ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅನಿವಾರ್ಯವಲ್ಲದೆ ಇದ್ದರೆ ಇರಾನ್‌ಗೆ ಹೋಗಬೇಡಿ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ

ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಸದ್ಯ ಭಾರತೀಯರು ಇರಾನ್‌ಗೆ ತೆರಳದಂತೆ ಭಾರತೀಯ ರಾಯಭಾರ ಕಚೇರಿಯು ಸೂಚಿಸಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇರಾನ್‌ನಲ್ಲಿನ ಭದ್ರತಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಇರಾನ್ ಪ್ರಯಾಣಕ್ಕೆ ಅನುಮತಿ ನೀಡಿದ್ದರೂ ಅನಿವಾರ್ಯವಲ್ಲದೇ ಇದ್ದರೆ ಪ್ರಯಾಣ ತಪ್ಪಿಸಲು ಸೂಚನೆಯನ್ನು ನೀಡಿದೆ.

ಇರಾನ್ ಪ್ರಯಾಣ: ಭಾರತೀಯರಿಗೆ ಎಚ್ಚರಿಕೆ

ಸಂಗ್ರಹ ಚಿತ್ರ -

ನವದೆಹಲಿ: ಅನಿವಾರ್ಯ ಕಾರಣಗಳನ್ನು (non-essential travel) ಹೊರತು ಪಡಿಸಿ ಭಾರತೀಯರು ಇರಾನ್ (iran travel)ಗೆ ತೆರಳದಂತೆ ಭಾರತೀಯ ರಾಯಭಾರ ಕಚೇರಿಯು (ndian Embassy) ಎಚ್ಚರಿಕೆಯನ್ನು ನೀಡಿದೆ. ಇರಾನ್ ಪ್ರಯಾಣಕ್ಕೆ ಭಾರತ ನಿಗದಿಪಡಿಸಿದ್ದ ನಿಯಮಗಳನ್ನು ಸಡಿಲಿಸಿದ್ದರೂ ಕೂಡ ಯಾವುದೇ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಿದೆ. ಈ ಕುಇರುತ್ ಟೆಹರಾನಲ್ಲಿರುವ (Tehran) ಭಾರತೀಯ ರಾಯಭಾರ ಕಚೇರಿಯು ಸಂಘರ್ಷ ಕೊನೆಗೊಂಡ ಮೇಲೆ ಇರಾನ್‌ನಲ್ಲಿನ ಭದ್ರತಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಕಾರಾತ್ಮಕ ಬೆಳವಣಿಗೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಸಡಿಲಿಸಲಾಗಿದೆ ಎಂದು ಹೇಳಿದೆ.

ಇರಾನ್‌ನ ಪರಿಸ್ಥಿತಿ ಉತ್ತಮಗೊಳ್ಳುವವರೆಗೆ ಭಾರತೀಯರು ಪ್ರಯಾಣವನ್ನು ತಪ್ಪಿಸುವುದು ಒಳ್ಳೆಯದು. ಮುಂದಿನ ಸೂಚನೆ ಬರುವವರೆಗೆ ಅನಿವಾರ್ಯವಲ್ಲದ ಇರಾನ್ ಪ್ರಯಾಣವನ್ನು ತಪ್ಪಿಸಬೇಕು ಎಂದು ಅದು ಸೂಚಿಸಿದೆ.

ʼʼವೈಫಲ್ಯ ಮರೆಮಾಚುವ ಯತ್ನʼʼ: ಯುದ್ಧ ಬೆದರಿಕೆ ಹಾಕಿದ ಪಾಕಿಸ್ತಾನದ ಖ್ವಾಜಾ ಆಸಿಫ್‌ಗೆ ಭಾರತ ತಿರುಗೇಟು

ಟೆಹರಾನ್ ನಲ್ಲಿ ಭಾರತೀಯ ರಾಯಭಾರ ಕಚೇರಿಯು ಈ ಕುರಿತು ಜೂನ್ 24ರಂದು ಆದೇಶವನ್ನು ಹೊರಡಿಸಿದ್ದು,ಇರಾನ್ ಪ್ರಯಾಣದ ನಿರ್ಬಂಧಗಳನ್ನು ಭಾರತ ಸಡಿಲಿಸಿದೆ. ಆದರೂ ಭದ್ರತಾ ಪರಿಸ್ಥಿತಿ ಸುಧಾರಣೆಯಾಗುವವರೆಗೆ ನಾಗರಿಕರು ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಹೇಳಿದೆ.

