Anupam Kher: ʻಕಾಶ್ಮೀರ್ ಫೈಲ್ʼ ಬಂದಾಗ ಪ್ರೊಪಗಾಂಡ ಅಂದ್ರು... ಹಾಗಿದ್ರೆ ಈಗ ಏನಾಗ್ತಿರೋದು? ನಟ ಅನುಪಮ್ ಖೇರ್ ಕಿಡಿ
Anupam Kher: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಖಂಡಿಸಿ, ಕಾಶ್ಮೀರಿ ಪಂಡಿತರಾದ ನಟ ಅನುಪಮ್ ಖೇರ್ ಮಂಗಳವಾರ ರಾತ್ರಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ದಾಳಿಕೋರರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.

ಅನುಪಮ್ ಖೇರ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(Jammu-Kashmir)ದ ಪಹಲ್ಗಾಮ್(Pahalgam Terror Attack)ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಭಯೋತ್ಪಾದಕ ದಾಳಿ(Terror Attack)ಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಖಂಡಿಸಿ, ಕಾಶ್ಮೀರಿ ಪಂಡಿತರಾದ ನಟ ಅನುಪಮ್ ಖೇರ್ (Actor Anupam Kher) ಮಂಗಳವಾರ ರಾತ್ರಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ದಾಳಿಕೋರರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ(Prime Minister Narendra Modi) ಮತ್ತು ಗೃಹ ಸಚಿವ ಅಮಿತ್ ಶಾ(Home Minister Amit Shah) ಅವರಿಗೆ ಮನವಿ ಮಾಡಿದ್ದಾರೆ.
“ಪಹಲ್ಗಾಮ್‌ನಲ್ಲಿ ಇಂದು ನಡೆದಿದ್ದು ಹಿಂದೂಗಳ ಸಾಮೂಹಿಕ ಕೊಲೆ. 27 ಹಿಂದೂಗಳನ್ನು ಒಬ್ಬೊಬ್ಬರಾಗಿ ಕೊಂದಿದ್ದಾರೆ. ಇದು ದುಃಖವನ್ನುಂಟು ಮಾಡಿದೆ, ಆದರೆ ಗಡಿಯಿಲ್ಲದ ಕೋಪವನ್ನೂ ಹುಟ್ಟಿಸಿದೆ. ಕಾಶ್ಮೀರಿ ಹಿಂದೂಗಳ ಮೇಲಾದ ದೌರ್ಜನ್ಯವನ್ನು ನಾನು ಜೀವನಪೂರ್ತಿ ನೋಡಿದ್ದೇನೆ. ‘ದಿ ಕಾಶ್ಮೀರ್ ಫೈಲ್ಸ್’ ಅದರ ಒಂದು ಚಿಕ್ಕ ಝಲಕ್ ಮಾತ್ರವಾಗಿತ್ತು. ಆದರೆ, ಭಾರತದ ವಿವಿಧ ಭಾಗಗಳಿಂದ ರಜೆಗಾಗಿ ಕಾಶ್ಮೀರಕ್ಕೆ ಬಂದವರನ್ನು ಗುರುತಿಸಿ, ಅವರ ಧರ್ಮವನ್ನು ವಿಚಾರಿಸಿ ಕೊಲೆ ಮಾಡಿರುವುದನ್ನ ಹೇಳಲು ಪದಗಳೇ ಇಲ್ಲ. ಕೆಲವೊಮ್ಮೆ ಪದಗಳು ಶಕ್ತಿಹೀನವಾಗುತ್ತವೆ” ಎಂದು ಖೇರ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ದಾಳಿಯ ನಂತರ ವೈರಲ್ ಆದ ಒಂದು ಚಿತ್ರವನ್ನು ಉಲ್ಲೇಖಿಸಿದ ಅವರು, “ತನ್ನ ಪತಿಯ ಶವದ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಚಿತ್ರವನ್ನು ನಾನು ಮರೆಯಲಾರೆ. ಪಲ್ಲವಿ ಎಂಬಾಕೆಯ ಸಂದರ್ಶನವನ್ನು ಕೇಳಿದೆ, ತನ್ನನ್ನೂ ಕೊಲ್ಲುವಂತೆ ಭಯೋತ್ಪಾದಕರಿಗೆ ಕೇಳಿಕೊಂಡರೂ, ಅವರು ಸಂದೇಶವನ್ನು ಮುಂದೆ ತಿಳಿಸುವಂತೆ ಹೇಳಿದ್ದಾರೆ. ಇದು ಕ್ರೂರತೆಯ ಎಲ್ಲೆ ಮೀರಿದೆ,” ಎಂದರು. “ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಸಂಪೂರ್ಣ ಸರ್ಕಾರಕ್ಕೆ ಕೈಮುಗಿದು ವಿನಂತಿಸುತ್ತೇನೆ, ಈ ಬಾರಿ ಭಯೋತ್ಪಾದಕರಿಗೆ ಏಳು ಜನ್ಮದವರೆಗೂ ಇಂತಹ ಕೃತ್ಯಕ್ಕೆ ಧೈರ್ಯ ಮಾಡದಂತಹ ಶಿಕ್ಷೆಯಾಗಲಿ. ಭಯೋತ್ಪಾದಕರಿಗೆ ಕರುಣೆ ತೋರಬಾರದು,” ಎಂದು 70 ವರ್ಷದ ಖೇರ್ ಒತ್ತಾಯಿಸಿದರು. “ಇಂತಹ ಕೃತ್ಯ ಯಾವುದೇ ದೇಶದಲ್ಲಾದರೂ ತಪ್ಪು, ಆದರೆ ನಮ್ಮ ದೇಶದಲ್ಲಿ ಈ ಸಾಮೂಹಿಕ ಕೊಲೆಯಾಗಿರುವುದು ಅತ್ಯಂತ ಖಂಡನೀಯ,” ಎಂದು ಅವರು ಹೇಳಿದರು.
ಈ ಸುದ್ದಿಯನ್ನು ಓದಿ: Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ: ಈವರೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಪ್ರವಾಸಿಗರಿಂದ ಕಿಕ್ಕಿರಿದಿದ್ದ ಬೈಸರನ್ ಕಣಿವೆಯಲ್ಲಿ, ಸುಂದರ ದೃಶ್ಯದ ಹಿನ್ನೆಲೆಯಲ್ಲಿ ಫೋಟೋ ತೆಗೆಯುತ್ತಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (TRF) ಹೊಣೆಯಾಗಿದೆ.
ಗೃಹ ಸಚಿವ ಅಮಿತ್ ಶಾ ಈಗಾಗಲೇ ಕಾಶ್ಮೀರದಲ್ಲಿದ್ದು, ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಪ್ರಧಾನಮಂತ್ರಿ ಮೋದಿ ತಮ್ಮ ಎರಡು ದಿನಗಳ ಸೌದಿ ಅರೇಬಿಯಾ ಭೇಟಿಯನ್ನು ಕಡಿತಗೊಳಿಸಿ ಮಂಗಳವಾರ ರಾತ್ರಿ ವಾಪಸಾಗಿದ್ದಾರೆ. ತಕ್ಷಣವೇ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ (NSA) ಜೊತೆ ದಾಳಿಯ ಬಗ್ಗೆ ಸಭೆ ನಡೆಸಿದ್ದಾರೆ.