ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಖನೌ-ದೆಹಲಿ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಮೇಲೆ ಬಾಂಬ್ ಬೆದರಿಕೆ ಸಂದೇಶ; ವಿಮಾನ ಹಾರಾಟ ಸ್ಥಗಿತ

Bomb Threat Message: ಸುಮಾರು 180 ಪ್ರಯಾಣಿಕರನ್ನು ಹೊತ್ತಿದ್ದ ಲಖನೌ-ದೆಹಲಿ ಇಂಡಿಗೋ ವಿಮಾನವು ಶುಕ್ರವಾರ (ಜೂ. 12) ನಿಗದಿತ ಪ್ರಯಾಣ ಆರಂಭಕ್ಕೂ ಮುನ್ನ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದಂತೆ ವಿಳಂಬವಾಗಿದೆ. ಈ ವಿಮಾನವು ಲಖನೌದಿಂದ ದೆಹಲಿಗೆ ಬೆಳಗ್ಗೆ 10.45ಕ್ಕೆ ಹೊರಡಬೇಕಾಗಿತ್ತು.

ಬಾಂಬ್ ಬೆದರಿಕೆ ಸಂದೇಶ; ವಿಮಾನ ಹಾರಾಟ ಸ್ಥಗಿತ

ಸಾಂದರ್ಭಿಕ ಚಿತ್ರ -

Priyanka P
Priyanka P Jun 12, 2026 2:41 PM

ನವದೆಹಲಿ, ಜೂ.12: ಸುಮಾರು 180 ಪ್ರಯಾಣಿಕರನ್ನು ಹೊತ್ತಿದ್ದ ಲಖನೌ-ದೆಹಲಿ ಇಂಡಿಗೋ ವಿಮಾನವು (Lucknow–Delhi Flight) ಶುಕ್ರವಾರ (ಜೂ. 12) ನಿಗದಿತ ಪ್ರಯಾಣ ಆರಂಭಕ್ಕೂ ಮುನ್ನ ಬಾಂಬ್ ಬೆದರಿಕೆ (Bomb Threat Message) ಹಿನ್ನೆಲೆಯಲ್ಲಿ ಭದ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದಂತೆ ವಿಳಂಬವಾಗಿದೆ. ನಂತರ ಅಧಿಕಾರಿಗಳು ಈ ಬಾಂಬ್ ಬೆದರಿಕೆ ಸುಳ್ಳು ಎಂದು ಪತ್ತೆಹಚ್ಚಿದರು. ಆದರೆ, ಕಡ್ಡಾಯ ಭದ್ರತಾ ತಪಾಸಣೆ ಮತ್ತು ಇತರೆ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸುವವರೆಗೆ ವಿಮಾನವನ್ನು ನಿಲ್ದಾಣದಲ್ಲೇ ಇರಿಸಲಾಯಿತು. ಈ ವಿಮಾನವು ಲಖನೌದಿಂದ ದೆಹಲಿಗೆ ಬೆಳಗ್ಗೆ 10.45ಕ್ಕೆ ಹೊರಡಬೇಕಾಗಿತ್ತು.

ವಿಮಾನ ಹೊರಡುವ ಸ್ವಲ್ಪ ಸಮಯದ ಮೊದಲು ವಿಮಾನದ ಸಿಬ್ಬಂದಿಗೆ ಬಾಂಬ್ ಬೆದರಿಕೆ ಇರುವ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಮೂಲಗಳು ತಿಳಿಸಿವೆ. ಎಚ್ಚರಿಕೆ ನಂತರ, ವಿಮಾನವನ್ನು ಟೇಕ್‌ಆಫ್‌ಗೆ ಅನುಮತಿಸದೇ ಏಪ್ರನ್ ಪ್ರದೇಶದಲ್ಲೇ ತಡೆಹಿಡಿಯಲಾಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಸಿಬ್ಬಂದಿ ತಕ್ಷಣವೇ ವಿಮಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು.

ವಿಮಾನದ ಶೌಚಾಲಯದಲ್ಲಿ ಬಾಂಬ್ ಎಂಬ ಪದವಿರುವ ಟಿಶ್ಯೂ ಪೇಪರ್ ಪತ್ತೆಯಾದ ನಂತರ ಭಯ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಇದರಿಂದ ಭದ್ರತಾ ಸಂಸ್ಥೆಗಳು ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಿಸಿದರು. ಕೊನೆಗೆ ಇದೊಂದು ಹುಸಿ ಬೆದರಿಕೆ ಎಂದು ತಿಳಿದುಬಂತು. ಭದ್ರತಾ ತಪಾಸಣೆಯ ಸಮಯದಲ್ಲಿ, ಅಧಿಕಾರಿಗಳಿಗೆ ವಿಮಾನದಲ್ಲಿ ಯಾವುದೇ ಬಾಂಬ್ ಅಥವಾ ಇತರ ಹಾನಿಕಾರಕ ವಸ್ತು ಪತ್ತೆಯಾಗಲಿಲ್ಲ.

ಬ್ಲೂಟೂತ್‌ ಹೆಸರಿನಿಂದ ಹರಡಿದ ‘ಬಾಂಬ್’ ಭೀತಿ: ಅಮೆರಿಕಕ್ಕೆ ವಾಪಸ್ ಬಂದ ಸ್ಪೇನ್‌ಗೆ ಹೊರಟ ವಿಮಾನ

ತಪಾಸಣೆಯ ಸಮಯದಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಮುಂದಿನ ಕಾನೂನು ಮತ್ತು ಭದ್ರತಾ ಕಾರ್ಯವಿಧಾನಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವರದಿಯ ಪ್ರಕಾರ, ವಿಮಾನ ಇನ್ನೂ ಟೇಕ್ ಆಫ್ ಆಗಿಲ್ಲ.

ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದ್ದ ಬೆಂಗಳೂರು-ಮುಂಬೈ ಇಂಡಿಗೋ ವಿಮಾನ

ಬೆಂಗಳೂರು-ಮುಂಬೈ ಇಂಡಿಗೋ ವಿಮಾನ ಟೇಕಾಫ್ ಆದಾಗ ಹಕ್ಕಿ ಡಿಕ್ಕಿ ಹೊಡೆದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿತ್ತು. ಹೀಗಾಗಿ ಪೈಲಟ್ ಮತ್ತೆ ವಿಮಾನ ನಿಲ್ದಾಣಕ್ಕೆ ಮರಳಬೇಕಾಯಿತು. ಪರಿಣಾಮ ವಿಮಾನ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು. ಎರಡೂ ಎಂಜಿನ್‌ಗಳ ತಪಾಸಣೆ ಸೇರಿದಂತೆ ಅಗತ್ಯ ತಪಾಸಣೆಗಳ ನಂತರ, ಏರ್‌ಬಸ್ ಎ 321 ನಿಯೋ ವಿಮಾನವನ್ನು ಸುರಕ್ಷಿತವೆಂದು ಘೋಷಿಸಲಾಯಿತು.

ವಿಮಾನವು ವೇಗವನ್ನು ಪಡೆದುಕೊಂಡು ಟೇಕ್ ಆಫ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದರು. ಎಂಜಿನ್ ಸೇರಿದಂತೆ ಇತರ ಅಂಶಗಳನ್ನು ಪರಿಶೀಲಿಸಿದ ನಂತರ ವಿಮಾನ ಮತ್ತೆ ಹಾರಲು ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯಿತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದರು.