Aadhaar Card Latest Update: ಆಧಾರ್ ಕಾರ್ಡ್‌ಗೆ ಬರಲಿದೆ ಹೊಸ ವಿನ್ಯಾಸ! ಏನಿದು ಬದಲಾವಣೆ?
Aadhaar Card: ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್ ಕಾರ್ಡ್‌ನಲ್ಲಿ ಡಿಸೆಂಬರ್‌ನಿಂದ ಹೊಸ ಮಹತ್ವದ ವಿನ್ಯಾಸವನ್ನು ಮಾಡುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ಹೊಸ ಬದಲಾವಣೆಯಲ್ಲಿ ಆಧಾರ್ ಕಾರ್ಡ್‌ನಲ್ಲಿ ಕಾರ್ಡ್‌ದಾರರ ಫೋಟೊ ಮತ್ತು ಕ್ಯುಆರ್ ಕೋಡ್ ಮಾತ್ರ ಇರಲಿದೆ. ಇದರಿಂದ ಕಾರ್ಡ್‌ದಾರರ ವೈಯಕ್ತಿಕ ವಿವರಗಳಾದ ಹೆಸರು, ವಿಳಾಸ, 12 ಅಂಕಿಗಳ ಆಧಾರ್ ಸಂಖ್ಯೆ ಬಹಿರಂಗವಾಗಿ ಕಾಣಿಸುವುದಿಲ್ಲ.
ಸಾಂದರ್ಭಿಕ ಚಿತ್ರ -
ದೆಹಲಿ, ನ. 24: ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್ ಕಾರ್ಡ್‌ನಲ್ಲಿ (Aadhaar Card) ಡಿಸೆಂಬರ್‌ನಿಂದ ಹೊಸ ಮಹತ್ವದ ವಿನ್ಯಾಸವನ್ನು ಮಾಡುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಹೀಗಾಗಿ ಹೊಸ ಬದಲಾವಣೆಯಲ್ಲಿ ಏನೇನು ಇರಲಿದೆ ಎಂಬ ಕುತೂಹಲ ಉಂಟಾಗಿದೆ (Aadhaar Card Latest Update). ವರದಿಗಳ ಪ್ರಕಾರ ಹೊಸ ಬದಲಾವಣೆಯಲ್ಲಿ ಆಧಾರ್ ಕಾರ್ಡ್‌ನಲ್ಲಿ ಕಾರ್ಡ್‌ದಾರರ ಫೋಟೊ ಮತ್ತು ಕ್ಯುಆರ್ ಕೋಡ್ ಮಾತ್ರ ಇರಲಿದೆ. ಇದರಿಂದ ಕಾರ್ಡ್‌ದಾರರ ವೈಯಕ್ತಿಕ ವಿವರಗಳಾದ ಹೆಸರು, ವಿಳಾಸ, 12 ಅಂಕಿಗಳ ಆಧಾರ್ ಸಂಖ್ಯೆ ಬಹಿರಂಗವಾಗಿ ಕಾಣಿಸುವುದಿಲ್ಲ.
ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಆನ್‌ಲೈನ್ ಕಾನ್ಫರೆನ್ಸ್ ಒಂದರಲ್ಲಿ ಆಧಾರ್ ಕಾರ್ಡ್ ವಿನ್ಯಾಸ ಬದಲಾವಣೆ ಬಗ್ಗೆ ತಿಳಿಸಿದ್ದಾರೆ. ದತ್ತಾಂಶಗಳ ದುರ್ಬಳಕೆಯನ್ನು ತಡೆಗಟ್ಟಲು ಇದು ಸಹಕಾರಿಯಾಗಲಿದೆ. ಹೋಟೆಲ್‌ಗಳಲ್ಲಿ, ಇವೆಂಟ್ ಆರ್ಗನೈಸರ್‌ಗಳಲ್ಲಿ ಇತರ ಸಂಸ್ಥೆಗಳಲ್ಲಿ ಅಕ್ರಮವಾಗಿ ಆಫ್‌ಲೈನ್ ವೆರಿಫಿಕೇಶನ್ ತಡೆಗಟ್ಟಲೂ ಇದು ಸಹಕಾರಿ.
ಹೀಗಾಗಿ ಮುಂಬರುವ ದಿನಗಳಲ್ಲಿ ಹೊಸ ಆಧಾರ್ ಕಾರ್ಡ್‌ಗಳ ವಿನ್ಯಾಸದಲ್ಲಿ ಫೋಟೊ ಮತ್ತು ಕ್ಯುಆರ್ ಕೋಡ್ ಮಾತ್ರ ಇರಲಿದೆ. ಇತರ ವಿವರಗಳು ಮುದ್ರಣವಾಗುವುದಿಲ್ಲ. ಇದು ಆಧಾರ್ ಕಾಯಿದೆಗೆ ಪೂರಕವಾಗಿವೆ.
