ದೀಪಸ್ತಂಭ ವಿವಾದ: ಸುಪ್ರೀಂ ಕೋರ್ಟ್ನಲ್ಲಿ ವಿಜಯ್ ಸರ್ಕಾರ ಕ್ಷಮೆಯಾಚನೆ
Vijay govt apologises in SC: ಸುಪ್ರೀಂಕೋರ್ಟ್ ಆದೇಶ ಮತ್ತು ಆ ಆದೇಶ ಪಾಲಿಸುವಂತೆ ಮಂಗಳವಾರ ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನೂ ಪಾಲಿಸದೆ, ಸರ್ಕಾರ ಮೂಲ ದೀಪಸ್ತಂಭದ ಬದಲಿಗೆ, ಬೆಟ್ಟದ ಮೇಲಿರುವ ಮಂಟಪದಲ್ಲಿ ಮಾತ್ರ ದೀಪ ಬೆಳಗಲು ಅನುವು ಮಾಡಿಕೊಟ್ಟಿತ್ತು. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ, ಬೆಟ್ಟ ಮತ್ತು ದೇಗುಲದ ಬಳಿ ಪ್ರತಿಭಟನೆ ನಡೆಸಿಸಿತ್ತು.
Karthigai Deepam -
ನವದೆಹಲಿ, ನ.25: ಭಾರೀ ವಿವಾದಕ್ಕೆ ಕಾರಣವಾಗಿದ್ದ ಮದುರೈ ಜಿಲ್ಲೆಯಲ್ಲಿರುವ ತಿರುಪ್ಪರನ್ಕುಂದ್ರಂ ಬೆಟ್ಟದಲ್ಲಿ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರೂ, ಅದನ್ನು ಬೆಳಗಿಸದಿದ್ದಕ್ಕಾಗಿ ತಮಿಳುನಾಡು ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್ನಲ್ಲಿ ಕ್ಷಮೆಯಾಚಿಸಿದೆ.
ಈ ಕಾರ್ಯವನ್ನು ನಿರ್ವಹಿಸಲು ಪ್ರಸ್ತಾಪಿಸಲಾದ ತಂಡಕ್ಕೆ ದೇವಾಲಯದ ಟ್ರಸ್ಟಿ ಮಂಡಳಿಯು ಅನುಮತಿ ನೀಡಿರಲಿಲ್ಲ ಎಂದು ರಾಜ್ಯ ಸರ್ಕಾರವು ತಿಳಿಸಿದೆ. ಸುಪ್ರೀಂಕೋರ್ಟ್ ಆದೇಶ ಮತ್ತು ಆ ಆದೇಶ ಪಾಲಿಸುವಂತೆ ಮಂಗಳವಾರ ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನೂ ಪಾಲಿಸದೆ, ಸರ್ಕಾರ ಮೂಲ ದೀಪಸ್ತಂಭದ ಬದಲಿಗೆ, ಬೆಟ್ಟದ ಮೇಲಿರುವ ಮಂಟಪದಲ್ಲಿ ಮಾತ್ರ ದೀಪ ಬೆಳಗಲು ಅನುವು ಮಾಡಿಕೊಟ್ಟಿತ್ತು. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ, ಬೆಟ್ಟ ಮತ್ತು ದೇಗುಲದ ಬಳಿ ಪ್ರತಿಭಟನೆ ನಡೆಸಿತ್ತು.
ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ, ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು, ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಆದರೆ, 'ದೀಪಸ್ತೂಣ'ದಲ್ಲಿ ದೀಪ ಬೆಳಗಲು ಪ್ರಸ್ತಾಪಿಸಲಾದ ತಂಡಕ್ಕೆ ದೇವಾಲಯದ ಟ್ರಸ್ಟಿ ಮಂಡಳಿಯು ಅನುಮತಿ ನೀಡದ ಕಾರಣ, ಈ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ಬದಲಾಗಿ, ಕಾರ್ತಿಕ ದೀಪವನ್ನು ಅದರ ಸಾಂಪ್ರದಾಯಿಕ ಸ್ಥಳದಲ್ಲೇ ಬೆಳಗಿಸುವ ರೂಢಿಗತ ಪದ್ಧತಿಯನ್ನೇ ಅನುಸರಿಸಲು ಟ್ರಸ್ಟಿ ಮಂಡಳಿ ನಿರ್ಧರಿಸಿತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್; ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ
"ದೀಪಸ್ತಂಭದಲ್ಲಿ ದೀಪವನ್ನು ಬೆಳಗಿಸಲು ಸಾಧ್ಯವಾಗಲಿಲ್ಲ, ಇದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ," ಎಂದು ಜಿಲ್ಲಾಧಿಕಾರಿಗಳು ತಮ್ಮ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಈ ವರದಿಯನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠದ ಮುಂದೆ ಮಂಡಿಸಲಾಯಿತು. ಜಿಲ್ಲಾಧಿಕಾರಿಗಳ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಬೆಟ್ಟದ ಮೇಲಿರುವ ಸ್ತಂಭದಲ್ಲಿ ದೀಪವನ್ನು ಬೆಳಗಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ನವೆಂಬರ್ 20ರ ಆದೇಶವನ್ನು ಪಾಲಿಸಲು ಜಿಲ್ಲಾಡಳಿತವು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ದೀಪ ಬೆಳಗುವ ಸಮಾರಂಭಕ್ಕಾಗಿ ದೇವಾಲಯ ಆಡಳಿತ ಮಂಡಳಿಯ ಅನುಮತಿಯನ್ನು ಪಡೆಯಲು ಅಧಿಕಾರಿಗಳು ಪ್ರಯತ್ನಿಸಿದ್ದರು, ಆದರೆ ಪ್ರಸ್ತಾಪಿಸಲಾದ ತಂಡಕ್ಕೆ ಅನುಮೋದನೆ ಸಿಗಲಿಲ್ಲ ಎಂದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
"ದೀಪಸ್ತಂಭದಲ್ಲಿ ದೀಪ ಬೆಳಗಲು ಯಾರನ್ನಾದರೂ ಅಧಿಕೃತಗೊಳಿಸಿದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯು ಜಿಲ್ಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ," ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.