Shefali Jariwala: ಶೆಫಾಲಿ ಜರಿವಾಲಾ ಸಾವಿನ ಬಗ್ಗೆ ಶಂಕೆ- ನಟಿಯ ಮನೆಯಲ್ಲಿ ಪೊಲೀಸರಿಂದ ತನಿಖೆ
ರೂಪದರ್ಶಿ, ನಟಿ ಶೆಫಾಲಿ ಜರಿವಾಲಾ (Shefali Jariwala) ಸಾವಿನ ಬಗ್ಗೆ ಶಂಕೆ ಇದೀಗ ವ್ಯಕ್ತವಾಗಿದೆ. ಯಾಕೆಂದರೆ ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದು, ಅವರ ಮನೆಯನ್ನೆಲ್ಲ ಶೋಧಿಸಿ, ಅಡುಗೆಯವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಐಕಾನಿಕ್ ಮ್ಯೂಸಿಕ್ ವಿಡಿಯೋ ಕಾಂಟಾ ಲಗಾ.. ಹಾಡಿನ ಮೂಲಕ ಎಲ್ಲರ ಮನಗೆದ್ದಿದ್ದ ಶೆಫಾಲಿ ಜರಿವಾಲಾ 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮುಂಬೈನಲ್ಲಿ ಶುಕ್ರವಾರ ನಿಧನರಾಗಿದ್ದಾರೆ.


ಮುಂಬೈ: ರೂಪದರ್ಶಿ, ನಟಿ ಶೆಫಾಲಿ ಜರಿವಾಲಾ (Shefali Jariwala) ಸಾವು ಅನುಮಾನಾಸ್ಪದ ವಾಗಿದೆಯೇ ಎನ್ನುವ ಶಂಕೆ ಇದೀಗ ವ್ಯಕ್ತವಾಗಿದೆ. ಯಾಕೆಂದರೆ ಪೊಲೀಸರು (Mumbai police) ಅವರ ಮನೆಗೆ ಭೇಟಿ ನೀಡಿದ್ದು, ಅವರ ಮನೆಯನ್ನೆಲ್ಲ ಶೋಧಿಸಿ, ಅಡುಗೆಯವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಶೆಫಾಲಿ ಜರಿವಾಲಾ ಅವರ ಸಾವಿನ ಬಳಿಕ ಅವರ ನಿವಾಸಕ್ಕೆ ವಿಧಿವಿಜ್ಞಾನ ತಂಡ (forensic team) ಭೇಟಿ ನೀಡಿದ್ದು, ಅಲ್ಲಿ ಅವರು ವ್ಯಾಪಕ ಶೋಧ ನಡೆಸಿದ್ದಾರೆ. ನಟಿ ಹೃದಯಾಘಾತದಿಂದ (cardiac arrest) ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದರೂ ಮುಂಬೈ ಪೊಲೀಸರು ನಟಿಯ ಸಾವನ್ನು ಅನುಮಾನಾಸ್ಪದವೆಂದು ಪರಿಗಣಿಸಿದ್ದಾರೆ.
ಐಕಾನಿಕ್ ಮ್ಯೂಸಿಕ್ ವಿಡಿಯೋ ಕಾಂಟಾ ಲಗಾ.. ಹಾಡಿನ ಮೂಲಕ ಎಲ್ಲರ ಮನಗೆದ್ದಿದ್ದ ಶೆಫಾಲಿ ಜರಿವಾಲಾ 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮುಂಬೈನಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅವರ ಸಾವಿನ ಬಳಿಕ ಅವರ ನಿವಾಸಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಅಲ್ಲಿ ಅವರು ವ್ಯಾಪಕ ಶೋಧ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿರುವ ಮುಂಬೈ ಪೊಲೀಸರು ಅವರ ಸಾವಿಗೆ ಕಾರಣವಾದ ಘಟನೆಗಳ ಬಗ್ಗೆ ಮನೆಯ ಅಡುಗೆಯವರು ಮತ್ತು ಮನೆಕೆಲಸದವರನ್ನು ಪ್ರಶ್ನಿಸಿದ್ದಾರೆ.
ಶೆಫಾಲಿ ಸಾವಿಗೆ ಕಾರಣ ಅಥವಾ ಸ್ವರೂಪದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲವಾದರೂ ಪೊಲೀಸರು ಮತ್ತು ವಿಧಿವಿಜ್ಞಾನ ಅಧಿಕಾರಿಗಳು ಇದನ್ನು ಅನುಮಾನಾಸ್ಪದವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಹಲವಾರು ದೂರದರ್ಶನ ನಟ, ನಟಿಯರು ಶೆಫಾಲಿ ಜರಿವಾಲಾ ಅವರ ನಿಧನಕ್ಕೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಶೆಫಾಲಿ ಜರಿವಾಲಾ ಅವರೊಂದಿಗೆ ಬಿಗ್ ಬಾಸ್ 13 ರಲ್ಲಿ ಭಾಗವಹಿಸಿದ್ದ ಹಿಮಾಂಶಿ ಖುರಾನಾ ತಮ್ಮ ಇನ್ಸ್ಟಾಗ್ರಾಮ್ ಕಥೆಯಲಿ "ಬಿಗ್ ಬಾಸ್ ಸ್ಥಳ ಶಾಪಗ್ರಸ್ತ ಎಂದು ನಾನು ಭಾವಿಸುತ್ತೇನೆ" ಎಂದು ಬರೆದಿದ್ದಾರೆ.
ಇದನ್ನೂ ಓದಿ: Shefali Jariwala: ಪತಿ ಜೊತೆಗೆ ಶೆಫಾಲಿ ಹೃದಯಸ್ಪರ್ಶಿ ಕ್ಷಣಗಳ ಫೋಟೋಸ್ ಫುಲ್ ವೈರಲ್
ಕಿಕು ಶಾರದಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೆಫಾಲಿ ಜರಿವಾಲಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡು, ಇದು ಆಘಾತಕಾರಿ. ಅವರೊಂದಿಗೆ ಒಂದೆರಡು ವೆಬ್ ಶೋಗಳಲ್ಲಿ ಕೆಲಸ ಮಾಡಿದ್ದೀನಿ. ಅವರು ಆರೋಗ್ಯವಾಗಿದ್ದರು, ಉತ್ಸಾಹದಿಂದ ಇರುತ್ತಿದ್ದರು. ಯಾವಾಗಲೂ ಎಲ್ಲರನ್ನೂ ನಗುವಿನೊಂದಿಗೆ ಸ್ವಾಗತಿಸುತ್ತಿದ್ದರು ಎಂದು ಹೇಳಿದ್ದಾರೆ. ಕಾಮ್ಯ ಪಂಜಾಬಿ, ರಶ್ಮಿ ದೇಸಾಯಿ, ರಾಜೀವ್ ಅಡಾಟಿಯಾ ಮತ್ತು ಕಿಶ್ವರ್ ಮರ್ಚೆಂಟ್ ಕೂಡ ಶೆಫಾಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.