ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಝೆನ್ ಜಿ ಬಗ್ಗೆ ತಿಳಿದುಕೊಳ್ಳಲು ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾದ ಬಿಜೆಪಿ

ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ಎನ್ ಡಿಎ ಸರ್ಕಾರಕ್ಕೆ ಬಹುದೊಡ್ಡ ಹೊಡೆತವನ್ನೇ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗೆ ಕ್ರಮಗಳನ್ನು ಕೈಗೊಂಡ ಬೆನ್ನಲ್ಲೇ ಝೆನ್ ಜಿ ಬಗ್ಗೆ ತಿಳಿದುಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಸಚಿವ ಸಂಪುಟ, ಮುಖ್ಯಸ್ಥರ ತಂಡದಲ್ಲಿ ಯುವ ನಾಯಕರಿಗೆ ಮಣೆ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಸಿಜೆಪಿ ಪ್ರತಿಭಟಣೆ ಬಳಿಕ ಬಿಜೆಪಿಯಿಂದ ಮಹತ್ವದ ನಿರ್ಧಾರ

ಸಂಗ್ರಹ ಚಿತ್ರ -

ನವದೆಹಲಿ: ದೇಶದ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದ ಕಾಕ್ರೋಚ್ ಜನತಾ ಪಕ್ಷದ (Cockroach Janata Party) ಪ್ರತಿಭಟನೆಯ ಬಳಿಕ ಕೇಂದ್ರ ಸರ್ಕಾರವು ಝೆನ್ ಜಿ (Gen Z) ಬಗ್ಗೆ ತಿಳಿದುಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಸಚಿವ ಸಂಪುಟ, ಮುಖ್ಯಸ್ಥರ ತಂಡದಲ್ಲಿ ಯುವ ನಾಯಕರಿಗೆ ಮಣೆ ಹಾಕಲು ಭಾರತೀಯ ಜನತಾ ಪಕ್ಷವು (Bharatiya Janata Party) ಸಿದ್ಧತೆ ನಡೆಸುತ್ತಿದೆ. ಝೆನ್ ಜಿ ಅನ್ನು ಅರಿಯಲು ಅವರನ್ನು ಸಂಪರ್ಕಿಸಲು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೆಚ್ಚಾಗಿ ಬಳಸುವಂತೆ ಸಚಿವರಿಗೆ ಸೂಚಿಸಲಾಗಿದೆ. ಇದರೊಂದಿಗೆ ಇತರ ಮಾರ್ಗಗಳನ್ನು ಕೂಡ ಅನ್ವೇಷಿಸಲು ಸೂಚಿಸಲಾಗಿದೆ ಎಂದು ಪಕ್ಷಗಳ ಮೂಲಗಳು ತಿಳಿಸಿವೆ.

ನೀಟ್ ಪ್ರಶ್ನೆ ಪತ್ರಿಕೆ ವಿರುದ್ಧ ದೇಶಾದ್ಯಂತ ಜನರಲ್ ಝಡ್ ಪ್ರತಿಭಟನೆ ಎನ್ ಡಿಎ ಸರ್ಕಾರಕ್ಕೆ ಬಹುದೊಡ್ಡ ಹೊಡೆತವನ್ನೇ ನೀಡಿದೆ. ಇದನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಂಡಿತು. ಹೀಗಾಗಿ ಹೆಚ್ಚಿನ ಪರಿಣಾಮವನ್ನು ತಗ್ಗಿಸುವಲ್ಲಿ ಯಶಸ್ವಿಯಾಯಿತು. ಆದರೆ ಇದರಿಂದ ಹೊಸ ಪೀಳಿಗೆಯೊಂದಿಗೆ ಉತ್ತಮ ಸಂವಹನ ಮತ್ತು ಬಾಂಧವ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂಬುದನ್ನು ಬಿಜೆಪಿ ಮನಗಂಡಿದೆ. ಹೀಗಾಗಿ ಪಕ್ಷದಲ್ಲಿ ಯುವ ನಾಯಕರಿಗೆ ಮಣೆ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಾನು ಮಾಡಿರುವುದು ಕ್ಷಮೆಗೆ ಅರ್ಹವಲ್ಲ; ಆದರೂ ನನ್ನನ್ನು ಕ್ಷಮಿಸಿಬಿಡಿ: ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಿದ ಬಾಲಕಿ

ಸರ್ಕಾರದ ಮಟ್ಟದಲ್ಲಿ ಝೆನ್ ಜಿ ಜೊತೆ ಸಂವಹನ ನಡೆಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಹೆಚ್ಚಾಗಿ ಬಳಸಲು ಸಚಿವರಿಗೆ ಸೂಚಿಸಲಾಗಿದೆ. ಇದರೊಂದಿಗೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಪರ್ಯಾಯ ವೇದಿಕೆಗಳನ್ನು ಬಳಸಿಕೊಳ್ಳುವ ಮಾರ್ಗಗಳನ್ನು ಕೂಡ ಅನ್ವೇಷಿಸಲಾಗುತ್ತಿದೆ.

