ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದ ಜತೆ ಸಿಜೆಪಿ ಸಂಬಂಧ; ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಬಿಚ್ಚಿಟ್ಟ ರಹಸ್ಯವೇನು?

CJP Protest: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಗೆ ವಿದೇಶಿ ಸಂಪರ್ಕವಿತ್ತೇ ಎನ್ನುವ ಕುರಿತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರು ಹೇಳಿರುವುದೇನು? ಪ್ರಖಾರ್ ಗುಪ್ತಾ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಸಿಜೆಪಿ ಪ್ರತಿಭಟನೆಗೆ ವಿದೇಶಿ ಸಂಪರ್ಕ? ವಾಂಗ್‌ಚುಕ್ ಹೇಳಿದ್ದೇನು?

ಸಂಗ್ರಹ ಚಿತ್ರ -

ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janta Party) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ (Jantar Mantar in Delhi) ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದೇಶಿ ಪ್ರಭಾವವಿದೆ ಎನ್ನುವುದನ್ನು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (activist Sonam Wangchuk) ನಿರಾಕರಿಸಿದ್ದಾರೆ. ಪ್ರಖಾರ್ ಗುಪ್ತಾ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಅವರು, ತಾವು ಬೆಂಬಲಿಸಿದ ಸಿಜೆಪಿ ಪ್ರತಿಭಟನಾ (CJP Protest) ಆಂದೋಲನಕ್ಕೆ ಯಾವುದೇ ವಿದೇಶಿ ಸಂಪರ್ಕವಿರಲಿಲ್ಲ ಎಂದರು. ಲಭ್ಯವಿರುವ ಮಾಹಿತಿ, ಸಿಜೆಪಿ ನಾಯಕರೊಂದಿಗೆ ಸಂಭಾಷಣೆ ಮತ್ತು ಪ್ರತಿಭಟನಾ ಸ್ಥಳದಲ್ಲಿ ನಾನು ನೋಡಿರುವ ಮಾಹಿತಿಯನ್ನು ಆಧರಿಸಿ ಹೇಳುವುದಾಗಿ ಅವರು ತಿಳಿಸಿದರು.

ನೀವು ಕೇಂದ್ರ ಗುಪ್ತಚರ ಸಂಸ್ಥೆ ಪ್ರತಿನಿಧಿ ಆಗಿದ್ದೀರಾ ಎನ್ನುವ ಪ್ರಶ್ನೆ ಉತ್ತರಿಸಿದ ಅವರು, ಇದಕ್ಕೆ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿಲ್ಲ. ಸಿಐಎ ವ್ಯಕ್ತಿಯೊಬ್ಬರು ಏನು ಮಾಡುತ್ತಾರೆ ಎಂದು ಮರಳಿ ಪ್ರಶ್ನಿಸಿದರು.

ಡಾ.ಬಿ.ಎಂ.ಉಮೇಶ್ ಕುಮಾರ್ ರವರಿಂದ ಅಸ್ಸಾಂನ ಕಾಮಾಖ್ಯಾ ದೇವಾಲಯದಲ್ಲಿ ‘ಕಾಮಾಖ್ಯಪ್ರಿಯ’ ಭಕ್ತಿಗೀತೆಗಳ ಆಲ್ಬಮ್ ಬಿಡುಗಡೆ

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಶೈಕ್ಷಣಿಕ ರುಜುವಾತುಗಳು ಮತ್ತು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಯುಎಸ್ ಜೊತೆಗಿನ ಅವರ ಸಂಬಂಧಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ವಾಂಗ್‌ಚುಕ್, ನಾನು ಈ ಬಗ್ಗೆ ತನಿಖೆ ನಡೆಸಿಲ್ಲ. ಅದು ಕೇವಲ ಒಂದು ಮಾಹಿತಿ. ಅವರು ಲೆಫ್ಟಿನೆಂಟ್ ಗವರ್ನರ್ ಸೇರಿದಂತೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಯುಎಸ್‌ನಲ್ಲಿ ನನಗೆ ತಿಳಿದಿಲ್ಲದ ದೊಡ್ಡ ಅಧಿಕಾರಿಗಳು ತಮ್ಮ ಅನುಯಾಯಿಗಳು ಎಂದು ಹೇಳುತ್ತಿದ್ದರು. ಹಾಗಾಗಿ ನಾನು ಹೋಗಿ ಅವರ ಅನುಯಾಯಿಗಳ ವಿಶ್ಲೇಷಣೆಯನ್ನು ನೋಡಿದೆ. ಅವರ ಅನುಯಾಯಿಗಳಲ್ಲಿ ಶೇ. 94 ರಷ್ಟು ಜನರು ಭಾರತದಿಂದ ಬಂದವರು ಮತ್ತು ಶೇ. 6 ರಷ್ಟು ಜನರು ಮಾತ್ರ ಇತರ ದೇಶಗಳಿಂದ ಬಂದವರು ಎಂದು ತಿಳಿಯಿತು ಎಂದರು.