ಆಧಾರ್ ಕಾರ್ಡ್ ನೆರವಿನಿಂದ ಸುಲಭವಾಗಿ 10 ಸಾವಿರ ರೂ. ಸಾಲ ಪಡೆಯಬೇಕೆ? ಈ ಟಿಪ್ಸ್ ಫಾಲೋ ಮಾಡಿ
ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಹೇಳುವಂತೆ, ಈ ಹೊಸ ವಿನ್ಯಾಸದ ಹಿಂದೆ ಮಹತ್ತರವಾದ ಉದ್ದೇಶ ಕೂಡ ಇದೆ. ಆಧಾರ್ ಕಾರ್ಡ್‌ನಲ್ಲಿ ಯಾವುದೇ ವಿವರ ಬಹಿರಂಗವಾಗಿ ಕಾಣ ಕೂಡದು. ಇದರಲ್ಲಿ ಕ್ಯುಆರ್ ಕೋಡ್ ಮತ್ತು ಫೋಟೊ ಇದ್ದರೆ ಸಾಕು. ನಾವು ಎಲ್ಲ ವಿವರಗಳನ್ನು ಕಾಣುವಂತೆ ಮುದ್ರಿಸಿದರೆ ಜನರೇನೋ ಸ್ವೀಕರಿಸುತ್ತಾರೆ. ಆದರೆ ಯಾರಾದರೂ ದುರ್ಬಳಕೆ ಮಾಡಿದರೆ ಎಂಬ ಪ್ರಶ್ನೆ ಇರುತ್ತದೆ. ಇದು ಆಗದಂತೆ ತಡೆಯುವುದೇ ಇದರ ಉದ್ದೇಶ. ಆಧಾರ್ ಕಾಯಿದೆಯ ಪ್ರಕಾರವೂ ಆಧಾರ್ ಕಾರ್ಡ್ ಮಾಹಿತಿಗಳನ್ನು ಆಫ್‌ಲೈನ್ ವೆರಿಫಿಕೇಶನ್ ವೇಳೆ ಸಂಗ್ರಹಿಸುವುದು, ಬಳಸುವುದು ಅಪರಾಧವಾಗುತ್ತದೆ. ಕಾನೂನು ನಿರ್ಬಂಧದ ಹೊರತಾಗಿಯೂ ಕೆಲವರು ಆಧಾರ್ ಕಾರ್ಡ್ ಫೋಟೊ ಕಾಪಿಗಳನ್ನು ಸಂಗ್ರಹಿಸುತ್ತಾರೆ. ಇದರಿಂದ ಐಡೆಂಟಿಟಿ ಕಳವಾಗುವ ಮತ್ತು ವಂಚನೆಯಾಗುವ ಅಪಾಯ ಇರುತ್ತದೆ. ಹೊಸ ಆಧಾರ್ ಕಾರ್ಡ್‌ನಲ್ಲಿ ಎಲ್ಲ ವಿವರಗಳು ಕ್ಯುಆರ್ ಕೋಡ್‌ನಲ್ಲಿ ಇರುತ್ತದೆ. ಇಲ್ಲದಿದ್ದರೆ ಅದು ನಕಲಿ ಆಧಾರ್ ಕಾರ್ಡ್ ಎನಿಸಲಿದೆ.
ಬ್ರಿಟನ್‌ನಲ್ಲೂ ಜಾರಿಯಾಗುತ್ತಾ ಆಧಾರ್ ಮಾದರಿಯ ಐಡಿ ಕಾರ್ಡ್? ಪ್ರಧಾನಿ ಹೇಳಿದ್ದೇನು?
ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (UIDAI) ಹೊಸ ಆಧಾರ್ ಆಪ್ಲಿಕೇಷನ್ ಅನ್ನೂ ಬಿಡುಗಡೆಗೊಳಿಸಲಿದೆ. ಇದು ಈಗಿನ ಎಂಆಧಾರ್ ಅಪ್ಲಿಕೇಶನ್ ಅನ್ನು ಬದಲಿಸಲಿದೆ. ಇದು ಕ್ಯುಆರ್ ಕೋಡ್ ಆಧರಿತ ವೆರಿಫಿಕೇಶನ್‌ಗೆ ಸಹಾಯಕವಾಗಲಿದೆ. ಇದರಿಂದ ಬಳಕೆದಾರರು ಆಯ್ಕೆ ಮಾಡಿಕೊಂಡು ಆಧಾರ್ ವಿವರಗಳನ್ನು ಸಲ್ಲಿಸಬಹುದು. ವೈಯಕ್ತಿಕ ಮಾಹಿತಿಯ ಗೌಪ್ಯತೆ ಕಾಪಾಡಿಕೊಳ್ಳಬಹುದು. ಈ ಹೊಸ ಅಪ್ಲಿಕೇಶನ್ ಮೂಲಕ ಮೊಬೈಲ್ ನಂಬರ್ ಪರಿಷ್ಕರಣೆ, ವಿಳಾಸ ಬದಲಾವಣೆ ಸುಲಭವಾಗಲಿದೆ. ಹೋಟೆಲ್, ಏರ್‌ಪೋರ್ಟ್, ಇವೆಂಟ್‌ಗಳಲ್ಲಿ ಬಳಕೆ ಸುರಕ್ಷಿತ ಮತ್ತು ಸುಲಭವಾಗಲಿದೆ.