ಬಿಜೆಪಿ ಮುಖ್ಯಸ್ಥ ನಿತಿನ್ ನಬಿನ್ ಅವರು ಇತ್ತೀಚೆಗೆ ಬಿಜೆಪಿ ನಾಯಕರೊಬ್ಬರು ವಯಸ್ಸು ಕೇವಲ ಒಂದು ಅಂಶವಾಗಿದೆ. ಯುವಕರಲ್ಲಿ ಜನಪ್ರಿಯರಾಗಿರುವ ಮತ್ತು ಅವರೊಂದಿಗೆ ತೊಡಗಿಸಿಕೊಳ್ಳುವ ಸಾಮರ್ಥ್ಯವಿರುವ ವ್ಯಕ್ತಿತ್ವವನ್ನು ಹೊಂದಿರುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದರು

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡ ಅವರು ಝೆನ್ ಜಿ ಜೊತೆ ಸಂಪರ್ಕ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉಪಕ್ರಮ ತೆಗೆದುಕೊಂಡಿದ್ದಾರೆ. ಯುವ ಪೀಳಿಗೆಯಲ್ಲಿ ಅವರ ಜನಪ್ರಿಯತೆ ಮತ್ತು ಇಮೇಜ್ ಗಮನಾರ್ಹವಾಗಿ ಪ್ರಬಲವಾಗಿದೆ. ಇದಕ್ಕೆ ಸಾಕ್ಷಿಯಾಗಿ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ನೋಡಬಹುದಾಗಿದೆ ಏನು ಹೇಳಿದ್ದರು.

ಪಕ್ಷದ ಮುಖ್ಯಸ್ಥರಾಗಿರುವ ನಿತಿನ್ ನಬಿನ್ ಅವರ ವಯಸ್ಸು 45. ಇತರ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಹೋಲಿಸಿದರೆ ಬಿಜೆಪಿ ಅತ್ಯಂತ ಕಿರಿಯರನ್ನು ಪಕ್ಷದ ನಾಯಕರನ್ನಾಗಿ ಮಾಡಿದೆ. ಇದು ಬಿಜೆಪಿಯೊಳಗಿನ ನಾಲ್ಕನೇ ಪೀಳಿಗೆಗೆ ನಿಯಂತ್ರಣವನ್ನು ಹಸ್ತಾಂತರಿಸುವುದನ್ನು ಸೂಚಿಸುತ್ತದೆ ಎನ್ನುತ್ತಾರೆ ಬಿಜೆಪಿ ನಾಯಕರು.

ಮಳೆಗಾಲದ ಅಧಿವೇಶನದ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಬದಲಾವಣೆಗಳಾಗುವ ನಿರೀಕ್ಷೆ ಇದೆ. ಹಲವಾರು ಹಿರಿಯ ಸಚಿವರನ್ನು ಕೈ ಬಿಟ್ಟು ಕಿರಿಯ ನಾಯಕರಿಗೆ ಅಧಿಕಾರ ಸಿಗುವ ಸಾಧ್ಯತೆ ಇದೆ. ಇದಕ್ಕಾಗಿ ನಬಿನ್ ತಂಡ ಕಾರ್ಯ ನಿರ್ವಹಿಸುತ್ತಿದೆ. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 20 ರಂದು ನಿತಿನ್ ನಬಿನ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡರು. ಅಂದಿನಿಂದ ಅವರ ಹೊಸ ತಂಡದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ದೇಶಾದ್ಯಂತ ನಾಯಕರ ಪಟ್ಟಿ ಈಗ ಸಿದ್ಧವಾಗಿದೆ. ಈ ಪಟ್ಟಿಯ ಬಗ್ಗೆ ಹಿರಿಯ ನಾಯಕರ ಅಭಿಪ್ರಾಯ ಕೇಳಲಾಗಿದೆ. ಪಟ್ಟಿಯಲ್ಲಿರುವ ಎಲ್ಲರೂ 50 ವರ್ಷಕ್ಕಿಂತ ಕೆಳಗಿನವರು ಎನ್ನಲಾಗಿದೆ.

ಬಿಜೆಪಿಯು ಪಕ್ಷದ ಅಧ್ಯಕ್ಷರಿಗೆ ಸಹಾಯ ಮಾಡಲು ಪದಾಧಿಕಾರಿಗಳನ್ನು ನೇಮಿಸುತ್ತದೆ. ಇದರಲ್ಲಿ 13 ರಾಷ್ಟ್ರೀಯ ಉಪಾಧ್ಯಕ್ಷರು, ಒಂಬತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು 15 ಕಾರ್ಯದರ್ಶಿಗಳು ಇರುತ್ತಾರೆ. ರಾಷ್ಟ್ರೀಯ ಖಜಾಂಚಿಯನ್ನು ಕೂಡ ನೇಮಕ ಮಾಡಲಾಗುತ್ತದೆ. 2029ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಪ್ರಾತಿನಿಧ್ಯವನ್ನು ಖಚಿತಪಡಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರ ತನ್ನ ಪಕ್ಷದ ರಾಷ್ಟ್ರೀಯ ಹುದ್ದೆಗಳಲ್ಲಿ ಶೇಕಡಾ 33 ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ನಿಯಮ ತಿದ್ದುಪಡಿ ಮಾಡಿದೆ. ಇದರಿಂದ 38 ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಕನಿಷ್ಠ 13 ಮಂದಿ ಮಹಿಳೆಯರಾಗಿರುತ್ತಾರೆ. ಇದರೊಂದಿಗೆ ಹೆಚ್ಚುವರಿಯಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಂದ ಕನಿಷ್ಠ ಮೂವರು ಪದಾಧಿಕಾರಿಗಳ ನೇಮಕಕ್ಕೆ ಸೂಚಿಸಿದೆ.

