ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏರ್ ಇಂಡಿಯಾ ವಿಮಾನ ಹಾರಾಟದ ವೇಳೆ ಟರ್ಬುಲೆನ್ಸ್: ಏಕಾಏಕಿ 300 ಅಡಿ ಕುಸಿದು 12 ಪ್ರಯಾಣಿಕರಿಗೆ ಗಾಯ; ವಿಡಿಯೊ ವೈರಲ್‌

ಥೈಲ್ಯಾಂಡ್ ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಮಂಗಳವಾರ ತೀವ್ರ ವಾಯುಭಾರ ಕುಸಿತದಿಂದ ಪ್ರಕ್ಷುಬ್ಧತೆಗೆ ಗುರಿಯಾಗಿದೆ. ಇದರಿಂದ ವಿಮಾನವು ಸುಮಾರು 300 ಅಡಿಗಳಷ್ಟು ಕುಸಿದಿದೆ. ಇದರಿಂದ 12 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಮಾನ ಟರ್ಬುಲೆನ್ಸ್: ಏರ್ ಇಂಡಿಯಾ ಪ್ರಯಾಣಿಕರಿಗೆ ಗಾಯ

ಸಂಗ್ರಹ ಚಿತ್ರ -

ನವದೆಹಲಿ: ಏರ್ ಇಂಡಿಯಾ ವಿಮಾನವು (Air india flight) ಮಂಗಳವಾರ ತೀವ್ರ ಪ್ರಕ್ಷುಬ್ದತೆಗೆ (air turbulence) ಸಿಲುಕಿ ಸುಮಾರು 300 ಅಡಿಗಳಷ್ಟು ಕುಸಿದಿದೆ. ಇದರಿಂದ ವಿಮಾನದಲ್ಲಿದ್ದ 12 ಪ್ರಯಾಣಿಕರು ಗಾಯಗೊಂಡಿದ್ದಾರೆ. ಥೈಲ್ಯಾಂಡ್ (thailand)ನ ಫುಕೆಟ್ ನಿಲ್ದಾಣದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ 2379 ಇಳಿಯುವ ಮೊದಲು ವಾಯುಭಾರ ಕುಸಿತಕ್ಕೆ ಗುರಿಯಾಗಿದೆ. ಇದರಿಂದ ಸ್ವಲ್ಪ ಸಮಯ ನಿಯಂತ್ರಣ ಕಳೆದುಕೊಂಡು ಕುಸಿದಿದ್ದು ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದರು. ಗಾಯಾಳುಗಳಿಗೆ ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಥೈಲ್ಯಾಂಡ್ ನ ಫುಕೆಟ್ ನಿಂದ ದೆಹಲಿಗೆ ಸೋಮವಾರ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವು ತೀವ್ರ ಪ್ರಕ್ಷುಬ್ಧತೆಯಿಂದಾಗಿ ನಿಯಮದ ಎತ್ತರವನ್ನು ಕಳೆದುಕೊಂಡು ಸುಮಾರು 300 ಅಡಿಗಳಷ್ಟು ಕೆಳಗೆ ಬಿದ್ದಿದೆ. ಇದರಿಂದ 12 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿಮಾನದ ಪೈಲೆಟ್ ಗಳು ಎಚ್ಚರಿಕೆ ವಹಿಸಿದ್ದರಿಂದ ದೊಡ್ಡದೊಂದು ದುರಂತ ತಪ್ಪಿದಂತಾಗಿದೆ.

