ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌; ಇನಿಂಗ್ಸ್‌ ಹಿನ್ನಡೆ ಭೀತಿಯಲ್ಲಿ ಭಾರತ

India vs New Zealand: ಕೆ.ಎಲ್ ರಾಹುಲ್(25) ಮತ್ತು ರಿಷಭ್ ಪಂತ್(23) ರನ್‌ಗಳು ಸ್ವಲ್ಪ ಪ್ರತಿರೋಧವನ್ನು ನೀಡಿತು, ಆದರೆ ನ್ಯೂಜಿಲೆಂಡ್‌ನ ಶಿಸ್ತಿನ ಬೌಲಿಂಗ್ ದಾಳಿಯು ನಿರಂತರ ಒತ್ತಡವನ್ನು ಹೇರುತ್ತಲೇ ಇತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಶೂನ್ಯ ಸುತ್ತಿದರೆ, ನಾಯಕ ಶುಭಮನ್‌ ಗಿಲ್‌ 17, ದೇವದತ್ತ ಪಡಿಕ್ಕಲ್‌ 21, ವಾಷಿಂಗ್ಟನ್‌ ಸುಂದರ್‌ 10 ಗಳಿಸಲಷ್ಟೇ ಶಕ್ತರಾದರು.

ಇನಿಂಗ್ಸ್‌ ಹಿನ್ನಡೆ ಭೀತಿಯಲ್ಲಿ ಭಾರತ

Kyle Jamieson -

Abhilash BC
Abhilash BC Nov 28, 2026 11:39 AM

ಕ್ರೈಸ್ಟ್‌ಚರ್ಚ್‌, ನ.28: ಇಲ್ಲಿನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಸಂಪೂರ್ಣ ಹಿಡಿತ ಸಾಧಿಸಿದೆ. ಶನಿವಾರ ನಡೆದ ಮೊದಲ ಇನ್ನಿಂಗ್ಸ್‌ನಲ್ಲಿ ಟಾಮ್ ಬ್ಲಂಡೆಲ್ ಅವರ 89 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ 356 ರನ್‌ಗಳನ್ನು ಕಲೆಹಾಕಿತು. ಗುರಿ ಬೆನ್ನಟ್ಟುತ್ತಿರುವ ಭಾರತ ದಿನದಾಟದ ಅಂತ್ಯಕ್ಕೆ ಭಾರತವು 6 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ಸಂಕಷ್ಟದಲ್ಲಿದೆ.

ಭಾರತದ ಅಗ್ರ ಆರು ಬ್ಯಾಟರ್‌ಗಳಲ್ಲಿ ಐವರು ಉತ್ತಮ ಆರಂಭವನ್ನು ಪಡೆದರೂ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಅಜಾಗರೂಕ ಹೊಡೆತಗಳಿಗೆ ಕೈಹಾಕಿ ವಿಕೆಟ್‌ಗಳನ್ನು ಒಪ್ಪಿಸುವ ಮೂಲಕ, ಅವರು ಆತಿಥೇಯ ತಂಡಕ್ಕೆ ಮೇಲುಗೈ ಒದಗಿಸಿಕೊಟ್ಟರು. ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್ ಮೊತ್ತಕ್ಕಿಂತ ಇನ್ನೂ 240 ರನ್‌ಗಳಷ್ಟು ಹಿಂದಿದೆ. 7 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿರುವ ಜುರೇಲ್‌ ಆಟದ ಮೇಲೆ ಭಾರತದ ಭವಿಷ್ಯ ಅಡಗಿದೆ. ಅವರು ಭಾನುವಾರ ದೊಡ್ಡ ಮೊತ್ತವೊಂದನ್ನು ಪೇರಿಸಿದರಷ್ಟೇ ಭಾರತ ಸಂಕಷ್ಟದಿಂದ ಪಾರಗಬಹುದು. ಜತೆಗೆ ಇವರಿಗೆ ಉತ್ತಮ ಜತೆಯಾಟದ ಸಾಥ್‌ ಕೂಡ ಬೇಕಿದೆ.

