ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BRICS Summit 2026: ವ್ಲಾಡಿಮಿರ್‌ ಪುಟಿನ್–ಷಿ ಜಿನ್‌ಪಿಂಗ್‌ ಜತೆ ನರೇಂದ್ರ ಮೋದಿ; ದೆಹಲಿ ಬ್ರಿಕ್ಸ್‌ ಶೃಂಗಸಭೆಯ ಒಗ್ಗಟ್ಟಿನ ಫೋಟೊ ವೈರಲ್

BRICS Summit: ನವದೆಹಲಿಯಲ್ಲಿ ಆರಂಭಗೊಂಡ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಸೇರಿ ಹಲವು ರಾಷ್ಟ್ರಗಳ ನಾಯಕರು ಭಾಗವಹಿಸಿದ್ದಾರೆ. ಶೃಂಗಸಭೆಯಲ್ಲಿ ಭಯೋತ್ಪಾದನೆ ಮತ್ತು ಏಕಪಕ್ಷೀಯ ಯುದ್ಧ ಕ್ರಮಗಳನ್ನು ಖಂಡಿಸುವ ದೆಹಲಿ ಘೋಷಣೆಗೆ ಒಮ್ಮತ ವ್ಯಕ್ತವಾಗಿದೆ. ಜಾಗತಿಕ ದಕ್ಷಿಣ ರಾಷ್ಟ್ರಗಳು ಜಾಗತಿಕ ನಿರ್ಧಾರ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಈ ಮಧ್ಯೆ ವ್ಲಾಡಿಮಿರ್‌ ಪುಟಿನ್–ಷಿ ಜಿನ್‌ಪಿಂಗ್‌ ಜತೆ ನರೇಂದ್ರ ಮೋದಿ ಫೋಟೊಗೆ ಪೋಸ್‌ ನೀಡಿದ್ದು ವೈರಲ್‌ ಆಗಿದೆ.

ಜಾಗತಿಕ ನಾಯಕರ ಸಮಾಗಮ; ಮೋದಿ–ಪುಟಿನ್–ಜಿನ್‌ಪಿಂಗ್‌ ಫೋಟೊ ವೈರಲ್‌

ದೆಹಲಿಯಲ್ಲಿ ನರೇಂದ್ರ ಮೋದಿ ಮೋದಿ ಮತ್ತು ಜಾಗತಿಕ ನಾಯಕರು -

Profile
Sushmitha Jain Sep 12, 2026 8:59 PM

ನವದೆಹಲಿ, ಸೆ. 12: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆ 2026 (BRICS Summit 2026)ರಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ (Xi Jinping) ಅವರೊಂದಿಗೆ ಕಾಣಿಸಿಕೊಂಡ ಫೋಟೊವನ್ನು ಹಂಚಿಕೊಂಡಿದ್ದಾರೆ. ಏಷ್ಯಾದ ಪ್ರಮುಖ ರಾಷ್ಟ್ರಗಳ ನಾಯಕರ ನಡುವಿನ ಸ್ನೇಹ ಹಾಗೂ ಸಹಕಾರದ ಸಂಕೇತವಾಗಿ ಈ ಚಿತ್ರ ಗಮನ ಸೆಳೆದಿದೆ. ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಮತ್ತು ಇಂಡೋನೇಷ್ಯಾ ಪ್ರಧಾನಿ ಪ್ರಬೋವೊ ಸುಬಿಯಾಂಟೊ ಕೂಡ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ.

ʼಬ್ರಿಕ್ಸ್‌ ಶೃಂಗಸಭೆ 2026 ದೆಹಲಿಯಲ್ಲಿ ಆರಂಭವಾಗಿದೆʼ ಎಂದು ಪ್ರಧಾನಿ ಮೋದಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜಾಗತಿಕ ದಕ್ಷಿಣ (Global South) ರಾಷ್ಟ್ರಗಳು ಕೇವಲ ಚರ್ಚೆಗಳಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ, ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಪ್ರಧಾನಿ ಮೋದಿ ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಕರೆ ನೀಡಿದರು. ಈ ರಾಷ್ಟ್ರಗಳ ನೀತಿ ನಿರೂಪಕರಿಗೆ ಅಗತ್ಯ ತರಬೇತಿ ಹಾಗೂ ಪರಿಣತಿಯನ್ನು ಒದಗಿಸಲು ಭಾರತ ಸಿದ್ಧವಿದೆ ಎಂದು ಅವರು ತಿಳಿಸಿದರು.

