ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Armanirbhar: ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ, ಅತ್ಯಂತ ಬಲಿಷ್ಠ 'ವೆಲ್ಡೆಡ್ ಪೈಪ್' ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕಂಪನಿಯ ಈ ಮಹತ್ತರ ಸಾಧನೆಯನ್ನು ಪರಿಗಣಿಸಿ, ಜಾಗತಿಕ ಮಟ್ಟದ ಪ್ರಮುಖ ಸಂಸ್ಥೆ 'ಅಮೆರಿಕನ್ ಬ್ಯೂರೋ ಆಫ್ ಶಿಪ್ಪಿಂಗ್' (ಎಬಿಎಸ್‌) ಇದಕ್ಕೆ ಅಂತಾರಾಷ್ಟ್ರೀಯ ಪ್ರಮಾಣ ಪತ್ರವನ್ನೂ ನೀಡಿದೆ. ಇದು ಜಾಗತಿಕ ಮಟ್ಟದಲ್ಲಿ ಈ ಪೈಪ್‌ಗಳ ಗುಣಮಟ್ಟ ಹಾಗೂ ಬಲವನ್ನು ದೃಢಪಡಿಸಿದೆ.

'ವೆಲ್ಡೆಡ್ ಪೈಪ್' ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

-

Profile
Ashok Nayak May 27, 2026 12:07 PM

ಗುಜರಾತ್‌/ಬೆಂಗಳೂರು: ಸಮುದ್ರ ಹಾಗೂ ಕಡಲಾಚೆಯ ಬೃಹತ್ ಇಂಜಿನಿಯರಿಂಗ್ ಯೋಜನೆಗಳಲ್ಲಿ ಬಳಸಲಾಗುವ ಅತ್ಯಂತ ಹೆಚ್ಚಿನ ಸಾಮರ್ಥ್ಯದ ವೆಲ್ಡೆಡ್ ಪೈಪ್‌ಗಳನ್ನು (EQ70 ಗ್ರೇಡ್) ಉತ್ಪಾದಿಸಿದ ವಿಶ್ವದ ಮೊದಲ ಸ್ಟೀಲ್ ಕಂಪನಿ ಎಂಬ ಹೆಗ್ಗಳಿಕೆಗೆ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ(ArcelorMittal Nippon Steel India)' ಪಾತ್ರವಾಗಿದೆ. ಈ ಮೂಲಕ ಭಾರತದ ಉಕ್ಕಿನ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದು ನಿರ್ಮಾಣ ವಾಗಿದೆ.

ಕಂಪನಿಯ ಈ ಮಹತ್ತರ ಸಾಧನೆಯನ್ನು ಪರಿಗಣಿಸಿ, ಜಾಗತಿಕ ಮಟ್ಟದ ಪ್ರಮುಖ ಸಂಸ್ಥೆ 'ಅಮೆರಿಕನ್ ಬ್ಯೂರೋ ಆಫ್ ಶಿಪ್ಪಿಂಗ್' (ಎಬಿಎಸ್‌) ಇದಕ್ಕೆ ಅಂತಾರಾಷ್ಟ್ರೀಯ ಪ್ರಮಾಣ ಪತ್ರವನ್ನೂ ನೀಡಿದೆ. ಇದು ಜಾಗತಿಕ ಮಟ್ಟದಲ್ಲಿ ಈ ಪೈಪ್‌ಗಳ ಗುಣಮಟ್ಟ ಹಾಗೂ ಬಲವನ್ನು ದೃಢಪಡಿಸಿದೆ.

