ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಮಾನಕ್ಕೆ ಬೆಂಕಿ ತಗುಲಿ ಮುರಿದುಬಿದ್ದ ಲ್ಯಾಂಡಿಂಗ್ ಚಕ್ರ; ಮುಂದೇನಾಯ್ತು ಗೊತ್ತಾ? ಇಲ್ಲಿದೆ ವಿಡಿಯೊ

ಫ್ಲೋರಿಡಾದ ವಿಮಾನದಲ್ಲಿ ಹಾರ್ಡ್ ಲ್ಯಾಂಡಿಂಗ್ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಅದರ ಚಕ್ರ ಕೂಡ ತಪ್ಪಿಹೋಗಿತ್ತಂತೆ. ಇದರಿಂದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರಂತೆ. ಈ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ.

ವಿಮಾನಕ್ಕೆ ಏಕಾಏಕಿ ತಗುಲಿದ ಬೆಂಕಿ; ಬೆಚ್ಚಿಬೀಳಿಸುವ ವಿಡಿಯೊ ವೈರಲ್

Profile pavithra Apr 18, 2025 1:24 PM

ಫ್ಲೋರಿಡಾ: ಫ್ಲೋರಿಡಾದ ವಿಮಾನದಲ್ಲಿ ಹಾರ್ಡ್ ಲ್ಯಾಂಡಿಂಗ್ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಅದರ ಚಕ್ರವೊಂದು ಕಳೆದುಹೋಗಿದೆಯಂತೆ. ಆಗ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿ ಈ ಭಯಾನಕ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಹಾಗೂ ಈ ವಿಡಿಯೊವನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್‌ ಮಾಡಿ ತಮಗಾದ ಈ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video)ಆಗಿದೆ. ಏಪ್ರಿಲ್ 15 ರಂದು 228 ಪ್ರಯಾಣಿಕರೊಂದಿಗೆ ಪೋರ್ಟೊ ರಿಕೊದಲ್ಲಿ ಇಳಿಯಲು ಹೊರಟಿದ್ದ ವಿಮಾನವು ಕೂಡಲೇ ಮೇಲಕ್ಕೆ ಏರಿತು. ಲ್ಯಾಂಡಿಂಗ್ ಸಮಯದಲ್ಲಿ ಯಾಂತ್ರಿಕ ಸಮಸ್ಯೆ ಉಂಟಾದ್ದರಿಂದ ಇದರ ಒಂದು ಚಕ್ರವು ಕಳೆದುಹೋಗಿದೆ. ಇದರಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಪ್ರಯಾಣಿಕರು ಇದು ತಮ್ಮ ಜೀವನದ ಕೊನೆಕ್ಷಣ ಎಂದು ಭಾವಿಸಿರುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಅಲ್ಲದೇ ಬೆಂಕಿಯು ಹೆಚ್ಚಾಗುತ್ತಿದ್ದಂತೆ ಮಕ್ಕಳ ಜೋರಾಗಿ ಅಳಲು ಶುರುಮಾಡಿದ್ದು ವಿಡಿಯೊದಲ್ಲಿ ಸೆರೆಯಾಗಿದೆ. ಫ್ಲೈಟ್ ರಾಡಾರ್ ಸೈಟ್ ಫ್ಲೈಟ್ ಅವೇರ್ ಪ್ರಕಾರ, ವಿಮಾನವು ಪೋರ್ಟೊ ರಿಕನ್ ವಿಮಾನ ನಿಲ್ದಾಣವನ್ನು ನಾಲ್ಕು ಬಾರಿ ಸುತ್ತಿ ನಂತರ ಬೇರೆ ರನ್‌ವೇಯಲ್ಲಿ ಮತ್ತೊಮ್ಮೆ ಲ್ಯಾಂಡ್ ಆಗಲು ಪ್ರಯತ್ನ ಮಾಡಿತು. ಕೊನೆಗೆ ರಾತ್ರಿ 10.54 ಕ್ಕೆ ಲ್ಯಾಂಡ್‌ ಆಗಿದೆಯಂತೆ.

ಈ ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ವಿಮಾನದ ಮುಂಭಾಗದ ಲ್ಯಾಂಡಿಂಗ್ ಗೇರ್ ಚಕ್ರವನ್ನು ಕಳೆದುಕೊಂಡಿರುವುದು ಸೆರೆಯಾಗಿದೆ. ಬೋಯಿಂಗ್ 737-800 ವಿಮಾನದಲ್ಲಿದ್ದ 228ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ಇದ್ದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯ ಬಗ್ಗೆ ಎಫ್ಎಎ ತನಿಖೆ ನಡೆಸುತ್ತಿದೆ. ಇಂತಹ ಘಟನೆಗಳು ಪಕ್ಷಿಗಳ ದಾಳಿಯಿಂದ ನಡೆಯಲಿದ್ದು, 2023 ರಲ್ಲಿ ಇದೇ ರೀತಿಯ ಸುಮಾರು 20,000 ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ದೇವಾಲಯದ ಆವರಣದಲ್ಲಿ ಅನುಚಿತ ವರ್ತನೆ; ಒಪ್ಪಿಗೆ ಇಲ್ಲದೆ ಯುವತಿಯ ಫೋಟೊ ಕ್ಲಿಕ್ಕಿಸಿದ ಮಧ್ಯ ವಯಸ್ಕ

ವಿಮಾನ ಬೆಂಕಿಗೆ ಆಹುತಿಯಾದ ಘಟನೆ ಈ ಹಿಂದೆ ಕೂಡ ನಡೆದಿತ್ತು. ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್‌ಲೈನ್ಸ್‌ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಈ ಹಿಂದೆ ನಡೆದಿತ್ತು. 172 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತ ವಿಮಾನವು ಕೊಲೊರಾಡೊ ಸ್ಪ್ರಿಂಗ್ಸ್ನಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿತಂತೆ. ಅದೃಷ್ಟವಶಾತ್, ಡೆನ್ವರ್‌ನಲ್ಲಿ ಇಳಿದ ನಂತರ, ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಯಾವುದೇ ಗಾಯಗಳು ವರದಿಯಾಗಿಲ್ಲ. ವಿಮಾನದಿಂದ ಬೆಂಕಿಯ ಜ್ವಾಲೆಗಳನ್ನು ತೋರಿಸುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.