ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉತ್ತರ ಪ್ರದೇಶ ರಾಜ್ಯಸಭೆ ಚುನಾವಣೆ: BJP ಅಭ್ಯರ್ಥಿಗಳ ಪಟ್ಟಿ ಪ್ರಕಟ, ಇಬ್ಬರು ಕೇಂದ್ರ ಸಚಿವರಿಗೆ ತಪ್ಪಿದ ಟಿಕೆಟ್!

ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (BJP) ತನ್ನ 8 ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಸೋಮವಾರ (ಅಕ್ಟೋಬರ್ 5, 2026) ಬಿಡುಗಡೆ ಮಾಡಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಈ ಹೆಸರುಗಳಿಗೆ ಅನುಮೋದನೆ ನೀಡಿದೆ.

ಉತ್ತರ ಪ್ರದೇಶ ರಾಜ್ಯಸಭೆ ಚುನಾವಣೆ: BJP ಅಭ್ಯರ್ಥಿಗಳ ಪಟ್ಟಿ ಪ್ರಕಟ

ಇಂಟರ್ ನೆಟ್ ಚಿತ್ರ -

Vishakha Bhat Heggar
Vishakha Bhat Heggar Oct 5, 2026 6:14 PM

ಲಖನೌ: ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (BJP) ತನ್ನ 8 ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಸೋಮವಾರ (ಅಕ್ಟೋಬರ್ 5, 2026) ಬಿಡುಗಡೆ ಮಾಡಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಈ ಹೆಸರುಗಳಿಗೆ ಅನುಮೋದನೆ ನೀಡಿದ್ದು, ಮುಂಬರುವ ಚುನಾವಣೆಯಲ್ಲಿ ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಸರಿದೂಗಿಸಲು ಈ ಪಟ್ಟಿಯಲ್ಲಿ ವಿಶೇಷ ಗಮನ ಹರಿಸಲಾಗಿದೆ.

ಬಿಜೆಪಿ ಪ್ರಕಟಿಸಿರುವ 8 ಅಭ್ಯರ್ಥಿಗಳ ವಿವರಗಳು ಈ ಕೆಳಗಿನಂತಿವೆ:

  • ಧರಂಪಾಲ್ ಸಿಂಗ್: ಉತ್ತರ ಪ್ರದೇಶ ಸರ್ಕಾರದ ಹಾಲಿ ಸಚಿವರು ಹಾಗೂ ಸಂಘಟನಾ ಪ್ರಮುಖರು.
  • ಶ್ರುತಿ ಗಂಗ್ವಾರ್: ಮಾಜಿ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಅವರ ಪುತ್ರಿ.
  • ಪ್ರಿಯಾಂಕಾ ಸಿಂಗ್ ರಾವತ್: ಬಾರಾಬಂಕಿಯ ಮಾಜಿ ಲೋಕಸಭಾ ಸಂಸದೆ ಮತ್ತು ಪ್ರಸ್ತುತ ಯುಪಿ ಬಿಜೆಪಿಯ ಉಪಾಧ್ಯಕ್ಷೆ.
  • ರಾಧಾಕಾಂತ್ ಓಜಾ: ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರು ಮತ್ತು ಹಿರಿಯ ವಕೀಲರು.
  • ಪ್ರಕಾಶ್ ಪಾಲ್: ಇತ್ತೀಚೆಗಷ್ಟೇ ಯುಪಿ ಬಿಜೆಪಿಯ ಒಬಿಸಿ (OBC) ಮೋರ್ಚಾದ ಅಧ್ಯಕ್ಷರಾಗಿ ನೇಮಕಗೊಂಡವರು.
  • ವಿದ್ಯಾಸಾಗರ್ ಸೋನ್ಕರ್: ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ ಸೇರಿದ ಮಾಜಿ ಲೋಕಸಭಾ ಸಂಸದರು.
  • ಗೋಪಿ ಕೃಷ್ಣ ಪಾಂಡೆ: ಬಿಜೆಪಿ ಕಿಸಾನ್ ಮೋರ್ಚಾದ ಸಕ್ರಿಯ ಮುಖಂಡರು.
  • ರಾಮ್ ಪ್ರತಾಪ್ ಸಿಂಗ್ ಚೌಹಾಣ್: ಪಕ್ಷದ ಸಾಂಘಿಕ ಜವಾಬ್ದಾರಿ ಹೊಂದಿರುವ ಪ್ರಮುಖ ನಾಯಕರು.

ಹಾಲಿ ಸಂಸದರಿಗೆ ಶಾಕ್!

ಈ ಬಾರಿ ಬಿಜೆಪಿ ಹಲವು ಹಾಲಿ ರಾಜ್ಯಸಭಾ ಸದಸ್ಯರನ್ನು ಕೈಬಿಟ್ಟಿದೆ. ಅದರಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ಬಿ.ಎಲ್. ವರ್ಮಾ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಇವರ ಜೊತೆಗೆ ಅರುಣ್ ಸಿಂಗ್, ಗೀತಾ ಶಾಕ್ಯಾ, ನೀರಜ್ ಶೇಖರ್ ಮತ್ತು ಬ್ರಿಜ್‌ಲಾಲ್ ಅವರ ಅವಧಿಯೂ ಮುಕ್ತಾಯಗೊಳ್ಳುತ್ತಿದ್ದು, ಅವರಿಗೂ ಚಾನ್ಸ್‌ ನೀಡಲಾಗುತ್ತಿಲ್ಲ.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯ ಬಲವನ್ನು ಗಮನಿಸಿದರೆ ಪಕ್ಷವು ತನ್ನ ಎಂಟು ಸ್ಥಾನಗಳ ಪೈಕಿ 7 ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಂಖ್ಯಾಬಲ ಹೊಂದಿದೆ ಮತ್ತು ಎಂಟನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಟ್ವಿಟರ್ (X) ಮೂಲಕ ಎಲ್ಲಾ ಎಂಟು ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.