ಈ ನಿಟ್ಟಿನಲ್ಲಿ ಭಾರತ ನಿಜಕ್ಕೂ ವಿಶ್ವಗುರು. ಯಾಕೆಂದರೆ ಮೊದಲು ಭಾರತ ಇದನ್ನು ಪ್ರಾರಂಭಿಸಿತು. ಈಗ ಪಾಕಿಸ್ತಾನದಲ್ಲಿ ಕಾಕ್ರೋಚ್ ಜನತಾ ಪಕ್ಷ ರೂಪುಗೊಳ್ಳುತ್ತಿದೆ. ಕನಿಷ್ಠ ಭಾರತ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಸಿಜೆಪಿ ಹೊಂದಿರುವ ಶೇ. 6 ರಷ್ಟು ವಿದೇಶಿ ಅನುಯಾಯಿಗಳು ಹೆಚ್ಚಿನ ಅಪಾಯವಲ್ಲ. ಅದು ಶೇ. 30 ರಷ್ಟು ವಿದೇಶಿ ಮತ್ತು ಶೇ. 70 ರಷ್ಟು ಭಾರತೀಯರಾಗಿದ್ದರೆ ಅಪಾಯವಾಗಿರುತ್ತಿತ್ತು. ಹೊರಗೆ ಶೇ. 6 ಮತ್ತು ಒಳಗೆ ಶೇ. 94 ರಷ್ಟು ಅನುಯಾಯಿಗಳನ್ನು ಸಿಜೆಪಿ ಹೊಂದಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಅವರು ಯಾವುದೇ ವಿದೇಶಿ ಶಕ್ತಿಯಿಂದ ಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆಂದು ನನಗೆ ಅನಿಸಲಿಲ್ಲ ಎಂದರು.

ಅವರ ಆಹಾರ ಕ್ರಮ, ಕೆಲಸ ಮಾಡುವ ವಿಧಾನಗಳ ಬಗ್ಗೆ ಸಮಸ್ಯೆಗಳಿರಬಹುದು. ಇದಕ್ಕಾಗಿ ಅವರನ್ನು ಬಾಹ್ಯ ಶಕ್ತಿ ನಿಯಂತ್ರಿಸುತ್ತಿದೆ ಎನ್ನಲು ಸಾಧ್ಯವಿಲ್ಲ. ಇಡುಗ್ ಅವರೊಂದಿಗಿನ ಸಂಭಾಷಣೆ ಮತ್ತು ವಿಶ್ಲೇಷಣೆಗಳಿಂದ ಸ್ಪಷ್ಟವಾಗಿದೆ. ಈ ಚಳುವಳಿಯಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ನೋಡಿದ ಮೇಲೆಯೇ ನಾನು ಅವರನ್ನು ಬೆಂಬಲಿಸಲು ನಿರ್ಧರಿಸಿದೆ ಎಂದರು.

Hubballi News: ಒಂದೇ ತಿಂಗಳಲ್ಲಿ 4.48 ದಶಲಕ್ಷ ಟನ್ ಸರಕು ಸಾಗಣೆ: ನೈಋತ್ಯ ರೈಲ್ವೆ 805.70 ಕೋಟಿ ರೂ. ಆಗಸ್ಟ್‌ ಗಳಿಕೆ

ಅವರಿಗೆ ವಿದೇಶದಿಂದ ಹಣ ಬಂದಿದೆ ಎಂದು ನಾನು ಭಾವಿಸುವುದಿಲ್ಲ. ನಾನು ಯಾವುದೇ ತನಿಖೆಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಯಾರೂ ಕೂಡ ಈ ವಿಷಯದಲ್ಲಿ ಸುಳ್ಳು ಹೇಳಬಾರದು. ಆ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡ 20 ಮಕ್ಕಳಿಗಾಗಿ ಧ್ವನಿ ಎತ್ತುತ್ತಿದ್ದರು. ಅದು ದೊಡ್ಡ ವಿಷಯವಾಗಿತ್ತು. ನಾನು ಶಿಕ್ಷಣ ನೀತಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಈ ದುರಂತ ನನ್ನನ್ನು ಆಳವಾಗಿ ಕಲಕಿತು. ಅವರು ನಿಜವಾದ ಕಾಳಜಿಯಿಂದ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದರು ಎಂದು ಹೇಳಿದರು.