ಕಾಮಾಖ್ಯ ದೇವಿಗೆ ಮಹೇಶ್ ಮಹದೇವ್, ಪ್ರಿಯದರ್ಶಿನಿಯಿಂದ ಒಂಬತ್ತು ಭಾಷೆಗಳ ಗೀತ ನಮನ: ನೂತನ 'ಕಾಮಾಖ್ಯಪ್ರಿಯ' ರಾಗ ಸಮರ್ಪಣೆ

ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್ ಮಾಹಿತಿ ಪ್ರಕಾರ ಏರ್‌ಬಸ್ ಎ320 ನಿಂದ ನಿರ್ವಹಿಸಲ್ಪಡುವ ಏರ್ ಇಂಡಿಯಾ 2379 ವಿಮಾನವು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಸ್ವಲ್ಪ ಸಮಯದ ಮೊದಲು ಸ್ವಲ್ಪ ಸಮಯದವರೆಗೆ ಎತ್ತರ ಕಳೆದುಕೊಂಡು ಕುಸಿದಿತ್ತು. ಇದರಿಂದ ಗಾಯಗೊಂಡ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಇಳಿದ ಮೇಲೆ ವಿಮಾನ ನಿಲ್ದಾಣದಲ್ಲಿರುವ ವೈದ್ಯಕೀಯ ಸೌಲಭ್ಯಕ್ಕೆ ಕರೆದುಕೊಂಡು ಹೋಗಲಾಯಿತು.

ವಿಮಾನ ಟರ್ಬುಲೆನ್ಸ್ ದೃಶ್ಯ:



ಈ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ ವಕ್ತಾರರು, ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷತೆ ಏರ್ ಇಂಡಿಯಾದ ಅತ್ಯುನ್ನತ ಆದ್ಯತೆಯಾಗಿದೆ. ಅಗತ್ಯವಿರುವವರಿಗೆ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ. ಈ ಕುರಿತು ತನಿಖೆಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಮಾನವು ಟರ್ಬುಲೈನ್ಸ್ ಗೆ ಒಳಗಾದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಕ್ಷುಬ್ಧತೆಯ ಪರಿಣಾಮದಿಂದ ಕ್ಯಾಬಿನ್ ಸೀಲಿಂಗ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಕುರಿತು ಪ್ರಯಾಣಿಕರೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಪ್ರಯಾಣದ ಒಂದೂವರೆ ಗಂಟೆಗಳ ಅನಂತರ ಹೆಚ್ಚಿನ ಪ್ರಯಾಣಿಕರು ನಿದ್ರೆಯಲ್ಲಿದ್ದರು. ಹಠಾತ್ ಆಗಿ ವಿಮಾನದಲ್ಲಿ ಕಂಪನ ಉಂಟಾಯಿತು. ಕೆಳಗೆ ಬಿದ್ದು ಸುಮಾರು ಎರಡರಿಂದ ಮೂರು ನಿಮಿಷಗಳ ಕಾಲ ತೂಗಾಡಿತು. ಇದರಿಂದಾಗಿ ಹಲವಾರು ಮಂದಿಗೆ ಗಾಯಗಳಾಗಿವೆ. ಈ ಘಟನೆಯ ಬಗ್ಗೆ ಏರ್ ಇಂಡಿಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಡಾಬರ್‌ಗೆ ಶಾಕ್‌ ನೀಡಿದ ಫೆಸ್ಸಿ; 100% ಪ್ಯೂರ್‌ ಲೇಬಲ್‌ ಇರುವ ಆಹಾರ ಮಾರಾಟ ನಿಷೇಧ

ಒಂದು ವರ್ಷದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಜಮ್ಮು ಮತ್ತು ಕಾಶ್ಮೀರ ರಾಜಧಾನಿ ನಗರವನ್ನು ಸಮೀಪಿಸುತ್ತಿರುವಾಗ ತೀವ್ರ ಆಲಿಕಲ್ಲು ಮಳೆಯಿಂದ ಉಂಟಾದ ಪ್ರಕ್ಷುಬ್ಧತೆಗೆ ಸಿಲುಕಿತ್ತು. ಲ್ಯಾಂಡಿಂಗ್ ವೇಳೆ ವಿಮಾನದ ಮೂಗಿನ ಕೋನ್‌ಗೆ ಹಾನಿಯಾಗಿತ್ತು ಎನ್ನಲಾಗಿದೆ.