ಇರಾನ್‌ನಲ್ಲಿನ ಭದ್ರತಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಕಾರಾತ್ಮಕ ಬೆಳವಣಿಗೆಗಳು ಕಂಡು ಬಂದಿವೆ. ಹಾಗಿದ್ದರೂ ಮುಂದಿನ ಸೂಚನೆ ಬರುವವರೆಗೆ ಭಾರತೀಯರು ಇರಾನ್ ಪ್ರಯಾಣವನ್ನು ತಪ್ಪಿಸಬೇಕು. ಈಗಾಗಲೇ ಇರಾನ್ ನಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರು ಅನಿವಾರ್ಯ ಕಾರಣಗಳಿಗಾಗಿ ಅಲ್ಲಿಗೆ ಪ್ರಯಾಣಿಸಬೇಕಾಗಬಹುದಾದು. ಆದರೆ ಈ ವೇಳೆ ಹೆಚ್ಚಿನ ಮಟ್ಟದ ಎಚ್ಚರಿಕೆ ವಹಿಸಲು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಲು ಮತ್ತು ನಿರಂತರ ಪರಿಸ್ಥಿತಿಯ ಅರಿವನ್ನು ಹೊಂದಿರಬೇಕು. ವಿಶ್ವಾಸಾರ್ಹ ಮಾಹಿತಿ ಮೂಲಗಳು ಮತ್ತು ಇರಾನ್ ಅಧಿಕಾರಿಗಳು ನೀಡುವ ಎಲ್ಲಾ ಸೂಚನೆಗಳನ್ನು ಅನುಸರಿಸುವಂತೆ ಸೂಚಿಸಿದೆ.

ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಅಲ್ಲಿಗೆ ಆಗಮಿಸುವವರು ತಮ್ಮ ವಿವರಗಳನ್ನು ಸಾಧ್ಯವಾದಷ್ಟು ಬೇಗ ಮಿಷನ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಿರುವ ರಾಯಭಾರ ಕಚೇರಿ, ಇದಕ್ಕಾಗಿ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಯಮಿತವಾಗಿ ಪರಿಶೀಲಿಸುವಂತೆ ತಿಳಿಸಿದೆ.

ಭೀಕರ ದುರಂತ: ಏರ್‌ ಬಲೂನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡ ನೋಡುತ್ತಿದ್ದಂತೆ 8 ಪ್ರವಾಸಿಗರು ಸಜೀವ ದಹನ; ವಿಡಿಯೊ ವೈರಲ್‌

ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಾರಂಭವಾದ ಸಂಘರ್ಷವನ್ನು ಕೊನೆಗೊಳಿಸಲು ಅಂತಿಮ ಒಪ್ಪಂದಕ್ಕೆ ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವೆ ಮೊದಲ ಸುತ್ತಿನ ಮಾತುಕತೆಗಳು ಕತಾರ್ ಮತ್ತು ಪಾಕಿಸ್ತಾನ ಮಧ್ಯಸ್ಥಿತಿಕೆಯಲ್ಲಿ ನಡೆದಿದೆ. ಈ ಕುರಿತು ಸೋಮವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಕತಾರ್ ಮತ್ತು ಪಾಕಿಸ್ತಾನ, ಮುಂದಿನ 60 ದಿನಗಳಲ್ಲಿ ಸಮಗ್ರ ಒಪ್ಪಂದ ನಡೆಸಲು ಎರಡು ಪಕ್ಷಗಳು ಒಪ್ಪಿಕೊಂಡಿವೆ. ಟೆಹರಾನ್ ಮತ್ತು ವಾಷಿಂಗ್ಟನ್ ಮಾತುಕತೆಗಳಿಗೆ ಒಪ್ಪಿಕೊಂಡಿದ್ದು, ಇದಕ್ಕಾಗಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿವೆ ಎಂದು ಹೇಳಿದೆ.