ಕೋಲ್ಕತ್ತಾ ವಿಮಾನ ನಿಲ್ದಾಣ ವಿಸ್ತರಣೆಗೆ 136 ವರ್ಷದ ಮಸೀದಿ ಸ್ಥಳಾಂತರ; ಪಶ್ಚಿಮ ಬಂಗಾಳ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ
Bankra Mosque: ಕೋಲ್ಕತ್ತಾ ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ವಿಮಾನಯಾನ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ 136 ವರ್ಷಗಳ ಇತಿಹಾಸ ಹೊಂದಿರುವ ಬಂಕ್ರಾ ಮಸೀದಿ ಹಾಗೂ ವಿಮಾನ ನಿಲ್ದಾಣ ಸಮೀಪದ ದೇವಾಲಯವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ವಿಮಾನ ನಿಲ್ದಾಣದ ಸಾಮರ್ಥ್ಯವು ವಾರ್ಷಿಕ 4 ಕೋಟಿ ಪ್ರಯಾಣಿಕರಿಗೆ ಏರಿಕೆಯಾಗುವ ನಿರೀಕ್ಷೆ ಇದೆ.
ವಿಮಾನ ನಿಲ್ದಾಣ ವಿಸ್ತರಣೆಗೆ ಮಸೀದಿ ಶಿಫ್ಟ್ -
ಕೋಲ್ಕತ್ತಾ, ಜೂ. 15: ಕೊಲ್ಕತ್ತಾ ವಿಮಾನ ನಿಲ್ದಾಣದ (Kolkata Airport) ವಿಸ್ತರಣೆ ಮತ್ತು ವಿಮಾನಯಾನ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 136 ವರ್ಷಗಳ ಇತಿಹಾಸ ಹೊಂದಿರುವ ಬಂಕ್ರಾ ಮಸೀದಿಯನ್ನು (Bankra Mosque) (ಗೌರಿಪುರ ಜಾಮೆ ಮಸೀದಿ - Gouripur Jame Masjid) ಸ್ಥಳಾಂತರಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಾಗಿದೆ. ವಿಮಾನ ನಿಲ್ದಾಣದ ದ್ವಿತೀಯ ರನ್‌ವೇ ಸಮೀಪದಲ್ಲಿರುವ ಈ ಮಸೀದಿ ಪ್ರಸ್ತುತ ಸುರಕ್ಷತಾ ಮಾನದಂಡಗಳಿಗೆ ಅಗತ್ಯವಿರುವ ಅಂತರಕ್ಕಿಂತ ಕಡಿಮೆ ದೂರದಲ್ಲಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಧಿಕಾರಿಗಳ ಪ್ರಕಾರ, ಮಸೀದಿ ರನ್‌ವೇಯಿಂದ ಸುಮಾರು 165 ಮೀಟರ್ ದೂರದಲ್ಲಿದ್ದು, ಅಂತಾರಾಷ್ಟ್ರೀಯ ವಿಮಾನಯಾನ ಸುರಕ್ಷತಾ ನಿಯಮಗಳ ಪ್ರಕಾರ ಕನಿಷ್ಠ 240 ಮೀಟರ್ ಅಂತರ ಅಗತ್ಯವಿದೆ. ಈ ಅಂತರದ ಕೊರತೆಯಿಂದ ರನ್‌ವೇ ವಿಸ್ತರಣೆ, ಸುಧಾರಿತ ಇಳಿಯುವಿಕೆ ವ್ಯವಸ್ಥೆ ಅಳವಡಿಕೆ ಹಾಗೂ ದೊಡ್ಡ ವಿಮಾನಗಳ ಸುಗಮ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ತಿಳಿಸಲಾಗಿದೆ.
ಕೋಲ್ಕತ್ತಾ ಬಂಕ್ರಾ ಮಸೀದಿ ಸ್ಥಳಾಂತರಕ್ಕೆ ಪ್ರಸ್ತಾವನೆ:
Airport Authorities finally decided to remove the mosque from the Kolkata airport.
— Sacredsinner (@PavitraPaapii) June 14, 2026
Few days back @SSikdarIndia (MLA) gave his word that there will be no compromise on development.
BJP WB continues its warp speed.@SuvenduWB @BJP4Bengal pic.twitter.com/Ad2JoFIesy
ವಿಮಾನ ನಿಲ್ದಾಣ ಪುನರ್‌ಅಭಿವೃದ್ಧಿ ಯೋಜನೆಯ ಭಾಗವಾಗಿ ಮಸೀದಿಯ ಜತೆಗೆ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಸಮೀಪದಲ್ಲಿರುವ ದೇವಾಲಯವನ್ನೂ ಸ್ಥಳಾಂತರಿಸಲಾಗುತ್ತಿದೆ. ಅಭಿವೃದ್ಧಿ ಮತ್ತು ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
“ಇಂದಿರಾ ಗಾಂಧಿ ಇರುತ್ತಿದ್ದರೆ ಬಿಜೆಪಿಯನ್ನು ನಿಷೇಧಿಸುತ್ತಿದ್ದರು”: ವಿವಾದ ಸೃಷ್ಟಿಸಿದ ಮಾಜಿ ಸಿಎಂ ಹೇಳಿಕೆ
ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ಉದ್ದೇಶದಿಂದ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಹೊಸದಾಗಿ ವಿಶಾಲ ಹಾಗೂ ಆಧುನಿಕ ಮಸೀದಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳಾಂತರದ ಬಳಿಕ ಭಕ್ತರು ಯಾವುದೇ ವಿಶೇಷ ಅನುಮತಿ ಅಥವಾ ಭದ್ರತಾ ನಿರ್ಬಂಧಗಳಿಲ್ಲದೆ ಹೊಸ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ.
ವಿಶೇಷ ವ್ಯವಸ್ಥೆಗೂ ಒತ್ತು
ಪ್ರಸ್ತುತ ಮಸೀದಿ ವಿಮಾನ ನಿಲ್ದಾಣದ ಅತಿ ಭದ್ರತಾ ವಲಯದೊಳಗೆ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಭಕ್ತರಿಗೆ ಮಾತ್ರ ಗುರುತಿನ ಚೀಟಿ ಪರಿಶೀಲನೆ ಹಾಗೂ ಭದ್ರತಾ ತಪಾಸಣೆಯ ನಂತರ ಪ್ರವೇಶ ನೀಡಲಾಗುತ್ತಿದೆ. ಶುಕ್ರವಾರ ಮತ್ತು ರಂಝಾನ್ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ.
ಕಳೆದ ಮೂರು ದಶಕಗಳಿಂದ ಚರ್ಚೆಯಲ್ಲಿರುವ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರದೊಂದಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಜಿಲ್ಲಾ ಆಡಳಿತ ಜಂಟಿಯಾಗಿ ಯೋಜನೆಯನ್ನು ಮುಂದುವರಿಸುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ ಕೋಲ್ಕತ್ತಾ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯ ಸುಮಾರು 4 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದ್ದು, ಪೂರ್ವ ಭಾರತದ ಪ್ರಮುಖ ವಿಮಾನ ನಿಲ್ದಾಣವಾಗಿ ಇನ್ನಷ್ಟು ಬಲಿಷ್ಠವಾಗಲಿದೆ.