ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ
ನಟಿ ಕೃಷಿ ತಾಪಂಡ ಅವರ ಆರ್ ಆರ್ ನಗರದಲ್ಲಿರುವ ಮನೆಯಲ್ಲಿ ಉದ್ಯಮಿ ವೈಶಾಖ್ (Vaishak) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ನಟಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ವೈಶಾಕ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಕೃಷಿ ತಾಪಂಡಗೆ ಕರೆ ಮಾಡಿದ್ದ ವೈಶಾಕ್ ನಾನಿನ್ನು ಬದುಕುವುದಿಲ್ಲ, ಸಾಯುತ್ತೇನೆ ಎಂದು ಹೇಳಿದ್ದರು.