ತಿರುಪ್ಪರಂಕುಂದ್ರಂ ಬೆಟ್ಟಕ್ಕೆ ಸಿಆರ್‌ಪಿಎಫ್ ಭದ್ರತೆ: ಇಂದು ದೀಪಸ್ತಂಭದಲ್ಲಿ ಬೆಳಗಲಿದೆ ಕಾರ್ತಿಕ ದೀಪ
Thiruparankundram Hill: ತಮಿಳುನಾಡಿನ ತಿರುಪರಂಕುಂದ್ರಂನಲ್ಲಿ ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಇಂದು ಸಂಜೆ ದೀಪ ಬೆಳಗಲಿದೆ. ನ್ಯಾಯಾಲಯದ ಆದೇಶದಂತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಇಡೀ ಬೆಟ್ಟ, ಅರುಳ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಮತ್ತು ದರ್ಗಾದ ಭದ್ರತೆಯನ್ನು ವಹಿಸಿಕೊಂಡಿದೆ.
ತಿರುಪ್ಪರಂಕುಂದ್ರಂ ಬೆಟ್ಟಕ್ಕೆ ಸಿಆರ್‌ಪಿಎಫ್ ಭದ್ರತೆ -
ಚೆನ್ನೈ: ತಮಿಳುನಾಡಿನ ತಿರುಪರಂಕುಂದ್ರಂನಲ್ಲಿ (Thiruparankundram Hill) ಸುಪ್ರೀಂಕೋರ್ಟ್‌ನ (Supreme Court) ನಿರ್ದೇಶನದಂತೆ ಇಂದು ಸಂಜೆ ದೀಪ ಬೆಳಗಲಿದೆ. ನ್ಯಾಯಾಲಯದ ಆದೇಶದಂತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಇಡೀ ಬೆಟ್ಟ, ಅರುಳ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಮತ್ತು ದರ್ಗಾದ ಭದ್ರತೆಯನ್ನು ವಹಿಸಿಕೊಂಡಿದೆ. ದರ್ಗಾದಿಂದ ಕನಿಷ್ಠ 50 ಮೀಟರ್ ದೂರದಲ್ಲಿರುವ ಬೆಟ್ಟದ ಮೇಲಿರುವ ಕಲ್ಲಿನ ಕಂಬವಾದ ದೀಪಥೂನ್‌ನಲ್ಲಿ ದೀಪವನ್ನು ಬೆಳಗಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ದರ್ಗಾ ಮತ್ತು ಅದರ ಆವರಣದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕಾರ್ತಿಕ ದೀಪ ಬೆಳಗುವ ಸ್ಥಳದ ವಿಚಾರವಾಗಿ ವಿವಾದ ತಲೆದೋರಿತ್ತು. ಸಾಂಪ್ರದಾಯಿಕವಾಗಿ ದೇವಸ್ಥಾನದ ಬಳಿಯ ಉಚ್ಚಿಪ್ಪಿಳ್ಳೈಯಾರ್ ಮಂಟಪದಲ್ಲಿ ದೀಪ ಬೆಳಗಲಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ವಾದಿಸಿತ್ತು. ಆದರೆ, ಬೆಟ್ಟದ ಮೇಲ್ಭಾಗದಲ್ಲಿರುವ ಕಲ್ಲಿನ ಸ್ತಂಭವಾದ 'ದೀಪತೂಣ್'ನಲ್ಲಿ ದೀಪ ಬೆಳಗಲು ಅನುಮತಿ ನೀಡುವಂತೆ ಅರ್ಜಿದಾರರು ಕೋರಿದ್ದರು. ನವೆಂಬರ್ 20ರಂದು ದೀಪತೂಣ್‌ನಲ್ಲಿ ದೀಪ ಬೆಳಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತಾದರೂ, ನವೆಂಬರ್ 24ರಂದು ಎಂದಿನಂತೆ ಉಚ್ಚಿಪ್ಪಿಳ್ಳೈಯಾರ್ ಮಂಟಪದಲ್ಲೇ ದೀಪ ಬೆಳಗಲಾಗಿತ್ತು. ಇದು ವಿವಾದ ತೀವ್ರಗೊಳ್ಳಲು ಕಾರಣವಾಗಿತ್ತು.
ತನ್ನ ಆದೇಶ ಪಾಲಿಸದ ತಮಿಳುನಾಡು ಸರ್ಕಾರದ ವಿರುದ್ಧ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. "ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವುದನ್ನು, ವಿಶೇಷವಾಗಿ ಕಾರ್ಯಾಂಗದ ಅಧಿಕಾರಿಗಳ ಇಂತಹ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ಕಠಿಣವಾಗಿ ಹತ್ತಿಕ್ಕಬೇಕಾಗುತ್ತದೆ" ಎಂದು ಪೀಠ ಎಚ್ಚರಿಸಿದೆ.
ವಿಡಿಯೋ ನೋಡಿ
#WATCH | Tamil Nadu | Central Reserve Police Force (CRPF) in Thiruparankundram undertakes security and surveillance duties in the area. This comes after the Supreme Court ordered that the ceremonial lamp be lit at Deepathoon today and directed the deployment of the Central Reserve Police Force (CRPF). Directs that the lamp be lit at least 50 metres away from the Dargah. Directs the police to ensure the protection of the Dargah and its premises.
— ANI (@ANI) November 27, 2026
ಆದೇಶ ಪಾಲಿಸದ ಕಾರಣಕ್ಕಾಗಿ ತಮಿಳುನಾಡು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ 15 ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಲಾಗಿದ್ದು, ಡಿಸೆಂಬರ್ 15ರಂದು ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದೆ. ದೇವಸ್ಥಾನದ ಟ್ರಸ್ಟಿಗಳ ಮಂಡಳಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿರುವ ನ್ಯಾಯಾಲಯ, ಆಡಳಿತ ನಿರ್ವಹಣೆಗಾಗಿ ಹೈಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಾಧೀಶರಾದ ವೈದ್ಯನಾಥನ್ ಮತ್ತು ಪಾರ್ಥಿಬನ್ ಅವರನ್ನು ನೇಮಿಸಿದೆ.
ದರ್ಗಾದಿಂದ ಕನಿಷ್ಠ 50 ಮೀಟರ್ ಅಂತರ ಕಾಯ್ದುಕೊಂಡು ದೀಪತೂಣ್‌ನಲ್ಲಿ ದೀಪ ಬೆಳಗಲು ಹಾಗೂ ನಿಗದಿತ ಸ್ಥಳಗಳಲ್ಲಿ ಭಕ್ತರು ದೀಪ ಹಚ್ಚಲು ಕೋರ್ಟ್ ಅನುಮತಿ ನೀಡಿದೆ. ದರ್ಗಾದ ಜಾಗಕ್ಕೆ ಯಾವುದೇ ಧಕ್ಕೆಯಾಗದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ. ಈ ಆದೇಶವು ವಿವಾದಿತ ಜಾಗದ ಮೇಲೆ ಯಾವುದೇ ಹಕ್ಕುಗಳನ್ನು ಸ್ಥಾಪಿಸುವುದಿಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.