ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೋಲಿನ ಆಘಾತದ ಮಧ್ಯೆ ನಾಯಕಿ ಜೆಮಿಮಾಗೆ ದಂಡದ ಬಿಸಿ

Jemimah Rodrigues: ಕೊನೆಯ ಓವರ್‌ನಲ್ಲಿ ಡೆಲ್ಲಿಗೆ ಗೆಲುವಿಗೆ 9 ರನ್‌ ಅಗತ್ಯವಿತ್ತು. ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಿದ ಅನುಭವಿ ಸೋಫಿ, ಕೇವಲ 5 ರನ್‌ ನೀಡಿ, ಸ್ನೇಹಾ ಮತ್ತು ನಿಕಿ ಅವರ ವಿಕೆಟ್‌ ಪಡೆದು ಗೆಲುವಿನ ರೂವಾರಿಯಾದರು. ಗುಜರಾತ್ ಜೈಂಟ್ಸ್ ತಂಡದ ಪರ ವಿಕೆಟ್ ಕೀಪರ್– ಬ್ಯಾಟರ್ ಬೆತ್‌ ಮೂನಿ (58) ಅವರ ಅರ್ಧಶತಕ ಬಾರಿಸಿ ಮಿಂಚಿದರು.

ಸೋಲಿನ ಆಘಾತದ ಮಧ್ಯೆ ನಾಯಕಿ ಜೆಮಿಮಾಗೆ ದಂಡದ ಬಿಸಿ

Jemimah Rodrigues -

Abhilash BC
Abhilash BC Jan 28, 2026 1:04 PM

ವಡೋದರಾ, ಜ.28: ಮಂಗಳವಾರ (ಜನವರಿ 27) ವಡೋದರಾ(Vadodara)ದ ಬಿಸಿಎ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ (Slow Over Rate) ಕಾಯ್ದುಕೊಂಡಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರೊಡ್ರಿಗಸ್(Jemimah Rodrigues) ಅವರಿಗೆ 12 ಲಕ್ಷ ದಂಡ ವಿಧಿಸಲಾಗಿದೆ. ಇದು ಜೆಮಿಮಾ ಅವರ ಮೊದಲ ಅಪರಾಧವಾಗಿದೆ.

ಕಳೆದ ವಾರ ಎರಡು ಸತತ ಗೆಲುವುಗಳ ನಂತರ, ರಾಡ್ರಿಗಸ್ ತಂಡವು ಜೈಂಟ್ಸ್ ವಿರುದ್ಧ ಮೂರು ರನ್‌ಗಳ ಸೋಲನ್ನು ಅನುಭವಿಸುವ ಮೂಲಕ ಪ್ಲೇಆಫ್‌ ರೇಸ್‌ ಕಠಿಣವಾಯಿತು. ಗೆಲುವಿನೊಂದಿಗೆ ಜೈಂಟ್ಸ್‌ ತಂಡವು (8 ಅಂಕ) ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದು, ಪ್ಲೇ ಆಫ್‌ಗೆ ಹತ್ತಿರವಾಯಿತು.

ಬಿಸಿಸಿಐ ಹೊಸ ನಿಯಮದ ಪ್ರಕಾರ ತಂಡವೊಂದು 3 ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್‌ ಮಾಡಿದರೆ ನಾಯಕಿಗೆ ದಂಡ ವಿಧಿಸಿ, ಡಿಮೆರಿಟ್‌ ಅಂಕ ನೀಡಲಾಗುತ್ತದೆ. ಡಿಮೆರಿಟ್‌ ಅಂಕದ ಅವಧಿ 3 ವರ್ಷ ಇರಲಿದ್ದು, ಈ ಅವಧಿಯಲ್ಲಿ 4 ಡಿಮೆರಿಟ್‌ ಅಂಕ ಪಡೆದರೆ ನಾಯಕಿಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ.

175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು ಕನ್ನಡತಿ ರಾಜೇಶ್ವರಿ ಗಾಯ್ವಾಡ್‌ (20ಕ್ಕೆ 3) ಮತ್ತು ಸೋಫಿ ಡಿವೈನ್‌ (37ಕ್ಕೆ 4) ಅವರ ದಾಳಿಗೆ ಸಿಲುಕಿ 100 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ಕರ್ನಾಟಕದ ನಿಕಿ ಪ್ರಸಾದ್‌ (47) ಮತ್ತು ಸ್ನೇಹಾ ರಾಣಾ (29) ಜೋಡಿ ಏಳನೇ ವಿಕೆಟ್‌ಗೆ 70 ರನ್‌ ಸೇರಿಸಿ ತಂಡಕ್ಕೆ ಮಹತ್ವದ ಚೇತರಿಕೆ ನೀಡಿದರು.

ಸಂಜುಗೆ ಗೇಟ್‌ಪಾಸ್‌; ಇಶಾನ್‌ ಕಿಶನ್‌ಗೆ ಆರಂಭಿಕ ಸ್ಥಾನ?

ಕೊನೆಯ ಓವರ್‌ನಲ್ಲಿ ಡೆಲ್ಲಿಗೆ ಗೆಲುವಿಗೆ 9 ರನ್‌ ಅಗತ್ಯವಿತ್ತು. ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಿದ ಅನುಭವಿ ಸೋಫಿ, ಕೇವಲ 5 ರನ್‌ ನೀಡಿ, ಸ್ನೇಹಾ ಮತ್ತು ನಿಕಿ ಅವರ ವಿಕೆಟ್‌ ಪಡೆದು ಗೆಲುವಿನ ರೂವಾರಿಯಾದರು. ಗುಜರಾತ್ ಜೈಂಟ್ಸ್ ತಂಡದ ಪರ ವಿಕೆಟ್ ಕೀಪರ್– ಬ್ಯಾಟರ್ ಬೆತ್‌ ಮೂನಿ (58) ಅವರ ಅರ್ಧಶತಕ ಬಾರಿಸಿ ಮಿಂಚಿದರು. ಅನುಷ್ಕಾ ಶರ್ಮಾ 39 ರನ್‌ ಗಳಿಸಿದರು. ಡೆಲ್ಲಿ ಪರ ಎಡಗೈ ಸ್ಪಿನ್ನರ್ ಎನ್‌.ಶ್ರೀಚರಣಿ (31ಕ್ಕೆ 4) ವಿಕೆಟ್‌ ಕಿತ್ತರು. ಆದರೆ ಪಂದ್ಯ ಸೋತ ಕಾರಣ ಇವರ ಬೌಲಿಂಗ್‌ ಪ್ರದರ್ಶನ ವ್ಯರ್ಥವಾಯಿತು.