5 ವಿಕೆಟ್‌ ಕಿತ್ತು ನ್ಯೂಜಿಲೆಂಡ್‌ ನೆಲದಲ್ಲಿ ವಿಶೇಷ ದಾಖಲೆ ಬರೆದ ಆಕಾಶ್ ದೀಪ್

ಕೆ.ಎಲ್ ರಾಹುಲ್(25) ಮತ್ತು ರಿಷಭ್ ಪಂತ್(23) ರನ್‌ಗಳು ಸ್ವಲ್ಪ ಪ್ರತಿರೋಧವನ್ನು ನೀಡಿತು, ಆದರೆ ನ್ಯೂಜಿಲೆಂಡ್‌ನ ಶಿಸ್ತಿನ ಬೌಲಿಂಗ್ ದಾಳಿಯು ನಿರಂತರ ಒತ್ತಡವನ್ನು ಹೇರುತ್ತಲೇ ಇತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಶೂನ್ಯ ಸುತ್ತಿದರೆ, ನಾಯಕ ಶುಭಮನ್‌ ಗಿಲ್‌ 17, ದೇವದತ್ತ ಪಡಿಕ್ಕಲ್‌ 21, ವಾಷಿಂಗ್ಟನ್‌ ಸುಂದರ್‌ 10 ಗಳಿಸಲಷ್ಟೇ ಶಕ್ತರಾದರು. ನ್ಯೂಜಿಲೆಂಡ್‌ ಪರ ವೇಗಿಗಳಾದ ಜೇಕಬ್ ಡಫಿ ಮತ್ತು ಕೈಲ್ ಜೇಮಿಸನ್ ತಲಾ ಎರಡು ವಿಕೆಟ್‌ ಕಿತ್ತರು.



ಇದಕ್ಕೂ ಮುನ್ನ 5 ವಿಕೆಟ್‌ಗೆ 246 ರನ್‌ ಗಳಿಸಿದಲ್ಲಿಂದ ಆಟ ಮುಂದುವರಿಸಿದ ನ್ಯೂಜಿಲೆಂಡ್, ಟಾಮ್ ಬ್ಲಂಡೆಲ್ ಅವರ ದಿಟ್ಟ ಬ್ಯಾಟಿಂಗ್‌ ಹೋರಾಟದಿಂದ 116.3 ಓವರ್‌ಗಳಲ್ಲಿ 356 ರನ್‌ಗಳಿಗೆ ಆಲೌಟ್ ಆಯಿತು. ಬ್ಲಂಡೆಲ್ ವಿಕೆಟ್‌ ಬಿಳುದರೊಂದಿಗೆ ನ್ಯೂಜಿಲೆಂಡ್‌ ಆಲೌಟ್‌ ಆಯಿತು. 211 ಎಸೆತಗಳನ್ನು ಎದುರಿಸಿ, ದಿಟ್ಟ ಹೋರಾಟದೊಂದಿಗೆ 89 ರನ್ ಗಳಿಸಿ ನಿರ್ಗಮಿಸಿದರು. ಗ್ಲೆನ್ ಫಿಲಿಪ್ಸ್ 36 ರನ್‌ ಗಳಿಸಿದರು.

ಆಕಾಶ್ ದೀಪ್ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದರು. ಆದರೆ ಅನುಭವಿ ಜಸ್ಪ್ರೀತ್ ಬುಮ್ರಾ ಕನಿಷ್ಠ ಒಂದು ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ವಿದೇಶಿ ಟೆಸ್ಟ್ ಪಂದ್ಯವೊಂದರ ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಪಡೆಯಲು ವಿಫಲರಾದರು.

ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಐದನೇ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಆಕಾಶ್ ದೀಪ್ ಪಾತ್ರರಾದರು.