ಜಾಗತಿಕ ನಾಯಕರೊಂದಿಗೆ ಪ್ರಧಾನಿ ಮೋದಿ:

ಭಯೋತ್ಪಾದನೆ ವಿರುದ್ಧ ಬ್ರಿಕ್ಸ್‌ ಮಹತ್ವದ ಘೋಷಣೆ

ಶೃಂಗಸಭೆಯಲ್ಲಿ ಹಲವು ಸೂಕ್ಷ್ಮ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ತೀವ್ರ ಮಾತುಕತೆಗಳ ಬಳಿಕ ದೆಹಲಿ ಘೋಷಣೆಗೆ (Delhi Declaration) ಒಮ್ಮತ ವ್ಯಕ್ತವಾಗಿದೆ. ಘೋಷಣೆಯಲ್ಲಿ ಭಯೋತ್ಪಾದನೆ ಹಾಗೂ ಏಕಪಕ್ಷೀಯ ಯುದ್ಧ ಕ್ರಮಗಳನ್ನು ಖಂಡಿಸಲಾಗಿದೆ. “ಸಭೆ ಉತ್ಪಾದಕ ಹಾಗೂ ಸಕಾರಾತ್ಮಕವಾಗಿತ್ತು. ಯಾವುದೇ ಸದಸ್ಯರು ಅಸಮ್ಮತಿ ವ್ಯಕ್ತಪಡಿಸಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಎಚ್-1 ಬಿ ವೀಸಾದ 60 ದಿನಗಳ ಗ್ರೇಸ್ ಪೀರಿಯಡ್ ರದ್ದತಿಗೆ ಚಿಂತನೆ, ವಿದೇಶಿ ಉದ್ಯೋಗಿಗಳಿಗೆ ಆತಂಕ

ಪುಟಿನ್‌ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಶುಕ್ರವಾರ (ಸೆಪ್ಟೆಂಬರ್‌ 11) ಬೆಳಗ್ಗೆ ದೆಹಲಿಗೆ ಆಗಮಿಸಿದರು. ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಪುಟಿನ್‌ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ರಾಜಕೀಯ, ಆರ್ಥಿಕ, ರಕ್ಷಣಾ, ಇಂಧನ, ಬಾಹ್ಯಾಕಾಶ, ಕೌಶಲ್ಯ ಚಲನೆ ಹಾಗೂ ಜನರ ನಡುವಿನ ಸಂಪರ್ಕ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸುವ ಕುರಿತು ಇಬ್ಬರು ನಾಯಕರ ಮಧ್ಯೆ ಚರ್ಚೆ ನಡೆದಿದೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಹಾಗೂ ಕಪ್ಪು ಸಮುದ್ರ ಪ್ರದೇಶದ ಸಂಘರ್ಷದ ಬಗ್ಗೆಯೂ ಇಬ್ಬರು ನಾಯಕರು ಚರ್ಚೆ ನಡೆಸಿದರು. ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಲು ಸಂವಾದ ಮತ್ತು ರಾಜತಾಂತ್ರಿಕತೆಯೇ ಮುಂದಿನ ದಾರಿ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಜಿನ್‌ಪಿಂಗ್‌ ಜತೆಗಿನ ಮಾತುಕತೆಗೂ ಮಹತ್ವ

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಶುಕ್ರವಾರ ಮಧ್ಯಾಹ್ನ ದೆಹಲಿಗೆ ಆಗಮಿಸಿದರು. ಪ್ರಧಾನಿ ಮೋದಿ ಮತ್ತು ಜಿನ್‌ಪಿಂಗ್‌ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ವಾಸ್ತವ ನಿಯಂತ್ರಣ ರೇಖೆ (LAC), ವ್ಯಾಪಾರ, ಹೂಡಿಕೆ ಹಾಗೂ ಆರ್ಥಿಕ ಸಹಕಾರ ಸೇರಿ ಹಲವು ವಿಷಯಗಳು ಪ್ರಮುಖವಾಗುವ ನಿರೀಕ್ಷೆಯಿದೆ. ಭಾರತ–ಚೀನಾ ಗಡಿಯಲ್ಲಿ ಇತ್ತೀಚಿನ ಸ್ಥಿರತೆಯನ್ನು ಮುಂದುವರಿಸಿಕೊಂಡು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಸುಧಾರಿಸುವ ಬಗ್ಗೆಯೂ ಮಾತುಕತೆ ನಡೆಯಲಿದೆ.

ಈ ವೇಳೆ ಜಿನ್‌ಪಿಂಗ್‌ ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಅಂತಾರಾಷ್ಟ್ರೀಯ ಸಮುದಾಯದ ಸಾಮಾನ್ಯ ಹಿತಾಸಕ್ತಿಗೆ ಅನುಕೂಲವಲ್ಲ ಎಂದು ವಿಶ್ವ ನಾಯಕರಿಗೆ ತಿಳಿಸಿದ್ದಾರೆ.