ಇದರೊಂದಿಗೆ ಪ್ರಾದೇಶಿಕ, ಸಾಮಾಜಿಕ ಮತ್ತು ಧಾರ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಂಸದೀಯ ಮಂಡಳಿಯ ಪುನರ್ ರಚನೆಗೂ ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಚುನಾವಣಾ ಸಮಿತಿಯನ್ನು ರಚಿಸಬೇಕಾಗಿದ್ದು, ಇದರಲ್ಲಿ ಸಂಸದೀಯ ಮಂಡಳಿಯ ಎಲ್ಲಾ ಸದಸ್ಯರು ಮತ್ತು ಕೆಲವು ಇತರ ನಾಯಕರನ್ನು ಒಳಗೊಂಡಿರುತ್ತದೆ. ಪ್ರಸ್ತುತ ಇರುವ ಕೇಂದ್ರ ಚುನಾವಣಾ ಸಮಿತಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆ ವಿ ಶ್ರೀನಿವಾಸನ್ ಸದಸ್ಯರಾಗಿದ್ದಾರೆ.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಧ್ಯಕ್ಷರ ಹೊರತಾಗಿ ಗರಿಷ್ಠ 120 ಸದಸ್ಯರಿರುತ್ತಾರೆ. ಇವರಲ್ಲಿ ಕನಿಷ್ಠ 40 ಮಹಿಳೆಯರು, 12 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರಾಗಿರಬೇಕು. ಇದರೊಂದಿಗೆ ಹೆಚ್ಚುವರಿಯಾಗಿ, ರಾಷ್ಟ್ರೀಯ ಅಧ್ಯಕ್ಷರು ಅಗತ್ಯವಿರುವಂತೆ ವಿಶೇಷ ಆಹ್ವಾನಿತರು ಮತ್ತು ಶಾಶ್ವತ ಆಹ್ವಾನಿತರನ್ನು ನಾಮನಿರ್ದೇಶನ ಮಾಡಬಹುದಾಗಿದೆ.

ರಾಷ್ಟ್ರೀಯ ಮಂಡಳಿಯನ್ನು ಸಹ ರಚಿಸಲಾಗುತ್ತದೆ. ಇದರಲ್ಲಿ ರಾಜ್ಯ ಮಂಡಳಿಗಳಿಂದ ಚುನಾಯಿತರಾದ ಸದಸ್ಯರು, ಸಂಸದೀಯ ಪಕ್ಷದ ಶೇ. 10 ರಷ್ಟು ಸದಸ್ಯರು, ಪಕ್ಷದ ಎಲ್ಲಾ ಮಾಜಿ ಅಧ್ಯಕ್ಷರು, ರಾಜ್ಯ ಶಾಸಕಾಂಗ ಸಭೆ ಮತ್ತು ಮಂಡಳಿಗಳ ನಾಯಕರು, ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲಾ ಸದಸ್ಯರು, ಎಲ್ಲಾ ರಾಷ್ಟ್ರೀಯ ಪಕ್ಷದ ಘಟಕಗಳ ಅಧ್ಯಕ್ಷರು, ಪಕ್ಷದ ಮುಖ್ಯಸ್ಥರು, ನಾಮನಿರ್ದೇಶನ ಮಾಡಿದ 20 ಸದಸ್ಯರನ್ನು ಒಳಗೊಂಡಿರುತ್ತದೆ.

Kangana Ranaut : 'ಯುವಜನರನ್ನು ದಾರಿ ತಪ್ಪಿಸಬೇಡಿ' ಟ್ರೋಲ್ ಮಾಡುವವರ ವಿರುದ್ಧ ಕಂಗನಾ ತಿರುಗೇಟು

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಹಲವಾರು ಹೊಸ ಮುಖಗಳನ್ನು ರಾಜ್ಯಗಳಿಂದ ಸೇರಿಸಲಾಗುವುದು. ಇದು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಪೀಳಿಗೆಯ ನಾಯಕತ್ವವನ್ನು ಬೆಳೆಸಲು ಮತ್ತು ಯುವ ಅಧ್ಯಕ್ಷರೊಂದಿಗೆ ಸುಗಮ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ. ಪ್ರಸ್ತುತ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ತಾವ್ಡೆ, ಸುನಿಲ್ ಬನ್ಸಾಲ್ ಮತ್ತು ತರುಣ್ ಚುಗ್ ಕೂಡ ಹೊಸ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.