ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಾವಿಗೂ ಮುನ್ನ ಆ ನಾಯಕನನ್ನು ಸ್ಮರಿಸಿದ್ದ ಅಜಿತ್‌ ಪವಾರ್‌; ವೈರಲ್‌ ಆಗ್ತಿದೆ ಕೊನೆಯ ಟ್ವೀಟ್‌!

Ajit Pawar Last Tweet: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬೆಳಿಗ್ಗೆ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಚಾರ್ಟರ್‌ ವಿಮಾನ ಮಹಾರಾಷ್ಟ್ರದ ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿದೆ. ಘಟನೆಗೆ ಸ್ವಲ್ಪ ಮೊದಲು ಅಜಿತ್‌ ಮಾಡಿದ್ದ ಒಂದು ಟ್ವೀಟ್‌ ಇದೀಗ ವೈರಲ್‌ ಆಗುತ್ತಿದೆ.

ಸಾವಿಗೂ ಮುನ್ನ ಆ ನಾಯಕನನ್ನು ಸ್ಮರಿಸಿದ್ದ ಅಜಿತ್‌ ಪವಾರ್‌

ಸಂಗ್ರಹ ಚಿತ್ರ -

Vishakha Bhat
Vishakha Bhat Jan 28, 2026 12:30 PM

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar dies) ಬುಧವಾರ ಬೆಳಿಗ್ಗೆ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ (Ajit Pawar Last Tweet) ಚಾರ್ಟರ್‌ ವಿಮಾನ ಮಹಾರಾಷ್ಟ್ರದ ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿದೆ. ಘಟನೆಗೆ ಸ್ವಲ್ಪ ಮೊದಲು ಅಜಿತ್‌ ಮಾಡಿದ್ದ ಒಂದು ಟ್ವೀಟ್‌ ಇದೀಗ ವೈರಲ್‌ ಆಗುತ್ತಿದೆ. ಹೌದು ಸಾಯುವ ಕೆಲವೇ ಕ್ಷಣಗಳ ಮೊದಲು ಅಜಿತ್‌ ಪವಾರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸುವ ಟ್ವೀಟ್ ಅನ್ನು ಪವಾರ್ ಅವರ X ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.

ಈ ಜನ್ಮ ದಿನಾಚರಣೆಯಂದು, ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಸ್ವರಾಜ್ಯದ ಘೋಷಣೆಕಾರ ಮತ್ತು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದ 'ಪಂಜಾಬ್ ಕೇಸರಿ' ಲಾಲಾ ಲಜಪತ್ ರಾಯ್ ಜಿ ಅವರಿಗೆ ವಿನಮ್ರ ನಮನಗಳು! ಅವರ ದೇಶಭಕ್ತಿ ನಮಗೆ ಸದಾ ಸ್ಫೂರ್ತಿ ನೀಡುತ್ತದೆ" ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ. ಟ್ವೀಟ್‌ ಮಾಡಿದ ಕೆಲ ನಿಮಿಷಗಳಲ್ಲಿಯೇ ಅಜಿತ್‌ ಪವಾರ್‌ ನಿಧನರಾಗಿದ್ದಾರೆ.

ಅಜಿತ್‌ ಪವಾರ್‌ ಕೊನೆಯ ಟ್ವೀಟ್‌

Ajit Pawar's last social media post

ಇನ್ನು ಟ್ವೀಟ್‌ ಓದಿದ ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, 48 ನಿಮಿಷಗಳ ಹಿಂದೆ, ನೀವು ಈ ಪೋಸ್ಟ್ ಅನ್ನು ಟ್ವೀಟ್ ಮಾಡಿದ್ದೀರಿ, ಮತ್ತು ಈಗ ನೀವು ಇಲ್ಲ. ಜೀವನವು ತುಂಬಾ ಅನಿರೀಕ್ಷಿತವಾಗಿದೆ. ಓ ಶಾಂತಿ ಎಂದು ಬರೆದಿದ್ದಾರೆ. ಮಹಾರಾಷ್ಟ್ರಕ್ಕೆ ದೊಡ್ಡ ನಷ್ಟ" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ. ನಾಲ್ಕನೆಯವರು "RIP" ಎಂದು ವ್ಯಕ್ತಪಡಿಸಿದ್ದಾರೆ.

ಮುಂಬರುವ ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಾರ್ವಜನಿಕ ರ್‍ಯಾಲಿಗಳಲ್ಲಿ ಭಾಗವಹಿಸಲು ಅಜಿತ್ ಪವಾರ್ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಆಗ ಈ ಅಪಘಾತ ಸಂಭವಿಸಿದೆ. ಮುಂಬೈನಿಂದ ಬಾರಾಮತಿಗೆ ಹಾರುತ್ತಿದ್ದ ಖಾಸಗಿ ಚಾರ್ಟರ್ ವಿಮಾನವು ಇಳಿಯುವ ಕೆಲವೇ ಕ್ಷಣಗಳಿಗೆ ಮೊದಲು ಬಂಡೆಗೆ ಡಿಕ್ಕಿ ಹೊಡೆದಿದೆ. ಪೈಲಟ್ ನಿಯಂತ್ರಣ ಕಳೆದುಕೊಂಡಿದ್ದರಿಂದ ವಿಮಾನವು ರನ್‌ವೇಯಿಂದ ಜಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಅಧಿಕಾರಿಗಳು ತಾಂತ್ರಿಕ ದಾಖಲೆಗಳು, ಸಂವಹನ ದಾಖಲೆಗಳು ಮತ್ತು ಪೈಲಟ್ ಇನ್‌ಪುಟ್‌ಗಳನ್ನು ಪರಿಶೀಲಿಸುತ್ತಿದ್ದಾರೆ.