ಇದನ್ನೂ ಓದಿ: Rourkela Steel Plant: 9,000 ಕೋಟಿ ವೆಚ್ಚದಲ್ಲಿ ರೂರ್ಕೆಲಾ ಉಕ್ಕು ಸ್ಥಾವರದ ಆಧುನೀಕರಣ, ವಿಸ್ತರಣೆಗೆ ಎಚ್‌ಡಿಕೆ ಚಾಲನೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಕೊಡುಗೆ

ಈವರೆಗೆ ತೈಲ ಮತ್ತು ಅನಿಲ ಉದ್ಯಮಗಳು, ಆಫ್‌ಶೋರ್‌ ಗಾಳಿ ಯಂತ್ರಗಳು ಹಾಗೂ ಆಳ ಸಮುದ್ರದ ಪೈಪ್‌ಲೈನ್‌ಗಳ ನಿರ್ಮಾಣಕ್ಕೆ ಬೇಕಾಗುವ ಇಂತಹ ಬಲಿಷ್ಠ ಪೈಪ್‌ಗಳನ್ನು ನಾವು ಯುರೋಪ್ ದೇಶಗಳಿಂದ ಆಮದು ಮಾಡಿಕೊಳ್ಳಬೇಕಿತ್ತು. ಆದರೆ ಇದೀಗ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್' ಈ ಪೈಪ್‌ಗಳನ್ನು ಸಂಪೂರ್ಣವಾಗಿ ದೇಶೀಯ ವಾಗಿಯೇ ಉತ್ಪಾದಿಸುವ ಮೂಲಕ 'ಆತ್ಮನಿರ್ಭರ ಭಾರತ(Armanirbhar Bharath)' ಮತ್ತು 'ವಿಕಸಿತ್ ಭಾರತ್(Viksit Bharath)' ಯೋಜನೆಗಳಿಗೆ ಬಹುದೊಡ್ಡ ಕೊಡುಗೆ ನೀಡಿದೆ.

ಇದರಿಂದಾಗಿ ಭಾರತದ ಆಫ್‌ಶೋರ್ ಮತ್ತು ಇಂಜಿನಿಯರಿಂಗ್ ವಲಯದ ಕಂಪನಿಗಳಿಗೆ ಆಮದು ವೆಚ್ಚ ಹಾಗೂ ಸಮಯ ಉಳಿಯಲಿದೆ. ಜೊತೆಗೆ ದೇಶೀಯ ಮತ್ತು ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಉತ್ತಮ ಪೈಪೋಟಿ ನೀಡಲು ಸಹಕಾರಿಯಾಗಲಿದೆ. ಈಗಾಗಲೇ ಭಾರತದ ಪ್ರಮುಖ ತೈಲ ಮತ್ತು ಅನಿಲ ಉತ್ಪಾದನಾ ಕಂಪನಿಯೊಂದಕ್ಕೆ ಈ ಪೈಪ್‌ ಗಳನ್ನು ಭಾರಿ ಪ್ರಮಾಣದಲ್ಲಿ ಪೂರೈಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಏನಿದರ ವಿಶೇಷತೆ?

ಗುಜರಾತ್‌ನ ಹಜೀರಾದಲ್ಲಿರುವ ಕಂಪನಿಯ ಘಟಕದಲ್ಲಿ 'ಸಬ್‌ಮರ್ಜ್ಡ್ ಆರ್ಕ್ ವೆಲ್ಡಿಂಗ್' (ಎಸ್‌ಎಡಬ್ಲ್ಯೂ) ತಂತ್ರಜ್ಞಾನವನ್ನು ಬಳಸಿ ಈ ಪೈಪ್‌ಗಳನ್ನು ತಯಾರಿಸಲಾಗಿದೆ. ಅಮೆರಿಕನ್ ಪೆಟ್ರೋಲಿಯಂ ಇನ್‌ಸ್ಟಿಟ್ಯೂಟ್‌ನ (ಎಪಿಐ) 5L X100Q ಗ್ರೇಡ್‌ಗೆ ಸಮನಾದ ಈ EQ70 ಗ್ರೇಡ್ ಪೈಪ್‌ಗಳು ಅತ್ಯಂತ ಹೆಚ್ಚಿನ ಬಲವನ್ನು (690 MPa) ಹೊಂದಿವೆ.

