Zee Entertainers Comedy Awards: ಝೀ ಕನ್ನಡದಲ್ಲಿ ಕಾಮಿಡಿ ಸ್ಟಾರ್‌ಗಳ ಸಮಾಗಮ
ಝೀ ಎಂಟರ್ಟೈನರ್ಸ್ ಕಾಮಿಡಿ ಅವಾರ್ಡ್ಸ್ 2025ರಲ್ಲಿ ಚಂದನವನದ ಹಾಸ್ಯ ಕಲಾವಿದರ ಸಮಾಗ ಮವಾಗಲಿದೆ. ಈ ವೇದಿಕೆಯಲ್ಲಿ ಕಣ್ಮರೆಯಾದ ಹಾಸ್ಯ ದಿಗ್ಗಜರ ಸ್ಮರಣೆ ಜತೆಗೆ ನಕ್ಕು ನಗಿಸುವ ಸ್ಕಿಟ್‌ಗಳೂ ಇರಲಿವೆ. ಸ್ಯಾಂಡಲ್‌ವುಡ್‌ನ ನಟರಾದ ಸಾಧು ಕೋಕಿಲ, ಪ್ರಾಣೇಶ್, ತರುಣ್ ಸುಧೀರ್, ಲೂಸ್ ಮಾದ ಯೋಗಿ, ದಿಗಂತ್, ಮಾಳವಿಕಾ, ಸೋನು ಗೌಡ, ರಿಷಿ ಸೇರಿ ಹಲವಾರು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರು: ಮನರಂಜನೆಗೆ ಮತ್ತೊಂದು ಹೆಸರೇ ಝೀ ಕನ್ನಡ. ಜನಪ್ರಿಯ ಧಾರಾವಾಹಿಗಳು, ನಾನ್ ಫಿಕ್ಷನ್ ಶೋಗಳಿಂದ ವೀಕ್ಷಕರ ಪ್ರೀತಿಗೆ ಪಾತ್ರವಾಗಿರುವ ಝೀ ಕನ್ನಡ ಇದೀಗ ಝೀ ಎಂಟರ್ಟೈನರ್ಸ್ ಕಾಮಿಡಿ ಅವಾರ್ಡ್ಸ್ 2025ರ (Zee Entertainers Comedy Awards) ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ.
ಝೀ ಎಂಟರ್ಟೈನರ್ಸ್ ಕಾಮಿಡಿ ಅವಾರ್ಡ್ಸ್ 2025ರಲ್ಲಿ ಚಂದನವನದ ಹಾಸ್ಯ ಕಲಾವಿದರ ಸಮಾಗಮವಾಗಲಿದೆ. ಈ ವೇದಿಕೆಯಲ್ಲಿ ಕಣ್ಮರೆ ಯಾದ ಹಾಸ್ಯ ದಿಗ್ಗಜರ ಸ್ಮರಣೆ ಜತೆಗೆ ನಕ್ಕು ನಗಿಸುವ ಸ್ಕಿಟ್‌ಗಳೂ ಇರಲಿದೆ. ಸ್ಯಾಂಡಲ್‌ವುಡ್‌ನ ನಟರಾದ ಸಾಧು ಕೋಕಿಲ, ಪ್ರಾಣೇಶ್, ತರುಣ್ ಸುಧೀರ್, ಲೂಸ್ ಮಾದ ಯೋಗಿ, ದಿಗಂತ್, ಮಾಳವಿಕಾ, ಸೋನು ಗೌಡ, ರಿಷಿ ಸೇರಿ ಹಲವು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಫೆ. 8 ಮತ್ತು 9ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಕಲರ್ಸ್ ಕನ್ನಡದಲ್ಲಿ ಜೋಡಿ ರಿಯಾಲಿಟಿ ಶೋ ಆರಂಭ
ಜನಪ್ರಿಯ ಟಿವಿ ಚಾನೆಲ್ ಕಲರ್ಸ್ ಕನ್ನಡವು 2 ಹೊಸ ರಿಯಾಲಿಟಿ ಶೋಗಳನ್ನು ಆರಂಭಿಸಿದೆ. ‘ಬಾಯ್ಸ್ V/S ಗರ್ಲ್ಸ್’ ಎಂಬ ಗೇಮ್ ಶೋ ಮತ್ತು ಕಚಗುಳಿಯಿಟ್ಟು ನಗಿಸುವ ‘ಮಜಾ ಟಾಕೀಸ್’ ಶೋಗಳು ಫೆ. 1ರಿಂದ ಪ್ರಸಾರವಾಗುತ್ತಿವೆ. ಪ್ರತಿ ಶನಿವಾರ ಮತ್ತು ಭಾನುವಾರ 7: 30ಕ್ಕೆ ‘ಬಾಯ್ಸ್ V/S ಗರ್ಲ್ಸ್’ ಹಾಗೂ 9 ಗಂಟೆಗೆ ʼಮಜಾ ಟಾಕೀಸ್ʼ ಪ್ರಸಾರವಾಗುತ್ತಿವೆ.
ಇದನ್ನು ಓದಿ: Pilipanja Cinema: ‘ಪಿಲಿ ಪಂಜ’ ಶೂಟಿಂಗ್ ಫಿನಿಶ್– ತೆರೆಗೆ ಯಾವಾಗ ಬರಲಿದೆ ಗೊತ್ತಾ?
ಬಾಯ್ಸ್ V/S ಗರ್ಲ್ಸ್
ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಹೆಸರಾಗಿರುವ ಕಲರ್ಸ್ ಕನ್ನಡ ಆರಂಭಿಸಿರುವ ‘ಬಾಯ್ಸ್ V/S ಗರ್ಲ್ಸ್’ ಒಂದು ರೋಮಾಂಚಕ ಗೇಮ್ ಶೋ. ಹುಡುಗ ಮತ್ತು ಹುಡುಗಿಯರ ಗುಂಪುಗಳು ಜಿದ್ದಾಜಿದ್ದಿಗೆ ಬಿದ್ದು ನೋಡುಗರ ಬಿಸಿ ಏರಿಸುವ ಆಟದ ಶೋ ಇದು. ಬಾಯ್ಸ್ ತಂಡವನ್ನು ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮುನ್ನಡೆಸಿದರೆ, ಹುಡುಗಿಯರ ಗುಂಪಿನ ನಾಯಕಿ ನಟಿ ಶುಭಾ ಪೂಂಜಾ. ಇನ್ನು ಸ್ಪರ್ಧಿಗಳ ಪಟ್ಟಿಯೂ ಅಷ್ಟೇ ರೋಚಕವಾಗಿದೆ.
ಮಜಾ ಟಾಕೀಸ್
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಈಗಾಗಲೇ ಮೂರು ಯಶಸ್ವಿ ಸೀಸನ್‌ಗಳನ್ನು ಪೂರೈಸಿರುವ ‘ಮಜಾ ಟಾಕೀಸ್’ ಇದೀಗ ಮತ್ತೊಂದು ಹೊಸ ಸೀಸನ್ ಶುರು ಮಾಡಿದೆ. ಎಲ್ಲ ವಯಸ್ಸಿನ ವೀಕ್ಷಕರನ್ನೂ ಸೆಳೆಯುವ ಸೃಜನ್ ಈ ಹೊಸ ಸೀಸನ್‌ನಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದ್ದಾರೆ. ಈ ಸಲದ ಮಜಾ ಟಾಕೀಸ್‌ನಲ್ಲಿ ಹಲವು ಹೊಸ ಪಾತ್ರಗಳು ಬಂದಿವೆ.