ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BSF Jawan Arrested: ಗಡಿ ಪ್ರದೇಶ ದಾಟಿದ ಬಿಎಸ್‌ಎಫ್‌ ಯೋಧ ಪಾಕ್‌ ಸೇನೆ ವಶಕ್ಕೆ

ಬುಧವಾರ ಮಧ್ಯಾಹ್ನ ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ (ಐಬಿ) ದಾಟಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕನನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಭಾರತ-ಪಾಕ್ ಗಡಿಯ ಸಮೀಪವಿರುವ ಕೃಷಿಭೂಮಿಯ ಬಳಿ ಸೈನಿಕ ಕರ್ತವ್ಯದಲ್ಲಿದ್ದಾಗ ಈ ಘಟನೆ ಸಂಭವಿಸಿದೆ

ಬಿಎಸ್‌ಎಫ್‌ ಯೋಧ ಪಾಕ್‌ ಸೇನೆ ವಶಕ್ಕೆ

Profile Vishakha Bhat Apr 24, 2025 5:49 PM

ಇಸ್ಲಾಮಾಬಾದ್‌: ಬುಧವಾರ ಮಧ್ಯಾಹ್ನ ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ (ಐಬಿ) ದಾಟಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕನನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಭಾರತ-ಪಾಕ್ ಗಡಿಯ ಸಮೀಪವಿರುವ ಕೃಷಿಭೂಮಿಯ ಬಳಿ ಸೈನಿಕ ಕರ್ತವ್ಯದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಯೋಧ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಪಾಕ್‌ ಗಡಿಯೊಳಗೆ ಪ್ರವೇಶಿಸಿದ್ದಾರೆ. ಬಿಎಸ್‌ಎಫ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಕೆ ಸಿಂಗ್‌ ಎಂಬುವವರನ್ನು ಪಾಕಿಸ್ತಾನ ಸೇನೆ ವಶಕ್ಕೆ ತೆಗೆದುಕೊಂಡಿದೆ. ಭಾರತೀಯ ಸೇನೆ ಮತ್ತು ಪಾಕಿಸ್ತಾನ ರೇಂಜರ್ಸ್ ಎರಡೂ ಅಧಿಕಾರಿಗಳು ಈ ವಿಷಯವನ್ನು ಪರಿಹರಿಸಲು ಮತ್ತು ಸೈನಿಕನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಸಭೆಯನ್ನು ನಡೆಸುತ್ತಿದ್ದಾರೆ.



ಸ್ತುತ ಮಾತುಕತೆಗಳು ನಡೆಯುತ್ತಿದ್ದು, ಯೋಧನ ಬಿಡುಗಡೆ ಕುರಿತು ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಸಮವಸ್ತ್ರ ಧರಿಸಿ ಸರ್ವಿಸ್ ರೈಫಲ್ ಹಿಡಿದುಕೊಂಡಿದ್ದ ಸಿಂಗ್, ಗಡಿ ಪ್ರದೇಶದ ಬಳಿ ರೈತರೊಂದಿಗೆ ಹೋಗುತ್ತಿದ್ದರು. ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಮುಂದೆ ಸಾಗಿದ ಅವರು, ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿದಾಗ, ಪಾಕಿಸ್ತಾನಿ ಪಡೆಗಳು ಅವರನ್ನು ವಶಕ್ಕೆ ತೆಗೆದುಕೊಂಡವು ಎಂದು ವರದಿಯಾಗಿದೆ. 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಈ ಸೂಕ್ಷ್ಮ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.