ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: 2 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ ರಾಜ್ಯಕ್ಕೆ ಕೀರ್ತಿ: ಪೆಂಕಾಕ್ ಸಿಲಾಟ್ ಚಾಂಪಿಯನ್‌ಶಿಪ್‌ನಲ್ಲಿ ನಾಗಾರ್ಜುನ ಕಾಲೇಜು ವಿದ್ಯಾರ್ಥಿಗಳ ಮಿಂಚಿನ ಸಾಧನೆ

ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ತ್ರಿಷಾ ಎಸ್. (103 ಕೆ.ಜಿ. ವಿಭಾಗ) ಹಾಗೂ ಪ್ರತಿತಿ ಸಂಧ್ಯಾ ಜಿ. (45–50 ಕೆ.ಜಿ. ವಿಭಾಗ) ಚಿನ್ನದ ಪದಕ ಗೆದ್ದಿದ್ದಾರೆ. ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸ್ನೇಹಾ ಎನ್. (55–60 ಕೆ.ಜಿ.) ಬೆಳ್ಳಿ ಪದಕ ಪಡೆದರೆ, ಬಿಬಿಎ ದ್ವಿತೀಯ ವರ್ಷದ ಹರ್ಷಿಣಿ ಕೆ.ಆರ್. (80–85 ಕೆ.ಜಿ.) ಹಾಗೂ ಎಂಬಿಎ ಪ್ರಥಮ ವರ್ಷದ ಸುಹಾಸ್ ಆರ್. (70–75 ಕೆ.ಜಿ.) ಕಂಚಿನ ಪದಕ ಜಯಿಸಿದ್ದಾರೆ.

2 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ ರಾಜ್ಯಕ್ಕೆ ಕೀರ್ತಿ

-

Profile
Ashok Nayak Sep 12, 2026 8:53 PM

ಚಿಕ್ಕಬಳ್ಳಾಪುರ: ಪಾಂಡಿಚೇರಿಯಲ್ಲಿ ನಡೆದ ಪೆಂಕಾಕ್ ಸಿಲಾಟ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಚಿಕ್ಕಬಳ್ಳಾಪುರ ತಾಲೂಕಿನ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: Chikkaballapur News: ಜಾನಪದ ಕಲೆ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಿ: ‘ಕಲಾ ನಡೆಗೆ ನಿಮ್ಮ ಬಳಿಗೆ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ತ್ರಿಷಾ ಎಸ್. (103 ಕೆ.ಜಿ. ವಿಭಾಗ) ಹಾಗೂ ಪ್ರತಿತಿ ಸಂಧ್ಯಾ ಜಿ. (45–50 ಕೆ.ಜಿ. ವಿಭಾಗ) ಚಿನ್ನದ ಪದಕ ಗೆದ್ದಿದ್ದಾರೆ. ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸ್ನೇಹಾ ಎನ್. (55–60 ಕೆ.ಜಿ.) ಬೆಳ್ಳಿ ಪದಕ ಪಡೆದರೆ, ಬಿಬಿಎ ದ್ವಿತೀಯ ವರ್ಷದ ಹರ್ಷಿಣಿ ಕೆ.ಆರ್. (80–85 ಕೆ.ಜಿ.) ಹಾಗೂ ಎಂಬಿಎ ಪ್ರಥಮ ವರ್ಷದ ಸುಹಾಸ್ ಆರ್. (70–75 ಕೆ.ಜಿ.) ಕಂಚಿನ ಪದಕ ಜಯಿಸಿದ್ದಾರೆ.

SP 2

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದಮ್ಮ ಎನ್., ವಿಭಾಗದ ಮುಖ್ಯಸ್ಥರಾದ ಡಾ. ಕಿರಣ್ ಕುಮಾರ್ ಟಿ.ಎನ್., ಶ್ರೀಮತಿ ಅರುಣಾ ಸಿ., ಡಾ. ಗಿರೀಶ್ ಹಾಗೂ ಡಾ. ಕವಿತಾ ಸಿ. ಅಭಿನಂದನೆ ಸಲ್ಲಿಸಿದ್ದಾರೆ.

ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ತರಬೇತುದಾರ ಗುರುರಾಜ್ ಎಂ.ವಿ. ಅವರ ಮಾರ್ಗದರ್ಶನ, ತರಬೇತಿ ಹಾಗೂ ನಿರಂತರ ಪ್ರೋತ್ಸಾಹವನ್ನು ಕಾಲೇಜು ಆಡಳಿತ ಮಂಡಳಿ ಶ್ಲಾಘಿಸಿದೆ. ತಂಡದ ನಿರ್ವಹಣೆ ಮತ್ತು ಸಮನ್ವಯಕ್ಕೆ ಸಹಕರಿಸಿದ ವ್ಯವಸ್ಥಾಪಕಿ ದೀಪಿಕಾ ಬಿ.ಎನ್. ಅವರ ಸೇವೆಯನ್ನೂ ಅಭಿನಂದಿಸಲಾಯಿತು.