್ವತಃ ನಟಿ ಹೇಳಿದ್ದಾರೆ.
ಆಸ್ಟ್ರೇಲಿಯಾದ ನಿಯಾಮಾವಳಿಗಳ ಪ್ರಕಾರ, ಕೀಟಗಳು, ರೋಗಕಾರಕಗಳಂತಹ ಜೈವಿಕ ಅಪಾಯಗಳನ್ನು ತಡೆಯವ ಉದ್ದೇಶದಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶಗಳಿಂದ ಆಸ್ಟ್ರೇಲಿಯಾಗೆ ತರುವ ಬಗ್ಗೆ ಮೊದಲ ಮಾಹಿತಿ ನೀಡಬೇಕು. ಆಸ್ಟ್ರೇಲಿಯಾದ ನಿಯಾಮಾವಳಿಗಳ ಪ್ರಕಾರ, ಕೀಟಗಳು, ರೋಗಕಾರಕಗಳಂತಹ ಜೈವಿಕ ಅಪಾಯಗಳನ್ನು ತಡೆಯವ ಉದ್ದೇಶದಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶಗಳಿಂದ ಆಸ್ಟ್ರೇಲಿಯಾಗೆ ತರುವ ಬಗ್ಗೆ ಮೊದಲ ಮಾಹಿತಿ ನೀಡಬೇಕು.
ಈ ಸುದ್ದಿಯನ್ನೂ ಓದಿ: CM Siddaramaiah: ಸಿಎಂ ಕಾರಿನ ಮೇಲೆ 2,000 ರೂ. ದಂಡ, ಫೈನ್ ಕಟ್ಟಿ ಮಾದರಿಯಾದ ಸಿದ್ದರಾಮಯ್ಯ
ಅಂತಹ ವಿದೇಶಿ ಸಸ್ಯ ಅಥವಾ ಪ್ರಾಣಿಗಳನ್ನು ಸರಿಯಾದ ಘೋಷಣೆ ಮತ್ತು ತಪಾಸಣೆಯ ನಂತರ ಮಾತ್ರ ದೇಶಕ್ಕೆ ತರಬೇಕು. 28 ದಿನಗಳಲ್ಲಿ ದಂಡ ಪಾವತಿಸುವಂತೆ ನಟಿಗೆ ಸೂಚಿಸಲಾಗಿದೆ. ನಾನು ಮಾಡಿದ್ದು ಕಾನೂನಿಗೆ ವಿರುದ್ಧ, ಅದು ನಾನು ತಿಳಿಯದೆ ಮಾಡಿದ ತಪ್ಪು. ಅದಕ್ಕಾಗಿ ನಾನು ಅವರಲ್ಲಿ ಕ್ಷಮೆ ಕೂಡ ಯಾಚಿಸುತ್ತೇನೆ ಹಾಗೂ ದಂಡವನ್ನು ಪಾವತಿಸುತ್ತೇನೆ ಎಂದು ನಟಿ ಹೇಳಿದ್ದಾರೆ.