ಅತ್ಯಂತ ಕಠಿಣವಾದ ಹಾಗೂ ಸದಾ ಸವೆತಕ್ಕೆ ಒಳಗಾಗುವ ಸಮುದ್ರದಲ್ಲಿ ಈ ಪೈಪ್‌ಗಳು ಭದ್ರವಾಗಿ ನಿಲ್ಲಬಲ್ಲವು. ಇವುಗಳ ವಿಶೇಷವೆಂದರೆ, ಇವು ಅತ್ಯಂತ ಬಲಿಷ್ಠವಾಗಿದ್ದರೂ ತೆಳುವಾಗಿ ಮತ್ತು ಹಗುರವಾಗಿರುತ್ತವೆ. ಹೀಗಾಗಿ ಸಮುದ್ರದ ಅಲೆಗಳು ಹಾಗೂ ಒತ್ತಡವನ್ನು ಸುಲಭವಾಗಿ ತಡೆದುಕೊಳ್ಳುತ್ತವೆ. ಇಂತಹ ಅಲ್ಟ್ರಾ-ಹೈ ಸ್ಟ್ರೆಂತ್ ಪೈಪ್‌ಗಳನ್ನು ಉತ್ಪಾದಿಸು ವುದು ತಾಂತ್ರಿಕವಾಗಿ ಬಹಳ ಸವಾಲಿನ ಕೆಲಸವಾಗಿತ್ತು. ಆದರೆ, ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್‌ನ ಬಲವಾದ ಆರ್ & ಡಿ ಸಾಮರ್ಥ್ಯದಿಂದ ಭಾರತಕ್ಕೂ ಇದು ಸಾಧ್ಯವಾಗಿದೆ.

ಎಬಿಎಸ್ ಪ್ರಮಾಣಪತ್ರವು ಸುರಕ್ಷತೆ ಮತ್ತು ಕಾರ್ಯಕ್ಷಮತೆಯಲ್ಲಿ ಈ ಪೈಪ್‌ಗಳಿಗೆ ಜಾಗತಿಕ ಮಟ್ಟದ ಮಾನ್ಯತೆ ತಂದುಕೊಟ್ಟಿದೆ. ಈ ಪ್ರಮಾಣಪತ್ರ ಇರುವುದರಿಂದ ಜಗತ್ತಿನ ಯಾವುದೇ ದೇಶದ ಸಾಗರ ಯೋಜನೆಗಳಿಗೂ ಈ ಪೈಪ್‌ಗಳನ್ನು ಪೂರೈಸುವ ಅರ್ಹತೆ ಯನ್ನು ಕಂಪನಿ ಪಡೆದುಕೊಂಡಿದೆ.

ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ(ArcelorMittal Nippon Steel India) ಜಗತ್ತಿನ ಮುಂಚೂಣಿ ಸ್ಟೀಲ್ ಉತ್ಪಾ ದನಾ ಸಂಸ್ಥೆಗಳಾದ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ನಡುವಿನ ಜಂಟಿ ಉದ್ಯಮವಾಗಿದೆ. ಇದು ವರ್ಷಕ್ಕೆ 90 ಲಕ್ಷ ಟನ್ ಕಚ್ಚಾ ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಮೌಲ್ಯವರ್ಧಿತ ಉಕ್ಕು ಸೇರಿದಂತೆ ಹಲವು ವಿಧದ ಫ್ಲಾಟ್ ಸ್ಟೀಲ್ ಉತ್ಪನ್ನಗಳನ್ನು ತಯಾರಿಸುತ್ತದೆ.

ಆಂಧ್ರಪ್ರದೇಶದಲ್ಲಿ 82 ಲಕ್ಷ ಟನ್ ಸಾಮರ್ಥ್ಯದ ಹೊಸ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಅನ್ನು ಸಹ ಇದು ಸ್ಥಾಪಿಸುತ್ತಿದೆ. ಉಕ್ಕು ಸಚಿವಾಲಯ ದಿಂದ 'ಗ್ರೀನ್ ಸ್ಟೀಲ್ ಪ್ರಮಾಣಪತ್ರ' ಪಡೆದ ಭಾರತದ ಏಕೈಕ ಇಂಟಿಗ್ರೇಟೆಡ್ ಸ್ಟೀಲ್ ಕಂಪನಿ ಇದಾಗಿದೆ.