Fire Accident: ಭಾರೀ ಅಗ್ನಿ ದುರಂತ- 14 ಜನ ಬಲಿ
ಕೋಲ್ಕತ್ತಾದ ಕೇಂದ್ರ ಭಾಗದಲ್ಲಿರುವ (Central Kolkata) ರಿತುರಾಜ್ ಹೋಟೆಲ್‌ನಲ್ಲಿ (Rituraj Hotel) ಮಂಗಳವಾರ ರಾತ್ರಿ 8:15ರ ಸುಮಾರಿಗೆ ಸಂಭವಿಸಿದ ಭೀಕರ ಬೆಂಕಿಯ ದುರಂತದಲ್ಲಿ (Fire Accident) ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಕೋಲ್ಕತ್ತಾ: ಕೋಲ್ಕತ್ತಾದ ಕೇಂದ್ರ ಭಾಗದಲ್ಲಿರುವ (Central Kolkata) ರಿತುರಾಜ್ ಹೋಟೆಲ್‌ನಲ್ಲಿ (Rituraj Hotel) ಮಂಗಳವಾರ ರಾತ್ರಿ 8:15ರ ಸುಮಾರಿಗೆ ಸಂಭವಿಸಿದ ಭೀಕರ ಬೆಂಕಿಯ ದುರಂತದಲ್ಲಿ (Fire Accident) ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಯನ್ನು ಈಗಾಗಲೇ ನಿಯಂತ್ರಣಕ್ಕೆ ತರಲಾಗಿದೆ ಎಂದು ಕೋಲ್ಕತ್ತಾ ಪೊಲೀಸ್ ಆಯುಕ್ತ (Kolkata Police Commissioner) ಮನೋಜ್ ಕುಮಾರ್ ವರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ. 14 ಶವಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಹಲವಾರು ಮಂದಿಯನ್ನು ರಕ್ಷಿಸಲಾಗಿದೆ. ತನಿಖೆಗಾಗಿ ವಿಶೇಷ ತಂಡವನ್ನು ಸಹ ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ಸಂತ್ರಸ್ತರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಈ ಹಿಂದೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಗಟ್ಟಲು ಬೆಂಕಿಯ ಸುರಕ್ಷತಾ ಕ್ರಮಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ಕರೆ ನೀಡಿದ್ದರು.
14 reported death in the incident of fire in the hotel at Machua's Phal mandi.
— Syeda Shabana (@JournoShabana) April 30, 2025
A devastating fire broke out on Tuesday night at the 6-story Rituraj Hotel in Burrabazar's Mechua Bazar area, specifically within the Jorasanko police station jurisdiction and Ward No. 41. pic.twitter.com/nxwK8DTaVr
ರಾಜ್ಯ ಸರ್ಕಾರವು ತಕ್ಷಣವೇ ಸಂತ್ರಸ್ತರನ್ನು ರಕ್ಷಿಸಿ, ಅವರ ಸುರಕ್ಷತೆಯನ್ನು ಖಾತ್ರಿಪಡಿಸಿ, ಅಗತ್ಯ ವೈದ್ಯಕೀಯ ಹಾಗೂ ಮಾನವೀಯ ಸಹಾಯವನ್ನು ಒದಗಿಸಲಿ. ಜೊತೆಗೆ, ಬೆಂಕಿಯ ಸುರಕ್ಷತಾ ಕ್ರಮಗಳ ಸಂಪೂರ್ಣ ಪರಿಶೀಲನೆ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ಮನವಿ ಮಾಡುತ್ತೇನೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ವಿಮಾನಕ್ಕೆ ಬೆಂಕಿ ತಗುಲಿ ಮುರಿದುಬಿದ್ದ ಲ್ಯಾಂಡಿಂಗ್ ಚಕ್ರ; ಮುಂದೇನಾಯ್ತು ಗೊತ್ತಾ? ಇಲ್ಲಿದೆ ವಿಡಿಯೊ
ಈ ಘಟನೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಸುಭಂಕರ್ ಸರ್ಕಾರ್ ಅವರು ಕೋಲ್ಕತ್ತಾ ಕಾರ್ಪೊರೇಷನ್‌ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದೊಂದು ದುರಂತ ಘಟನೆ. ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇನ್ನೂ ಹಲವರು ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ. ಯಾವುದೇ ಸುರಕ್ಷತಾ ಅಥವಾ ಭದ್ರತಾ ಕ್ರಮಗಳಿರಲಿಲ್ಲ. ಕಾರ್ಪೊರೇಷನ್ ಏನು ಮಾಡುತ್ತಿದೆ ಎಂದು ಗೊತ್ತಿಲ್ಲ" ಎಂದು ಸುಭಂಕರ್ ಸರ್ಕಾರ್ ತಿಳಿಸಿದ್ದಾರೆ.