Delhi Street Dog: ದೆಹಲಿ ಬೀದಿ ನಾಯಿ ಸ್ಥಳಾಂತರ ಆದೇಶ; ಪರಿಶೀಲನೆ ನಡೆಸುತ್ತೇವೆಂದು ಮುಖ್ಯ ನ್ಯಾಯಮೂರ್ತಿ ಆಶ್ವಾಸನೆ
ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಬೀದಿ ನಾಯಿಗಳ ವಿವಾದದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಬುಧವಾರ ಹೇಳಿದ್ದಾರೆ. ಆಗಸ್ಟ್ 11 ರಂದು, ಸುಪ್ರೀಂ ಕೋರ್ಟ್, ಬೀದಿನಾಯಿ ಕಡಿತದಿಂದಾಗಿ, ವಿಶೇಷವಾಗಿ ಮಕ್ಕಳಲ್ಲಿ ರೇಬಿಸ್ ಹೆಚ್ಚಾದ ಕಾರಣದಿಂದಾಗಿ ದೆಹಲಿ-ಎನ್‌ಸಿಆರ್ ಅಧಿಕಾರಿಗಳಿಗೆ ಬೀದಿಗಳಿಂದ ಎಲ್ಲಾ ಬೀದಿನಾಯಿಗಳನ್ನು ಸ್ಥಳಾಂತರಿಸುವುದಕ್ಕೆ ಆದೇಶಿಸಿತ್ತು.


ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನಡೆಯುತ್ತಿರುವ ಬೀದಿ ನಾಯಿಗಳ ವಿವಾದದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭಾರತದ (Delhi Street Dog) ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಬುಧವಾರ ಹೇಳಿದ್ದಾರೆ. ಆಗಸ್ಟ್ 11 ರಂದು ಸುಪ್ರೀಂ ಕೋರ್ಟ್ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರದ ಕುರಿತು ಹೊರಡಿಸಿದ ಆದೇಶದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ವಕೀಲರು ಸಿಜೆಐ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಹೆಚ್ಚುತ್ತಿರುವ ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಎಲ್ಲಾ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿತ್ತು.
ಪ್ರಾಣಿ ಕಾರ್ಯಕರ್ತರು ನಾಗರಿಕ ಸಂಸ್ಥೆಗಳಿಗೆ ಇಂತಹ ವರ್ಗಾವಣೆ ಪ್ರಕ್ರಿಯೆಗೆ ಹಣದ ಕೊರತೆಯಿದೆ ಎಂದು ವಾದಿಸಿದ್ದಾರೆ. ಇಂದು ಬೆಳಿಗ್ಗೆ ಮುಖ್ಯ ನ್ಯಾಯಾಧೀಶರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಬೀದಿ ನಾಯಿಗಳನ್ನು ಸ್ಥಳಾಂತರಿಸುವುದು ಮತ್ತು ಕೊಲ್ಲುವುದನ್ನು ನಿಷೇಧಿಸುವ ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸುವ ಹಿಂದಿನ ನ್ಯಾಯಾಲಯದ ಆದೇಶದ ಕುರಿತು ನ್ಯಾಯಮೂರ್ತಿಗಳ ಗಮನಕ್ಕೆ ತರಲಾಯಿತು.
ಈ ವಿಷಯದ ಕುರಿತು ಮಾತನಾಡಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ನಾನು ಇದನ್ನು ಪರಿಶೀಲಿಸುತ್ತೇನೆ. ಶೀಘ್ರವೇ ಈ ಕುರಿತು ಒಂದು ನಿರ್ಣಯವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಾಯಿಗಳಿಗೆ ನಿಯಮಿತವಾಗಿ ಸಂತಾನಹರಣ ಚಿಕಿತ್ಸೆ ಮತ್ತು ರೋಗನಿರೋಧಕ ಲಸಿಕೆ ಹಾಕುವಂತೆ ಕೋರಿ 2024 ರಲ್ಲಿ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದೆ. ಅಧಿಕಾರಿಗಳು ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: Supreme Court: ವಿವಾಹಿತ ಮಹಿಳೆ ಯಾರಿಂದ ಗರ್ಭ ಧರಿಸಿದ್ದರೂ ಪತಿಯೇ ಮಗುವಿನ ತಂದೆ; ವಿವಾದ ಹುಟ್ಟು ಹಾಕಿದ ಸುಪ್ರೀಂ ಕೋರ್ಟ್ ತೀರ್ಪು
ಆಗಸ್ಟ್ 11 ರಂದು, ಸುಪ್ರೀಂ ಕೋರ್ಟ್, ಬೀದಿನಾಯಿ ಕಡಿತದಿಂದಾಗಿ, ವಿಶೇಷವಾಗಿ ಮಕ್ಕಳಲ್ಲಿ ರೇಬಿಸ್ ಹೆಚ್ಚಾದ ಕಾರಣದಿಂದಾಗಿ ದೆಹಲಿ-ಎನ್‌ಸಿಆರ್ ಅಧಿಕಾರಿಗಳಿಗೆ ಬೀದಿಗಳಿಂದ ಎಲ್ಲಾ ಬೀದಿನಾಯಿಗಳನ್ನು "ಆದಷ್ಟು ಬೇಗ" ಶಾಶ್ವತವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿತ್ತು. ಆರರಿಂದ ಎಂಟು ವಾರಗಳಲ್ಲಿ ಸುಮಾರು 5,000 ನಾಯಿಗಳಿಗೆ ಆಶ್ರಯಗಳನ್ನು ರಚಿಸುವ ಮೂಲಕ ಪ್ರಾರಂಭಿಸಲು ದೆಹಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು.