ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಸ್ ಅಪಘಾತ: 10ಕ್ಕೂ ಅಧಿಕ ಅಮರನಾಥ ಯಾತ್ರಿಕರಿಗೆ ಗಾಯ

Amarnath Yatra: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹಾ ದೇಗುಲಕ್ಕೆ ಪವಿತ್ರ ಪ್ರಯಾಣವನ್ನು ಕೈಗೊಳ್ಳಲು 7,049 ಯಾತ್ರಿಕರ ಹೊಸ ತಂಡ ಭಾನುವಾರ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಹೊರಟಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

ಬಸ್ ಅಪಘಾತ: 10ಕ್ಕೂ ಅಧಿಕ ಅಮರನಾಥ ಯಾತ್ರಿಕರಿಗೆ ಗಾಯ

Profile Abhilash BC Jul 13, 2025 2:58 PM

ಶ್ರೀನಗರ: ಅಮರನಾಥ ಯಾತ್ರೆಗಾಗಿ(Amarnath Yatra) ಕುಲ್ಗಾಮ್(Kulgam) ಬಳಿಯ ಬೇಸ್ ಕ್ಯಾಂಪ್‌ಗೆ ತೆರಳುವ ವೇಳೆ ಮೂರು ಬಸ್‌ಗಳ ನಡುವೆ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ. ಘಟನೆ ನಡೆದಾಗ ವಾಹನಗಳು ಜಮ್ಮು-ಶ್ರೀನಗರ(Jammu And Kashmir) ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಲ್ಟಾಲ್‌ಗೆ ತೆರಳುತ್ತಿದ್ದವು.

ಗಾಯಗೊಂಡ ಸುಮಾರು ಒಂಬತ್ತು ಯಾತ್ರಿಕರಿಗೆ ಆರಂಭದಲ್ಲಿ ಹತ್ತಿರದ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ಸ್ಥಳಾಂತರಿಸಲಾಯಿತು. ಎಲ್ಲಾ ಗಾಯಾಳುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.



"ಗಾಯಾಳುಗಳನ್ನು ಮೊದಲು ಅವರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ನಂತರ ಅನಂತನಾಗ್‌ನ ಆಸ್ಪತ್ರೆಗೆ ದಾಖಲಾಯಿಸಲಾಯಿತು. ಎರಡು ಬಸ್ಸುಗಳ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳೆಲ್ಲ ಸುರಕ್ಷಿತವಾಗಿದ್ದಾರೆ" ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ಬಸ್‌ನಲ್ಲಿದ್ದ ಉಳಿದ ಯಾತ್ರಿಕರಿಗೆ ಮೀಸಲು ಬಸ್‌ ವ್ಯವಸ್ಥೆ ಮಾಡಿದ್ದು, ಅವರು ಯಾತ್ರೆ ಮುಂದುವರೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹಾ ದೇಗುಲಕ್ಕೆ ಪವಿತ್ರ ಪ್ರಯಾಣವನ್ನು ಕೈಗೊಳ್ಳಲು 7,049 ಯಾತ್ರಿಕರ ಹೊಸ ತಂಡ ಭಾನುವಾರ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಹೊರಟಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.



ಈ ಗುಂಪಿನಲ್ಲಿ 1,423 ಮಹಿಳೆಯರು, 31 ಮಕ್ಕಳು ಮತ್ತು 136 ಸಾಧುಗಳು ಮತ್ತು ಸಾಧ್ವಿಗಳು ಸೇರಿದ್ದಾರೆ. ಯಾತ್ರಿಕರು ಬಿಗಿ ಭದ್ರತಾ ವ್ಯವಸ್ಥೆಗಳ ಅಡಿಯಲ್ಲಿ ಬೆಳಗಿನ ಜಾವ ಹೊರಟರು, ಪಹಲ್ಗಾಮ್ (ಅನಂತ್‌ನಾಗ್ ಜಿಲ್ಲೆ) ನಲ್ಲಿರುವ ನುನ್ವಾನ್ ಮತ್ತು ಗಂಡೇರ್‌ಬಾಲ್ ಜಿಲ್ಲೆಯ ಬಾಲ್ಟಾಲ್ ಎಂಬ ಅವಳಿ ಮೂಲ ಶಿಬಿರಗಳ ಕಡೆಗೆ ಪ್ರತ್ಯೇಕ ಬೆಂಗಾವಲುಗಳಲ್ಲಿ ತೆರಳಿದರು.

ಒಟ್ಟು ಯಾತ್ರಿಕರಲ್ಲಿ 4,158 ಯಾತ್ರಿಕರು 148 ವಾಹನಗಳ ಬೆಂಗಾವಲು ಪಡೆಯಲ್ಲಿ ಪಹಲ್ಗಾಮ್ ಮಾರ್ಗವನ್ನು ಆರಿಸಿಕೊಂಡರೆ, 2,891 ಯಾತ್ರಿಕರು 138 ವಾಹನಗಳಲ್ಲಿ ಬಾಲ್ಟಾಲ್ ಮಾರ್ಗವನ್ನು ಆರಿಸಿಕೊಂಡರು.

38 ದಿನಗಳ ವಾರ್ಷಿಕ ತೀರ್ಥಯಾತ್ರೆ ಜುಲೈ 3 ರಂದು ಪ್ರಾರಂಭವಾಯಿತು. ಮತ್ತು ರಕ್ಷಾ ಬಂಧನ ಹಬ್ಬದೊಂದಿಗೆ ಆಗಸ್ಟ್ 9 ರಂದು ಮುಕ್ತಾಯಗೊಳ್ಳಲಿದೆ. ಇಲ್ಲಿಯವರೆಗೆ, ಸುಮಾರು 1.83 ಲಕ್ಷ ಭಕ್ತರು ನೈಸರ್ಗಿಕವಾಗಿ ರೂಪುಗೊಂಡ ಹಿಮಾವೃತ ಶಿವಲಿಂಗವನ್ನು ಹೊಂದಿರುವ ಗುಹೆಯಲ್ಲಿ ಪೂಜೆ ಸಲ್ಲಿಸಿದ್ದಾರೆ.